Published : Jun 05, 2020, 08:12 PM ISTUpdated : Jun 06, 2020, 04:37 PM IST
ಬಾಲಿವುಡ್‌ನ ಕಪಲ್‌ಗಳಾದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಇತ್ತೀಚೆಗೆ ತಮ್ಮ 13ನೇ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ 20 ರಂದು ಆಚರಿಸಿಕೊಂಡರು. ಈ ಜೋಡಿ ಫ್ಯಾನ್ಸ್ ಫೇವರೇಟ್ ಹಾಗೂ ಬಿ ಟೌನ್‌ನ ಪವರ್‌ಫುಲ್ ಕಪಲ್ ಇದು. ಇವರ ಪರ್ಸನಲ್ ಲೈಫ್ ಸದಾ ಮೀಡಿಯಾಗಳಿಗೆ ಆಹಾರ. ಈಗ ಐಶ್ವರ್ಯಾ ರೈರ ಥ್ರೋಬ್ಯಾಕ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ನಟಿ ತನ್ನ ಪತಿಯ ಫೋನನ್ನು ಸಿಕ್ರೇಟ್ ಆಗಿ ಚೆಕ್ ಮಾಡುತ್ತಾರಾ ಎಂದು ಕೇಳಲಾಗಿದೆ. ಅದಕ್ಕೆ ನಟಿ ಏನು ಹೇಳಿದ್ದಾರೆ ನೋಡೋಣ.