ಗಾಂಧಿ ಗೋಡ್ಸೆ ಸ್ಕ್ರೀನಿಂಗ್: ರೇಖಾ ಕಾಲಿಗೆ ಬಿದ್ದು ಆಶಿರ್ವಾದ ಪಡೆದ ತನೀಶಾ ಸಂತೋಷಿ

Published : Jan 23, 2023, 02:42 PM IST

ನಿರ್ದೇಶಕ ರಾಜಕುಮಾರ್ ಸಂತೋಷಿ ಅವರ 'ಗಾಂಧಿ ಗೋಡ್ಸೆ ಏಕ್ ಯುದ್ಧ್'' ಚಿತ್ರ ಜನವರಿ 26 ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಮುಂಬೈನಲ್ಲಿ ವಿಶೇಷ ಪ್ರದರ್ಶನ ನಡೆದಿದ್ದು, ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ ಕೂಡ ಆಗಮಿಸಿದ್ದರು. ಈ ಸಮಯದ ಫೋಟೋಗಳು ಸಖತ್‌ ವೈರಲ್‌ ಆಗಿವೆ. 

PREV
19
ಗಾಂಧಿ ಗೋಡ್ಸೆ  ಸ್ಕ್ರೀನಿಂಗ್: ರೇಖಾ ಕಾಲಿಗೆ ಬಿದ್ದು ಆಶಿರ್ವಾದ ಪಡೆದ ತನೀಶಾ ಸಂತೋಷಿ

ಕಿಕ್ಕಿರಿದ ಸಭೆಯಲ್ಲಿ ರೇಖಾ ಅವರ ಪಾದಗಳನ್ನು ಮುಟ್ಟಿ ತನೀಶಾ ನಮಸ್ಕರಿಸಿದರು. ತಕ್ಷಣ ರೇಖಾ ತನೀಶಾರನ್ನು ಎರಡೂ ಕೈಗಳಿಂದ ಹಿಡಿದು ತಬ್ಬಿಕೊಂಡು ಆಶೀರ್ವದಿಸಿದರು. 

29

ನಟಿ ತನೀಶಾ ಸಂತೋಷಿಯನ್ನು ಕಿಯಾರಾ ಅಡ್ವಾಣಿಯ ನಕಲು ಎಂದು ಕರೆಯಲಾಗುತ್ತದೆ. ಕಾರ್ಯಕ್ರಮದ ವೇಳೆ ತನಿಶಾ ಮರೂನ್ ಬಣ್ಣದ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. 

39

ಗಾಂಧಿ ಗೋಡ್ಸೆ' ಚಿತ್ರದ ಮೂಲಕ ತನಿಶಾ ಸಂತೋಷಿ  ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ತನಿಶಾ ಜಾನ್ವಿ ಮತ್ತು ಖುಷಿ ಕಪೂರ್ ಅವರ ಬಾಲ್ಯದ ಗೆಳತಿ.

49

ರಾಜ್‌ಕುಮಾರ್ ಸಂತೋಷಿ ಅವರ ಪುತ್ರಿ ತನಿಶಾ ಸ್ಕ್ರೀನಿಂಗ್ ಸಮಯದಲ್ಲಿ ರೇಖಾ ಅವರೊಂದಿಗೆ ಪೋಸ್ ನೀಡಿದ್ದಾರೆ. ಗಾಂಧಿ-ಗೋಡ್ಸೆ ಚಿತ್ರದಲ್ಲಿ ತನಿಶಾ ಸುಷ್ಮಾ ಪಾತ್ರವನ್ನು ನಿರ್ವಹಿಸಿದ್ದಾರೆ 

59

ತನಿಶಾ ಸಂತೋಷಿ ಅವರ ತಂದೆ ರಾಜ್‌ಕುಮಾರ್ ಸಂತೋಷಿ ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು. ಮತ್ತು ಅವರ ತಾಯಿಯ ಹೆಸರು ಮನಿತಾ ಸಂತೋಷಿ. 
 

69

 ನಟಿ ಮಹಿಮಾ ಚೌಧರಿ ಕೂಡ 'ಗಾಂಧಿ ಗೋಡ್ಸೆ' ಚಿತ್ರ ಪ್ರದರ್ಶನದಲ್ಲಿ ಕಾಣಿಸಿಕೊಂಡರು. ಮಹಿಮಾ ಶಾರುಖ್ ಖಾನ್ ಜೊತೆ 'ಪರ್ದೇಸ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. 


 

79

ಚಿತ್ರದ ಪ್ರದರ್ಶನದ ವೇಳೆ ಶ್ರೀದೇವಿ ಅವರ ಕಿರಿಯ ಮಗಳು ಖುಷಿ ಕಪೂರ್ ಕೂಡ ಕಾಣಿಸಿಕೊಂಡಿದ್ದರು. ಖುಷಿ ಕಪ್ಪು ಟಾಪ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡರು. ಆದರೆ, ಆಕೆಯ ಅಕ್ಕ ಜಾನ್ವಿ ಕಪೂರ್ ಇದರಲ್ಲಿ ಭಾಗವಹಿಸಲಿಲ್ಲ

89

ಗಾಂಧಿ ಗೋಡ್ಸೆ ಏಕ್ ಯುದ್ಧ್ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಹಿಂದಿನ ನಟಿ ಪೂನಂ ಧಿಲ್ಲೋನ್ ಕೂಡ ಭಾಗವಹಿಸಿದ್ದರು. ಈ ವೇಳೆ ಪೂನಂ ಬಿಳಿ  ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಪೂನಂ ತನಿಶಾ ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

99
Gandhi Godse screening

ನಿರ್ದೇಶಕ ರಾಜಕುಮಾರ್ ಸಂತೋಷಿ ಅವರ 'ಗಾಂಧಿ ಗೋಡ್ಸೆ ಏಕ್ ಯುದ್ಧ್'' ಚಿತ್ರ ಜನವರಿ 26 ರಂದು ಬಿಡುಗಡೆಯಾಗುತ್ತಿದೆ ಮತ್ತು ಈ ಮೂಲಕ ಅವರ ಮಗಳು ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ

Read more Photos on
click me!

Recommended Stories