ಬಿಕಿನಿ ಧರಿಸಿ ಬೀಚ್‌ಲ್ಲಿ ನಿಂತ ರೈ ಲಕ್ಷ್ಮಿ; ಹೊಸ ವರ್ಷಕ್ಕೆ ಬೆಂಕಿ ಪೋಸ್ ಎಂದ ಫ್ಯಾನ್ಸ್

First Published Jan 23, 2023, 3:00 PM IST

ಕರ್ನಾಟಕ ಮೂಲದ ಸೌತ್ ಖ್ಯಾತ ನಟಿ ರೈ ಲಕ್ಷ್ಮಿ ಸದ್ಯ ತೆಲುಗು ಮತ್ತು ತಮಿಳುನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.  ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ರೈ ಲಕ್ಷ್ಮಿ ಹೊಸ ವರ್ಷಕ್ಕೆ ಮತ್ತಷ್ಟು ಹಾಟ್ ಆಗಿದ್ದಾರೆ. 

ಕರ್ನಾಟಕ ಮೂಲದ ಸೌತ್ ಖ್ಯಾತ ನಟಿ ರೈ ಲಕ್ಷ್ಮಿ ಸದ್ಯ ತೆಲುಗು ಮತ್ತು ತಮಿಳುನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ರೈ ಲಕ್ಷ್ಮಿ ಹೊಸ ವರ್ಷಕ್ಕೆ ಮತ್ತಷ್ಟು ಹಾಟ್ ಆಗಿದ್ದಾರೆ. ಭರ್ಜರಿಯಾಗಿ ಹೊಸ ಸಂಭ್ರಮಿಸಿರುವ ರೈ ಲಕ್ಷ್ಮಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಬಿಕಿನಿ ಧರಿಸಿ ಬೀಚ್ ನಲ್ಲಿ ನಿಂತಿರುವ ರೈ ಲಕ್ಷ್ಮಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿ ಬೆಂಕಿಯನ್ನು ಕಂಡುಕೊಳ್ಳಿ ಎಂದು ಹೇಳಿದ್ದಾರೆ. ರೈ ಲಕ್ಷ್ಮಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. 
 

ಹೊಸ ವರ್ಷದ ಆಚರಣೆಗೆ ರೈ ಲಕ್ಷ್ಮಿ ಆಯ್ಕೆ ಮಾಡಿಕೊಂಡ ಜಾಗ ಬೀಚ್. ಭಾರತದ ಬಹುತೇಕ ಸ್ಟಾರ್ ವಿದೇಶಕ್ಕೆ ಹಾರಿದ್ದರು. ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ರೈ ಲಕ್ಷ್ಮಿ ಕೂಡ ಭರ್ಜರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. 
 

ನೀಲಿ ಮತ್ತು ಹೂವಿನ ಡಿಸೈನ್ ಇರುವ ಬಿಕಿನಿ ಧರಿಸಿರುವ ರೈ ಲಕ್ಷ್ಮಿ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸಿವೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿರುವ ರೈ ಲಕ್ಷ್ಮಿ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

2005ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ  ರೈ ಲಕ್ಷಿ ಸೌತ್ ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸೌತ್ ನಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕ ಮೂಲದ ನಟಿ ರೈ ಲಕ್ಷ್ಮಿ ತಮಿಳು ಸಿನಿಮಾರಂಗದ ಮೂಲಕ ಅಭಿಮಾನಿಗಳ ಮುಂದೆ ಬಂದರು. 

ಕನ್ನಡದಲ್ಲಿ ರೈ ಲಕ್ಷ್ಮಿ ವಾಲ್ಮಿಕಿ, ಸ್ನೇಹನ ಪ್ರೀತಿನ, ಮಿಂಚಿನ ಓಟ  ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೈ ಲಕ್ಷ್ಮಿ ಕನ್ನಡದಲ್ಲಿ ಕೊನೆಯದಾಗಿ ಝಾನ್ಸಿ ಐ ಪಿ ಎಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

ಅಂದಹಾಗೆ ರೈ ಲಕ್ಷ್ಮಿ ಕೊನೆಯದಾಗಿ ದಿ ಲೆಜೆಂಡ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.  2022ರಲ್ಲಿ ಲೆಜೆಂಡ್ ಸಿನಿಮಾ ರಿಲೀಸ್ ಆಗಿದ್ದು ಅನೇಕ ಸ್ಟಾರ್ ನಟಿಸಿದ್ದಾರೆ. ಊರ್ವಶಿ ರೌಟೇಲಾ ಕೂಡ ದಿ ಲೆಜೆಂಡ್ ನಲ್ಲಿ ಮಿಂಚಿದ್ದರು. ಸದ್ಯ ಆನಂದ ಭೈರವಿ, ಗ್ಯಾಂಗ್‌ಸ್ಟರ್-2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 
 

click me!