ಮುಂದಿನ ದಿನಗಳಲ್ಲಿ ಐಶ್ವರ್ಯಾ ರೈ ಮಣಿರತ್ನಂ ಅವರ ಪೊನ್ನಿನ್ ಸೆಲ್ವನ್ ತಮಿಳು ಸಿನಿಮಾದಲ್ಲಿ ರಾಣಿ ನಂದಿನಿ ಮತ್ತು ಮಂದಾಕಿನಿ ದೇವಿಯ ಅವಳಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾಲಿವುಡ್ ಸ್ಟಾರ್ ಚಿಯಾನ್ ವಿಕ್ರಮ್ ಈ ಚಿತ್ರದಲ್ಲಿ ಆದಿತ್ಯ ಕರಿಕಾಳನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಪೊನ್ನಿಯಿನ್ ಸೆಲ್ವನ್ ಸಿನಿಮಾ ತ್ರಿಷಾ, ಜಯಮ್ ರವಿ, ಕಾರ್ತಿ, ಪ್ರಕಾಶ್ ರಾಜ್, ಜಯರಾಮ್, ಪ್ರಭು, ಐಶ್ವರ್ಯ ಲಕ್ಷ್ಮಿ, ಸೊಭಿತಾ ಧೂಳಿಪಾಲ, ಲಾಲ್ ಮತ್ತು ಹಲವಾರು ಇತರ ನಟರನ್ನು ಒಳಗೊಂಡಿದೆ.