Aashram 3ನ ಯಶಸ್ಸಿನ ನಂತರ ಇನ್ನಷ್ಟೂ ಬೋಲ್ಡ್‌ ಆಗಿದ್ದಾರೆ Esha Gupta

First Published | Jun 8, 2022, 7:09 PM IST

ಬಾಬಿ ಡಿಯೋಲ್ (Babby Deol) ಅವರ ವೆಬ್ ಸರಣಿ ಆಶ್ರಮ್ 3 OTT ಲ್ಲಿ ಸದ್ದು ಮಾಡುತ್ತಿದೆ. ಕಳೆದ ಒಂದೂವರೆ ದಿನಗಳಲ್ಲಿ ಈ ವೆಬ್ ಸರಣಿಯನ್ನು 100 ಮಿಲಿಯನ್ ಬಾರಿ ನೋಡಲಾಗಿದೆ ಮತ್ತು ಇನ್ನೂ ಪ್ರೇಕ್ಷಕರು ಅದರ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ.  ಈ ಧಾರಾವಾಹಿಯಲ್ಲಿ ಬಾಬಿ ಜೊತೆ ಇಶಾ ಗುಪ್ತಾ (Esha Gupta) ಪ್ರಮುಖ ಪಾತ್ರದಲ್ಲಿದ್ದಾರೆ. ಅಷ್ಟೇ ಅಲ್ಲ, ಬಾಬಿ ಮತ್ತು ಇಶಾ ನಡುವಿನ ಹಲವು ಇಂಟಿಮೇಟ್ ದೃಶ್ಯಗಳನ್ನೂ ತೋರಿಸಲಾಗಿದೆ. ಸರಣಿಯಲ್ಲಿ, ಇಶಾ ಸೋನಿಯಾ ಪಾತ್ರವನ್ನು ನಿರ್ವಹಿಸುತ್ತಾ ಆಶ್ರಮ 3 ಹಿಟ್‌  ನಡುವೆ ಇಶಾ ಗುಪ್ತಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋಗಳು ಸಖತ್‌ ವೈರಲ್‌ ಆಗಿವೆ.
 

ಕೆಲವು ಗಂಟೆಗಳ ಹಿಂದೆ, ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆಕಾಶ-ಬಣ್ಣದ ಟೂ ಪೀಸ್‌ ಬಿಕಿನಿಯಲ್ಲಿನ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದನ್ನು ನೋಡಿ ಅಭಿಮಾನಿಗಳ ಹಾರ್ಟ್‌ ಬೀಟ್‌ ತಪ್ಪಿದೆ. ಅಂದಹಾಗೆ, ಇಶಾ ಅವರ ಇನ್‌ಸ್ಟಾಗ್ರಾಮ್ ಅವರ ಬೋಲ್ಡ್ ಫೋಟೋಗಳಿಂದ ತುಂಬಿದೆ

ಇಶಾ ಗುಪ್ತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಬಿಕಿನಿ ಫೋಟೋದಲ್ಲಿ, ಅವರು ಸಮುದ್ರ ತೀರದಲ್ಲಿ ಸನ್‌ಬಾತ್ ಮಾಡುತ್ತಿರುವುದನ್ನು ಕಾಣಬಹುದು. ಅವರ ಫೋಟೋಗಳಿಗೆ ಅಭಿಮಾನಿಗಳು  ತೀವ್ರವಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ.

Tap to resize

ಸೆಕ್ಸಿಯೆಸ್ಟ್ ಮಹಿಳೆ ಎಂದು ಇಶಾ ಗುಪ್ತಾ ಅವರ ಫೋಟೋಗೆ ಕಾಮೆಂಟ್ ಮಾಡುತ್ತಾ, ಒಬ್ಬರು ಬರೆದಿದ್ದಾರೆ. ವರ್ಲ್ಡ್‌ ಕ್ಲಾಸ್‌  ಹಾಟೆಸ್ಟ್ ಫಿಗರ್ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.ಅದೇ ಸಮಯದಲ್ಲಿ, ಕೆಲವರು ಹಾಟ್, ಬೋಲ್ಡ್ ಮತ್ತು ಗಾರ್ಜಿಯಸ್ ಎಂದೂ ಕರೆಯುತ್ತಾರೆ.

36 ವರ್ಷದ ಇಶಾ ಗುಪ್ತಾ 2007 ರಲ್ಲಿ ಫೆಮಿನಾ ಮಿಸ್ ಇಂಡಿಯಾದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದರು. ಅದಕ್ಕೂ ಮುನ್ನ ಮಾಡೆಲಿಂಗ್ ಕೂಡ ಮಾಡುತ್ತಿದ್ದರು. ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್ ಪ್ರಶಸ್ತಿಯನ್ನು ಗೆದ್ದ ನಂತರ, ಇಶಾ ಗುಪ್ತಾ ಶೀಘ್ರದಲ್ಲೇ ಚಲನಚಿತ್ರಗಳಿಂದ ಆಫರ್‌ಗಳನ್ನು ಪಡೆಯಲು ಪ್ರಾರಂಭಿಸಿದರು. 

ಇಶಾ ಗುಪ್ತಾ ಅವರ ಚಲನಚಿತ್ರ ವೃತ್ತಿಜೀವನವು ವಿಶೇಷವಾದದ್ದೇನೂ ಅಲ್ಲ. ಅವರು ಕೆಲವು ಚಿತ್ರಗಳಲ್ಲಿ ನಟಿಸಿದರು, ಆದರೆ ಅವರು ಉದ್ಯಮದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಲಿಲ್ಲ.

ಅವರು 2012 ರಲ್ಲಿ ಜನ್ನತ್ 2 ನೊಂದಿಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷದಲ್ಲಿ, ನಿರ್ದೇಶಕ ಪ್ರಕಾಶ್ ಝಾ ಈಶಾ ಗುಪ್ತಾ ಅವರಿಗೆ ಚಕ್ರವ್ಯೂಹ ಚಲನಚಿತ್ರವನ್ನು ನೀಡಿದರು. ಅವರು ಚಿತ್ರದಲ್ಲಿ ಅರ್ಜುನ್ ರಾಂಪಾಲ್ ಎದುರು ಜೋಡಿಯಾಗಿದ್ದರು. ಆಶ್ರಮ 3 ವೆಬ್‌ ಸರಣಿಯ ನಿರ್ದೇಶಕರು ಕೂಡ ಝಾ 

ashram

ಗೋರಿ ತೇರೆ ಪ್ಯಾರ್ ಮೇ, ರುಸ್ತಂ, ಕಮಾಂಡೋ 2, ಬಾದ್‌ಶಾಹೋ, ಪಲ್ಟನ್, ಟೋಟಲ್ ಧಮಾಲ್ ಮುಂತಾದ ಚಿತ್ರಗಳಲ್ಲಿ ಇಶಾ ಗುಪ್ತಾ ಕೆಲಸ ಮಾಡಿದ್ದಾರೆ. ಅವರ ಮುಂಬರುವ ಚಿತ್ರಗಳು ದೇಸಿ ಮ್ಯಾಜಿಕ್ ಮತ್ತು ಹೇರಾ ಫೆರಿ 3. 

Latest Videos

click me!