ಸೂಪರ್‌ ಸ್ಟಾರ್‌ ಸಲ್ಲುಬಾಯ್‌ ಲಿಪ್‌ಲಾಕ್‌ ಸೀನ್‌ ಯಾಕೆ ಮಾಡೋಲ್ಲ ಗೊತ್ತಾ?

Suvarna News   | Asianet News
Published : Jun 08, 2020, 05:12 PM IST

ಸಲ್ಮಾನ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದು, ಅನೇಕ ನಟಿಯರೊಂದಿಗಿನ ರಿಲೇಷನ್‌ಶಿಪ್‌ ಬಗ್ಗೆ ಮಾತ್ರ. ಆದರೆ ಸಿನಿಮಾದಲ್ಲಿ ಲಿಪ್‌ಲಾಕ್‌ಗೆ ಯಾಕೆ ಯಾವಾಗಲೂ ನೋ ಎನ್ನುತ್ತಾರೆ ಎನ್ನುವುದು ತಿಳಿಯದ ವಿಷಯ. ನಿಮಗೆ ಗೊತ್ತಾ ಸಿನಿಮಾಕ್ಕೆ ಬಂದು ನಾಲ್ಕು ದಶಕ ಕಳೆದರೂ ಕಿಸ್ಸಿಂಗ್‌ ಸೀನ್‌ಗಳಲ್ಲಿ ಕಾಣಿಸಿಕೊಳ್ಳದ ನಟ ಅಂದರೆ ಸಲ್ಮಾನ್‌ ಖಾನ್‌. ಅಫ್‌ ಸ್ಕ್ರೀನ್‌ನಲ್ಲಿ ಬ್ಯಾಡ್‌ಬಾಯ್‌ ಎಂದೇ ಖ್ಯಾತಿಯಾಗಿರುವ ಸಲ್ಲು ಬಾಯ್‌ ತೆರೆ ಮೇಲೆ ಮುಜುಗರವಾಗುವ ಸೀನ್‌ಗೆ ಒಪ್ಪುವುದೇ ಇಲ್ಲ. ಎಲ್ಲಾ ರೀತಿಯ ಪಾತ್ರಗಳಿಗೂ ಸೈ ಎನ್ನುವ ಬಾಡಿಗಾರ್ಡ್‌, ಇಂಟಿಮೇಟ್‌ ದೃಶ್ಯಗಳಿಂದ ಮಾತ್ರ ಸದಾ ದೂರ. ಹಾಕಿದ ಶರ್ಟ್ ಬಿಚ್ಚಲು ಮಾತ್ರ ಮುಂದಿರುವ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ತೆರೆ ಮೇಲೆ ರೊಮ್ಯಾನ್ಸ್‌ ಮಾಡಿದ್ದು ಕಡಿಮೆ.ನನ್ನ ಚಿತ್ರಗಳನ್ನು ಕುಟುಂಬದವರು ಒಟ್ಟಿಗೆ ಕುಳಿತು ನೋಡಲಿ ಹಾಗಾಗಿ ಸಭ್ಯತೆ ಮೀರಿದ ಸೀನ್‌ಗಳು ಬೇಡ ಎಂದು ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದರು ಭಜರಂಗಿ ಬಾಯ್‌ಜಾನ್‌. 

PREV
111
ಸೂಪರ್‌ ಸ್ಟಾರ್‌ ಸಲ್ಲುಬಾಯ್‌ ಲಿಪ್‌ಲಾಕ್‌ ಸೀನ್‌ ಯಾಕೆ ಮಾಡೋಲ್ಲ ಗೊತ್ತಾ?

ಸಲ್ಮಾನ್ ತಮ್ಮ ಮೊದಲ ಸಿನಿಮಾದಿಂದ ತಮ್ಮ ಕೊನೆಯ ಚಿತ್ರ ದಬಾಂಗ್ 3 ವರೆಗೆ ಯಾವುದೇ ಚುಂಬನ ದೃಶ್ಯವನ್ನು ನೀಡಿಲ್ಲ. ಸಲ್ಮಾನ್ ಅವರೇ ಇದರ ಹಿಂದಿನ ಕಾರಣವನ್ನು ನೀಡಿದ್ದರು.

211

ನಿರ್ಮಾಪಕ-ನಿರ್ದೇಶಕರಿಗೆ ಚಿತ್ರಗಳಲ್ಲಿ ಚುಂಬನ ದೃಶ್ಯಗಳನ್ನು ಇರಿಸಲು ಇಷ್ಟವಿಲ್ಲ ಎಂದೇನೂ ಅಲ್ಲ, ಆದರೆ ಸಲ್ಮಾನ್ ಅದನ್ನು ಮಾಡಲು ಬಯಸುವುದಿಲ್ಲ. ನಾನು ಸಂಪ್ರದಾಯವಾದಿಯಲ್ಲ, ಆದರೆ ನನ್ನ ಚಿತ್ರವನ್ನು ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡುತ್ತದೆ ಎಂದು ನನಗೆ ತಿಳಿದಿದೆ. ಅಂತಹ ಪರಿಸ್ಥಿತಿಯಲ್ಲಿ, ಅಂತಹ ಸೀನ್‌ಗಳನ್ನು ಕುಟುಂಬದವರು ನೋಡುವುದು ಒಳ್ಳೆಯದಲ್ಲ ಎನ್ನುವುದು ಬಾಲಿವುಡ್‌ ಸೂಪರ್‌ಸ್ಟಾರ್‌ ಅಂಬೋಣ.

311

ಅವರು ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು - ಅವರು ತಮ್ಮ ಇಡೀ ಕುಟುಂಬದೊಂದಿಗೆ ಡಿವಿಡಿಯಲ್ಲಿ ಇಂಗ್ಲಿಷ್ ಚಲನಚಿತ್ರಗಳನ್ನು ನೋಡುತ್ತಿದ್ದಾಗ, ಸ್ಮೂಚಿಂಗ್ ದೃಶ್ಯಗಳು ಬಂದ ತಕ್ಷಣ, ಎಲ್ಲರೂ ಆಕಡೆ ಈಕಡೆ ನೋಡಲಾರಂಭಿಸಿದರು. ಅಂತಹ ದೃಶ್ಯಗಳನ್ನು ತನ್ನ ತಂದೆ ಮತ್ತು ತಾಯಿಯ ಮುಂದೆ ನೋಡಿದಾಗ ಅಕ್ವಾರ್ಡ್‌ ಫೀಲ್‌ ಆಯಿತು. ಅವರು ಅಂತಹ ದೃಶ್ಯಗಳನ್ನು ಫಾಸ್ಟ್‌ ಫಾರ್ವರ್ಡ್ ಮಾಡುತ್ತಾರೆ ಅಥವಾ ರೂಮ್‌ನಿಂದ ಹೋರಹೋಗುತ್ತಾರೆ. ಅದೇ ಸಮಯದಲ್ಲಿ, ಕುಟುಂಬ ಒಟ್ಟಿಗೆ ನೋಡಲು ಮುಜುಗರಕ್ಕೊಳಗಾಗುವುದನ್ನು ತನ್ನ ಯಾವುದೇ ಚಿತ್ರಗಳಲ್ಲಿ ತಾನು ಏನನ್ನೂ ಮಾಡುವುದಿಲ್ಲ ಎಂದು ನಿರ್ಧರಿಸಿದೆ.

411

ಸಲ್ಮಾನ್ ಖಾನ್ ಪರದೆ ಮೇಲೆ ರೋಮ್ಯಾನ್ಸ್‌ ಮಾಡುವಾಗ ಅವರನ್ನು ನೋಡುವ ಮಕ್ಕಳು ಮತ್ತು ಹಿರಿಯರಿಗೆ ಯಾವುದೇ ತೊಂದರೆಯಿಲ್ಲ ಎಂಬುದನ್ನು ಯಾವಾಗಲೂ ಗಮನದಲ್ಲಿಟ್ಟುಕೊಳ್ಳುತ್ತಾರೆ.

511

ಸಲ್ಮಾನ್ ಖಾನ್ ಅವರ ಮೊದಲ ಸೂಪರ್ ಹಿಟ್ ಚಿತ್ರ ಮೈನೆ ಪ್ಯಾರ್ ಕಿಯಾ ನಟಿ ಭಾಗ್ಯಶ್ರೀ ಇತ್ತೀಚೆಗೆ ಸಂದರ್ಶನದಲ್ಲಿ ಸಲ್ಮಾನ್‌ ಖಾನ್‌ಗೆ ಸಂಬಂಧಿಸಿದ ಘಟನೆಯನ್ನು ಹಂಚಿಕೊಂಡಿದ್ದಾರೆ.

611

ಚಿತ್ರೀಕರಣದ ಮೊದಲು ಫೋಟೋಗ್ರಾಫರ್, ಭಾಗ್ಯಶ್ರೀ ಮತ್ತು ಸಲ್ಮಾನ್‌ರ ಕೆಲವು ಹಾಟ್ ಫೋಟೋಗಳನ್ನು ತೆಗೆದುಕೊಳ್ಳಲು ಬಯಸಿದ್ದರು. ಸಲ್ಮಾನ್‌ರನ್ನು ಬದಿಗೆ ಕರೆದೊಯ್ದು ನನ್ನನ್ನು ಹಿಡಿದು ಕೊಂಡು ಸ್ಮೂಚ್ ಮಾಡಲು ಹೇಳಿದರು, ಅವರ ಮಾತು ನನಗೆ ಕೇಳಿಸುತ್ತಿತು. - ಭಾಗ್ಯಶ್ರೀ

711

ನನಗೆ ತುಂಬಾ ಭಯವಾಯಿತು. ಆದರೆ ಸಲ್ಮಾನ್ ಉತ್ತರವನ್ನು ಕೇಳಿ ನನಗೆ ಸಮಾಧಾನವಾಯಿತು. ಸಲ್ಮಾನ್ ಹಾಗೆ ಮಾಡಲು ನಿರಾಕರಿಸಿದರು. ಭಾಗ್ಯಶ್ರೀ ಅವರ ಅನುಮತಿಯಿಲ್ಲದೆ ಈ ರೀತಿ ಏನನ್ನೂ ಮಾಡುವುದಿಲ್ಲ ಎಂದು ಹೇಳಿದರು.

811

ಇದನ್ನು ಕೇಳಿ ಅವರು ತುಂಬಾ ಸಂತೋಷಪಟ್ಟರು ಮತ್ತು ಸಲ್ಮಾನ್ ಅವರೊಂದಿಗೆ ಕೆಲಸ ಮಾಡುವ ಮೂಲಕ ಅವರು ಸುರಕ್ಷಿತರು ಎಂದು ಭಾವಿಸಿದರು ಎಂದು ಸಲ್ಮಾನ್‌ ಜೊತೆಗೆ ಚಿತ್ರರಂಗಕ್ಕೆ ಕಾಲಿಟ್ಟ ಸಹ ನಟಿ ಭಾಗ್ಯಶ್ರೀ ತಮ್ಮ ಹಳೆ ನೆನಪು ಹಂಚಿಕೊಂಡಿದ್ದಾರೆ. 

911

ಅಂದಹಾಗೆ, ಸಲ್ಮಾನ್‌ರ ಮೊದಲ ಲಿಪ್‌ಲಾಕ್ ಸೀನ್‌ನ್ನು ಸೂರಜ್ ಬರ್ಜತ್ಯರ 'ಮೈನೆ ಪ್ಯಾರ್ ಕಿಯಾ' ಚಿತ್ರದಲ್ಲಿ ಭಾಗ್ಯಶ್ರೀ ಜೊತೆ ಇದೆ. ಆದರೆ ಈ ದೃಶ್ಯದಲ್ಲಿ ಸಲ್ಮಾನ್ ನಾಯಕಿ ಮುಟ್ಟಲಿಲ್ಲ.ಆದರೂ ಈ ಲಿಪ್‌ಲಾಕ್ ಹೇಗೆ ಸಂಭವಿಸಿತ್ತು ಎಂಬುದಕ್ಕೆ ಒಂದು ಕಥೆ ಇದೆ. 

1011

ಭಾಗ್ಯಶ್ರೀ ಮತ್ತು ಸಲ್ಮಾನ್ ಮನವೊಲಿಸಲು ಬಾರ್ಜತ್ಯ ತೀವ್ರ ಪ್ರಯತ್ನ ಮಾಡಿದರು. ಈ ಲಿಪ್‌ಲಾಕ್‌ಗೆ ಇಬ್ಬರೂ ಸಿದ್ಧರಿರಲಿಲ್ಲ. ನಂತರ ಇಬ್ಬರ ನಡುವೆ ಗ್ಲಾಸ್‌ ಇಟ್ಟು ಸೀನ್‌ ಶೂಟ್‌ ಮಾಡಲಾಗಿದೆ.

1111

ಲಾಕ್ ಡೌನ್ ಶುರುವಾದ ದಿನದಿಂದ ಜಾಕ್ವೆಲಿನ್ ಫರ್ನಾಂಡೀಸ್, ಯೂಲಿಯಾ ವಂತೂರ್ ಹಾಗೂ ಕೆಲವು ಸ್ನೇಹಿತರ ಜೊತೆ ಸಲ್ಮಾನ್  ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿದ್ದಾರೆ. ಇತ್ತೀಚಿನ ಚಂಡಮಾರುತದಿಂದಾಗಿ ಫಾರ್ಮಾಹೌಸ್‌ನಲ್ಲಿ ಅನೇಕ ಮರಗಳು ಬಿದ್ದ ಫೋಟೋಗಳು ಮತ್ತು ವೀಡಿಯೊಗಳು ಸಹ ಬಹಿರಂಗಗೊಂಡಿವೆ.

click me!

Recommended Stories