Esha Gupta: ಅಭಿಮಾನಿಗಳ ಮೆಚ್ಚುಗೆ ಗಳಿಸಿದ ನಟಿಯ ಹಾಟ್‌ ಲುಕ್‌!

Published : Jan 23, 2023, 05:41 PM IST

ಹಿಂದಿ ಸಿನಿಮಾ ರಂಗದ ಬೋಲ್ಡ್‌ ಮತ್ತು ಹಾಟ್‌ ನಟಿಯರ ಪಟ್ಟಿಯಲ್ಲಿ ಇಶಾ ಗುಪ್ತಾ (Esha Gupta) ಒಬ್ಬರು. ತನ್ನ ಮನಮೋಹಕ ಮತ್ತು ಬೋಲ್ಡ್‌ ಲುಕ್‌ಗಾಗಿ ಇಶಾ ಆಗಾಗ ಸದ್ದು ಮಾಡುತ್ತಿರುತ್ತಾರೆ. ಹೆಚ್ಚಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಾಟ್‌ ಫೋಟೋಗಳನ್ನು ಹಂಚಿಕೊಳುತ್ತಾರೆ. ಕೆಲವು ದಿನಗಳ ಹಿಂದೆ ಇಶಾ ಶೇರ್‌ ಮಾಡಿರುವ ಫೋಟೋಗಳಲ್ಲಿ ನಟಿ ಸಖತ್‌ ಹಾಟ್‌ ಹಾಗೂ ಫಿಟ್‌ ಆಗಿ ಕಾಣಿಸಿಕೊಂಡಿದ್ದಾರೆ.  

PREV
17
Esha Gupta: ಅಭಿಮಾನಿಗಳ ಮೆಚ್ಚುಗೆ ಗಳಿಸಿದ ನಟಿಯ ಹಾಟ್‌ ಲುಕ್‌!

ತನ್ನ ಅತ್ಯಾಕರ್ಷಕ ಫೋಟೋಶೂಟ್‌ಗಳಿಂದ ಅಭಿಮಾನಿಗಳನ್ನು ಮೆಚ್ಚಿಸಲು ಎಂದಿಗೂ ನಟಿ ಇಶಾ ಗುಪ್ತಾ ಹಿಂದೆ ಬಿದ್ದಿಲ್ಲ. ಆಗಾಗ  ಇವರು ತಮ್ಮ ಸುಂದರವಾದ ಫೋಟೋಗಳ ಮೂಲಕ  ಫ್ಯಾನ್ಸ್‌ ಅನ್ನು ರಂಜಿಸುತ್ತಾರೆ.

27

ಇಶಾ ಗುಪ್ತಾ ಬಾಲಿವುಡ್‌ನ ಅತ್ಯಂತ ಬೋಲ್ಡ್‌ ನಟಿಯರಲ್ಲಿ ಒಬ್ಬರು ಎನ್ನವುದರಲ್ಲಿ ಅನುಮಾನವೇ ಇಲ್ಲ. ಕಳೆದ ಕೆಲವು ದಿನಗಳ ಹಿಂದೆ ಇಶಾ ತಮ್ಮ ಕೆಲವು ಸೆಕ್ಸಿ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಇಶಾ ಇದನ್ನು ಮತ್ತೊಮ್ಮೆ ಪ್ರೂವ್‌ ಮಾಡಿದ್ದಾರೆ.

37

ಕಳೆದ ವಾರ ಇಶಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೋಶೂಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಇಶಾ ಮುಂಭಾಗದಲ್ಲಿ ಓಪನ್‌ ಇರುವ ಥೈ ಹೈ ಸ್ಲೀಟ್‌ನ ಟ್ಯೂಬ್‌ ಗೌನ್‌ ಧರಿಸಿದ್ದಾರೆ. 

47

ಶಂತನು ನಿಕಿಲ್‌ ಡಿಸೈನ್‌ ಮಾಡಿರುವ ರಾಯಲ್‌ ಬ್ಲ್ಯೂ ಗೌನ್‌ನಲ್ಲಿ ನಟಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇಶಾರ ಈ ಫೋಟೋಗಳನ್ನು ಫ್ಯಾನ್ಸ್‌ ಸಾಕಷ್ಷು ಮೆಚ್ಚಿಕೊಂಡಿದ್ದಾರೆ ಮತ್ತು ಕಾಮೆಂಟ್‌ ಹಾಗೂ ಇಮೋಜಿಗಳ ಮೂಲಕ ತಮ್ಮ ಪ್ರೀತಿ ತೋರಿಸಿದ್ದಾರೆ.

57

ಇಶಾ ಗುಪ್ತಾ ಅವರು ಬೋಲ್ಡ್‌  ಅವತಾರದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇಶಾ ಮೂರು ದಿನಗಳ ಹಿಂದೆ ಹೂವಿನ ಪ್ರಿಟೆಂಡ್‌ ಡ್ರೆಸ್‌ ಧರಿಸಿರುವ ಕೆವು ಕ್ಯೂಟ್‌  ಫೋಟೋಗಳನ್ನು ಶೇರ್‌ ಮಾಡಿಕೊಂಡು ಎಲ್ಲರಿಗೂ ಸರ್ಪ್ರೈಸ್‌ ನೀಡಿದ್ದಾರೆ.

67

ಎಮ್ರಾನ್ ಹಶ್ಮಿ ಜೊತೆ ನಟಿಸಿರುವ 'ಜನ್ನತ್ 2' ಚಿತ್ರದೊಂದಿಗೆ 2012 ರಲ್ಲಿ ಇಶಾ ಗುಪ್ತಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಕ್ಜ ನಂತರ ಇಶಾ ಗುಪ್ತಾ ಅನೇಕ ದೊಡ್ಡ-ಬಜೆಟ್ ಬಾಲಿವುಡ್ ಚಿತ್ರಗಳಾದ ಬಡ್ಶಾಹೊ, ಟೋಟಲ್  ಧಮಾಲ್, ರಾಜ್ 3, ಕಮಾಂಡೋ 2 ಮತ್ತು ರುಸ್ಟೊಮ್, ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

77

ಸಿನಿಮಾದ ನಂತರ. ಇಶಾ ಗುಪ್ತಾ ಇತ್ತೀಚೆಗೆ ಒಟಿಟಿಯಲ್ಲೂ (OTT) ತನ್ನ ಅದ್ಭುತ ನಟನಾ ಪ್ರದರ್ಶನವನ್ನು ತೋರಿಸಿದ್ದಾರೆ. ಬಾಬಿ ಡಿಯೋಲ್ ಅವರ ಹಿಟ್ ವೆಬ್ ಸರಣಿ 'ಆಶ್ರಮ್ 3' ನಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories