ಮದುವೆ ವಾರ್ಷಿಕೋತ್ಸವದ ರೊಮ್ಯಾಂಟಿಕ್‌ ಹಾಲಿಡೇ ಬಗ್ಗೆ ಬಾಯಿ ಬಿಟ್ಟ ದೀಪಿಕಾ ಪಡುಕೋಣೆ

Published : Jan 04, 2024, 05:26 PM IST

ಬಾಲಿವುಡ್‌ನ ಫೇಮಸ್‌ ಕಪಲ್‌ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh)  ನವೆಂಬರ್ 14, 2023ರಂದು ತಮ್ಮ 5ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ವಿಶೇಷ ದಿನದಂದು ಪತಿಯೊಂದಿಗೆ ದೂರದೂರಲ್ಲಿದ್ದರು. ದೀಪಿಕಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರ ಆನಿವರ್ಸಿರಿ ಹಾಲಿಡೇ ಬಗ್ಗೆ ತೆರೆದುಕೊಂಡಿದ್ದಾರೆ.

PREV
17
ಮದುವೆ ವಾರ್ಷಿಕೋತ್ಸವದ ರೊಮ್ಯಾಂಟಿಕ್‌ ಹಾಲಿಡೇ ಬಗ್ಗೆ ಬಾಯಿ ಬಿಟ್ಟ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ನವೆಂಬರ್‌ನಲ್ಲಿ 5 ವರ್ಷಗಳ ದಾಂಪತ್ಯವನ್ನು ಆಚರಿಸಿದರು ಮತ್ತು ಅವರು ಹಾಲಿಡೇಯನ್ನು ಎಂಜಾಯ್‌ ಮಾಡಿದ್ದನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
 

27

ಐದನೇ ವಾರ್ಷಿಕೋತ್ಸವವನ್ನು ಆಚರಿಸಲು ಬೆಲ್ಜಿಯಂನಲ್ಲಿದ್ದರು. ಅಭಿಮಾನಿಗಳೊಂದಿಗಿನ ಅವರ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಅವರು ಬ್ರಸೆಲ್ಸ್ ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ ಮತ್ತು ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ.

37

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ದೀಪಿಕಾ ಈ ರಜೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಟಿಯನ್ನು ಅವರ ರಜಾದಿನದ ಬಗ್ಗೆ ಕೇಳಿದಾಗ 'ಸಾಮಾಜಿಕ ಮಾಧ್ಯಮ ಮತ್ತು ವಿಷಯವು ಗಡಿಗಳನ್ನು ಮೀರುವ ರೀತಿಯಲ್ಲಿ ನಾವು ಪ್ರಯಾಣಿಸುವಾಗ ಸಂಪೂರ್ಣವಾಗಿ ವಿವೇಚನೆಯಿಂದ ಇರಲು ಇನ್ನು ಮುಂದೆ ಸಾಧ್ಯವಿಲ್ಲ ಎಂದು  ಅವರು ವೋಗ್ ಸಿಂಗಾಪುರಕ್ಕೆ ಹೇಳಿದರು.

47

'ಆದರೆ ನಾವು ಸಾಕಷ್ಟು ಕ್ಷಣಗಳನ್ನು ಜೊತೆಯಾಗಿ ಅನಂದಿಸಲು ಟೈಮ್ ಮ್ಯಾನೇಜ್‌ ಮಾಡುತ್ತೇವೆ, ಸಹಜವಾಗಿ, ನಮ್ಮ ಕೆಲಸಕ್ಕಾಗಿ ನಮ್ಮ ಬೇರೆ ದೇಶಗಳಲ್ಲಿ ಗುರುತಿಸಲ್ಪಟ್ಟರೆ ಯಾರೂ ದೂರು ನೀಡುವುದಿಲ್ಲ. ಇದು ಯಾವಾಗಲೂ ಚೆಂದದ ಫೀಲ್ ಕೊಡುತ್ತದೆ' ಎಂದು ದೀಪಿಕಾ ಹೇಳಿಕೊಂಡಿದ್ದಾರೆ.


 

57

'ಅದೇ ಸಂದರ್ಶನದಲ್ಲಿ ದೀಪಿಕಾ ರಣವೀರ್‌ನೊಂದಿಗಿನ ತನ್ನ ಸಂಬಂಧ ಈ ಐದು ವರ್ಷಗಳಲ್ಲಿ ಹೇಗೆ ವಿಕಸನಗೊಂಡಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಕಾಲಾನಂತರದಲ್ಲಿ ನಾವು ಹೇಗೆ ಒಂದು ಯೂನಿಟ್‌ ಆಗಿ ಮಾರ್ಪಟ್ಟಿದ್ದೇವೆ ಎಂಬುದನ್ನು ನೋಡಲು ಆಕರ್ಷಕ ಮತ್ತು ಸುಂದರ,' ಎಂದು ಅವರು ಹೇಳಿದರು.

67

'ನಾವು ತುಂಬಾ ಭಿನ್ನವಾಗಿರುತ್ತಿದ್ದೆವು, ನಾನು ಒಂದು ವಿಪರೀತ ಮತ್ತು ರಣವೀರ್ ಇನ್ನೊಂದು. ನಾವು ಒಬ್ಬರನ್ನೊಬ್ಬರು ಸೇರಿಕೊಂಡು ಒಟ್ಟಿಗೆ ಬೆಳೆದಿದ್ದೇವೆ. ಅವರಿಗೆ ಅವರು ಪರಸ್ಪರ ಸಮಯ ಕಳೆಯುವುದು ಬಹಳ ಮುಖ್ಯ. ಆದರೆ ಅವರು ತಮ್ಮ ಪೋಷಕರು ಮತ್ತು ಸಹೋದರಿಯರೊಂದಿಗೆ ಸಮಯ ಕಳೆಯುವುದು ಅಷ್ಟೇ ಮುಖ್ಯ ಎಂದು ದೀಪಿಕಾ ಹೇಳಿದರು. ಅವುರು ಎಂಟು ಜನರ ಒಂದು ಕುಟುಂಬವಾಗಿರುವುದು ಸುಂದರವಾಗಿದೆ,' ಎಂದು ನಟಿ ಹೇಳಿದರು.


 

77

ಅದೇ ಸಮಯದಲ್ಲಿ ದೀಪಿಕಾ ಪೋಷಕರಾಗುವ ಬಗ್ಗೆಯೂ ತೆರೆದುಕೊಂಡರು. ಅವರು  ಮತ್ತು ರಣವೀರ್ ಇಬ್ಬರೂ ಮಕ್ಕಳನ್ನು ಪ್ರೀತಿಸುತ್ತಾರೆ ಹಾಗೂ ಅವರು ತಮ್ಮ ಕುಟುಂಬವನ್ನು ವಿಸ್ತರಿಸುವ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ಬಹಿರಂಗಪಡಿಸಿದರು, 

Read more Photos on
click me!

Recommended Stories