ದುಲ್ಹನಿಯಾ 3- ಆಲಿಯಾ ಬದಲಿಗೆ ಜಾನ್ವಿ; ತಾಯಿ ಆದ್ಮೇಲೆ ರಣಬೀರ್ ಹೆಂಡ್ತಿಗೆ ಕಡಿಮೆ ಆಯ್ತಾ ಡಿಮ್ಯಾಂಡ್?

Published : Jan 04, 2024, 05:41 PM IST

ದುಲ್ಹನಿಯಾ 3 ( Dulhania ) ಚಿತ್ರದಲ್ಲಿ ಆಲಿಯಾ ಭಟ್ (Alia Bhatt)  ಬದಲಿಗೆ ಜಾನ್ವಿ ಕಪೂರ್ (Janhvi Kapoor), ವರುಣ್ ಧವನ್ (Varun Dhawan) ಜೊತೆ ನಟಿಸಲಿದ್ದಾರೆ ಎಂದು ವರದಿಗಳು ಹೊರ ಬಂದಿವೆ. ಜಾನ್ವಿ ಕಪೂರ್ ಫ್ರಾಂಚೈಸಿಯ ಹೊಸ 'ದುಲ್ಹನಿಯಾ' ಎಂದು ನಂಬಲಾಗಿದೆ. ಆಲಿಯಾ ಭಟ್ ಅವರ ಬದಲಿಗೆ ಜಾನ್ವಿ ಜಾಗ ಪಡೆದಿರುವ ವರದಿಗಳು ಹರಿದಾಡುತ್ತಿವೆ.  ಹಾಗಾದರೆ ತಾಯಿಯಾದ ನಂತರ ಆಲಿಯಾರ ಡಿಮ್ಯಾಂಡ್‌ ಕಡಿಮೆಯಾಗಿದೆಯೇ? ಈ ಬದಲಾವಣೆಗೆ ಕಾರಣವೇನು?

PREV
18
 ದುಲ್ಹನಿಯಾ 3- ಆಲಿಯಾ ಬದಲಿಗೆ ಜಾನ್ವಿ; ತಾಯಿ ಆದ್ಮೇಲೆ ರಣಬೀರ್ ಹೆಂಡ್ತಿಗೆ ಕಡಿಮೆ ಆಯ್ತಾ ಡಿಮ್ಯಾಂಡ್?

ತಾಜಾ ವರದಿಯ ಪ್ರಕಾರ, ವರುಣ್ ಧವನ್ ಮತ್ತು ಆಲಿಯಾ ಭಟ್ 'ದುಲ್ಹನಿಯಾ 3' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ವರುಣ್ ಮತ್ತು ಆಲಿಯಾ 'ಹಂಪ್ಟಿ ಶರ್ಮಾ ಕಿ ದುಲ್ಹನಿಯಾ' ಮತ್ತು 'ಬದ್ರಿನಾಥ್ ಕಿ ದುಲ್ಹನಿಯಾ' ಚಿತ್ರಗಳಲ್ಲಿ ಕಾಣಿಸಿಕೊಂಡರು. 

28

ಆಲಿಯಾ ಅವರ ಬದಲಿ ಅಸ್ಪಷ್ಟವಾಗಿದ್ದರೂ, ಆಲಿಯಾ ಫ್ರಾಂಚೈಸಿಗೆ ಹಿಂತಿರುಗುವುದಿಲ್ಲ ಮತ್ತು ಧರ್ಮ ಪ್ರೊಡಕ್ಷನ್ಸ್ ಈಗಾಗಲೇ ಹೊಸ ತಾರೆಯನ್ನು ಸೆಲೆಕ್ಟ್ ಮಾಡಿದೆ ಎಂದು ವರದಿಯಾಗಿದೆ. 

38

ವದಂತಿಗಳ ಪ್ರಕಾರ, ಮೂರನೇ ಚಿತ್ರದಲ್ಲಿ ಆಲಿಯಾ ಸ್ಥಾನವನ್ನು ಜಾನ್ವಿ ಕಪೂರ್ ತೆಗೆದುಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಜಾನ್ವಿ ಫ್ರಾಂಚೈಸಿಯ ಹೊಸ 'ದುಲ್ಹನಿಯಾ' ಆಗಲಿದ್ದಾರೆ. 

48

ಅಲಿಯಾ ಏಕೆ ಚಿತ್ರದ ಸೀಕ್ವೆಲ್‌ಗೆ  ಮರಳುತ್ತಿಲ್ಲ ಎಂಬುದು ತಿಳಿದು ಬಂದಿಲ್ಲ. ಆದರೆ , 2024ರಲ್ಲಿ ಅವರ ತೀವ್ರವಾದ ವೇಳಾಪಟ್ಟಿಯು  ದುಲ್ಹನಿಯಾ 3  ಯೋಜನೆಗಳಿಗೆ ಕ್ಲ್ಯಾಷ್ ಆಗಬಹುದು ಎನ್ನಲಾಗುತ್ತಿದೆ.

58

ಚಿತ್ರದ ಪ್ರಿ-ಪ್ರೊಡಕ್ಷನ್ ಈಗಾಗಲೇ ಆರಂಭವಾಗಿದ್ದು, ಮುಂದಿನ ತಿಂಗಳಲ್ಲಿ ನಿರ್ಮಾಣ ಆರಂಭವಾಗಲಿದೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಕರಣ್ ಜೋಹರ್ ಈ ವರದಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ. 

68

ಕಾಫಿ ವಿತ್ ಕರಣ್ 8 ರ ಇತ್ತೀಚಿನ ಸಂಚಿಕೆಯಲ್ಲಿ ಅವರು ಮತ್ತು ಜಾನ್ವಿ  ಬಹಿರಂಗಪಡಿಸಲು ಅನುಮತಿಯಿಲ್ಲದ ಮಹತ್ವದ ಯೋಜನೆಯಲ್ಲಿ ಜಾನ್ವಿ ಕೆಲಸ ಮಾಡುತ್ತಿದ್ದಾರೆ ಎಂದು ಕರಣ್ ಸುಳಿವು ನೀಡಿದ ಕೆಲವೇ ಗಂಟೆಗಳ ನಂತರ ಈ ವರದಿಗಳು ಹೊರಬಂದಿವೆ

78

ವರುಣ್ ಮತ್ತು ಜಾನ್ವಿ ಈ ಹಿಂದೆ 'ಬವಾಲ್' ಚಿತ್ರದಲ್ಲಿ ಕೆಲಸ ಮಾಡಿದ್ದರು. ಇದಲ್ಲದೆ ವರುಣ್ ಅವರು ಅಟ್ಲೀ ಅವರೊಂದಿಗೆ 'ತೇರಿ' ರಿಮೇಕ್‌ನಲ್ಲಿ ಕೆಲಸ ಮಾಡಲಿದ್ದಾರೆ ಮತ್ತು ಸಮಂತಾ ರುತ್ ಪ್ರಭು ಅವರೊಂದಿಗೆ 'ಸಿಟಾಡೆಲ್ ಇಂಡಿಯಾ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

88

ಜಾನ್ವಿ ಕಪೂರ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಟೈಗರ್ ಶ್ರಾಫ್ ಅವರೊಂದಿಗೂ ಒಂದು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು 'ದೇವರ' ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಜೊತೆಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
'

Read more Photos on
click me!

Recommended Stories