ರಣವೀರ್‌ ಅಲ್ಲ ಈ ನಟ ದೀಪಿಕಾರ ಫೇವರೇಟ್‌ ಅಂತೆ!

First Published | Oct 14, 2021, 3:33 PM IST

ದೀಪಿಕಾ ಪಡುಕೋಣೆ ( Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ಬಾಲಿವುಡ್‌ನ  (Bollywood) ಮೋಸ್ಟ್‌ ಲವ್ಡ್‌ ಹಾಗೂ ಫೇವರೇಟ್‌ ಕಪಲ್‌ಗಳಲ್ಲಿ ಒಬ್ಬರು. ಅನ್‌ಸ್ಕ್ರೀನ್‌ ಇರಲಿ ಅಥವಾ ಅಫ್‌ಸ್ಕ್ರೀನ್‌ ಆಗಲಿ  ಈ ಜೋಡಿಯನ್ನು ಒಟ್ಟಿಗೆ ನೋಡುವುದನ್ನು ಫ್ಯಾನ್ಸ್‌ ಇಷ್ಟ ಪಡುತ್ತಾರೆ. ದೀಪಿಕಾ ಒಮ್ಮೆ ತನ್ನ ನೆಚ್ಚಿನ ನಟ ಯಾರೆಂದು ಬಹಿರಂಗಪಡಿಸಿದರು. ಆದರೆ ಅದು ರಣವೀರ್ ಅಲ್ಲ ಎಂದರೆ ನಿಮಗೆ ಆಶ್ಚರ್ಯವಾಗುವುದು ಸಹಜ. ಆದರೆ ನಿಜ ದೀಪಿಕಾರ ಫೇವರೇಟ್‌ ಆಕ್ಟರ್‌ ರಣವೀರ್‌ ಸಿಂಗ್‌ ಅಲ್ಲವಂತೆ. ಮತ್ಯಾರು ಅದು?

ದೀಪಿಕಾ ಪಡುಕೋಣೆ ಮತ್ತು  ರಣವೀರ್ ಸಿಂಗ್ ಚಿತ್ರರಂಗದಲ್ಲಿ ಅತ್ಯಂತ ಪ್ರೀತಿಪಾತ್ರರು ಮತ್ತು ಅದ್ಭುತ ಜೋಡಿಗಳು. ಆನ್-ಸ್ಕ್ರೀನ್ ಕೆಮಿಸ್ಟ್ರಿ ಅಥವಾ ರೆಡ್ ಕಾರ್ಪೆಟ್ ಕ್ಷಣಗಳು ಅಥವಾ ಕ್ಯೂಟ್‌ PDA ಇರಲಿ, ಅವರಿಬ್ಬರನ್ನು ಒಟ್ಟಿಗೆ ನೋಡಲು ಅವರ ಅಭಿಮಾನಿಗಳು ಯಾವಾಗಲೂ ಕಾತುರರಾಗಿರುತ್ತಾರೆ.

ಹಾಗೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರಿಂದ ಹಿಂದೆ ಸರಿಯಲಿಲ್ಲ. ನಟರು ತಮ್ಮ ಸಂಬಂಧದ  ಮತ್ತು ಕ್ಯೂಟ್‌ ರೋಮ್ಯಾಂಟಿಕ್‌ ಮೂಮೆಂಟ್ಸ್‌ಗಳ ವಿವರಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ

Tap to resize

ಆದರೆ ದೀಪಿಕಾ ಪಡುಕೋಣೆ ಅವರ ನೆಚ್ಚಿನ ನಟ ರಣವೀರ್ ಸಿಂಗ್ ಅಲ್ಲ ಹಾಗೂ ಈ ವ್ಯಕ್ತಿಗಾಗಿ ಆಕೆಯ ಹೃದಯ ಮಿಡಿಯುತ್ತದೆ ಎಂದು ತಿಳಿದರೆ  ಆಶ್ಚರ್ಯವಾಗುತ್ತದೆ. ಒಮ್ಮೆ 2017 ರಲ್ಲಿ, ದೀಪಿಕಾ ಪಡುಕೋಣೆ ಅವರ ಪ್ರಸಿದ್ಧ ತೆಲುಗು ನಟ ಯಾರು ಎಂದು ಕೇಳಿದಾಗ, ಅವರು  'ಮಹೇಶ್ ಬಾಬು' ಎಂದು ಹೇಳಿದ್ದಾರೆ. 

ಆಕೆಯ ಉತ್ತರವನ್ನು ಕೇಳಿದ ನಂತರ ಎಲ್ಲರೂ ನಗಲು ಆರಂಭಿಸಿದರು. ಎಲ್ಲರೂ ಯಾಕೆ ನಗುತ್ತಿದ್ದಾರೆ ಎಂದು ಅವಳು ಕೇಳಿ 'ನನಗೆ ಮಹೇಶ್ ಬಾಬು ಗೊತ್ತಿಲ್ಲ ಎಂದು ನೀವು ಭಾವಿಸುತ್ತೀರಾ. ನಾವಿಬ್ಬರೂ ಒಂದೇ ಏಜೆನ್ಸಿಯಿಂದ ಪ್ರತಿನಿಧಿಸುತ್ತಿದ್ದೇವೆ.' ಎಂದು ದೀಪಿಕಾ ಹೇಳಿದ್ದರು.

ದೀಪಿಕಾ ಪಡುಕೋಣೆ ಮಹೇಶ್ ಬಾಬು ಜೊತೆ ತೆರೆ ಹಂಚಿಕೊಳ್ಳಲು ಬಯಸಿದಂತೆ ಕಾಣುತ್ತಿತ್ತು. ಅಂದ ಹಾಗೆ ಅನೇಕ ಬಾಲಿವುಡ್ ನಟಿಯರು ದಕ್ಷಿಣ  ಚಿತ್ರರಂಗದ ಈ ಹ್ಯಾಂಡ್‌ಸಮ್‌ ನಟನೊಂದಿಗೆ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. 

deepika padukone

ಬಾಲಿವುಡ್‌ಗೆ ಪ್ರವೇಶಿಸುವ ಮೊದಲು, ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್  ಮಹೇಶ್ ಬಾಬು ಅವರೊಂದಿಗೆ ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದರು, ಪ್ರಸ್ತುತ  ದೀಪಿಕಾ ಪಡುಕೋಣೆ ದಿ ಇಂಟರ್ನ್‌ನ ಹಿಂದಿ ರೂಪಾಂತರ, ಪಠಾಣ್, 83 ಹಾಗೂ ಅನನ್ಯಾ ಪಾಂಡೆ ಮತ್ತು ಸಿದ್ಧಾರ್ಥ್ ಚತುರ್ವೇದಿ ಜೊತೆ ಶಕುನ್ ಬಾತ್ರಾ ಅವರ ಇನ್ನೂ  ಹೆಸರಿಡದ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!