ಕರೀನಾ ಮಗು ಹೇಗೆ ಕಾಣುತ್ತೆ: ರಿವೀಲ್‌ ಮಾಡಿದ ರಣಧೀರ್ ಕಪೂರ್ !

First Published | Feb 23, 2021, 2:23 PM IST

ಬಾಲಿವುಡ್‌ನ ಸ್ಟಾರ್‌ ಕಪಲ್‌ ಸೈಫ್‌ ಅಲಿ ಖಾನ್ ಹಾಗೂ ಕರೀನಾ ಕಪೂರ್‌ ತಮ್ಮ ಕುಟುಂಬಕ್ಕೆ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಎರಡನೇ ಬಾರಿಯೂ ಗಂಡು ಮಗುವಿಗೆ ತಾಯಿಯಾಗಿದ್ದಾರೆ ನಟಿ ಕರೀನಾ. ಮಗು ಮತ್ತು ತಾಯಿ ಇಬ್ಬರ ಆರೋಗ್ಯವಾಗಿರುವುದಾಗಿ ಸೈಫ್‌ ಸೋಶಿಯಲ್‌ ಮೀಡಿಯಾ ಮೂಲಕ ತಿಳಿಸಿದ್ದಾರೆ. ಈ ನಡುವೆ ಕರೀನಾರ ತಂದೆ ರಣಧೀರ್‌ ಕಪೂರ್‌ ಮಗು ಹೇಗೆ ಕಾಣುತ್ತದೆ ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ವಿವರ ಈ ಕೆಳಗಿದೆ.

ರಣಧೀರ್ ಕಪೂರ್ ಮಗಳು ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಎರಡನೇಯ ಮಗನ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ.
undefined
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಎರಡನೇ ಮಗನನ್ನು ಫೆಬ್ರವರಿ 21 ರಂದು ಬೆಳಗ್ಗೆ 4.45 ರ ಸುಮಾರಿಗೆ ಸ್ವಾಗತಿಸಿದರು.
undefined
Tap to resize

ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಮಗನಿಗೆ ಜನ್ಮ ನೀಡಿದ ಬೆಬೊ.
undefined
ಮಗು ತನ್ನ ದೊಡ್ಡಣ್ಣ ತೈಮೂರ್ ಅಲಿ ಖಾನ್‌ನಂತೆ ಕಾಣುತ್ತದೆ ಎಂದು ಅಜ್ಜ ರಣಧೀರ್ ಕಪೂರ್ ಪ್ರಮುಖ ದಿನಪತ್ರಿಕೆಗೆ ತಿಳಿಸಿದರು.
undefined
'ನನಗೆ ಎಲ್ಲಾ ಮಕ್ಕಳು ಒಂದೇ ತರ ಕಾಣುತ್ತವೆ'ಎಂದು ರಣಧೀರ್ ಇಟಿ ಟೈಮ್ಸ್‌ಗೆ ಹೇಳಿದರು
undefined
'ಅವರೆಲ್ಲರೂ ಮಗು ಹಿರಿಯ ಸಹೋದರ ತೈಮೂರ್‌ನಂತೆ ಕಾಣುತ್ತದೆ ಎಂದು ಹೇಳುತ್ತಿದ್ದಾರೆ' ಎಂದೂ ಅವರು ಹೇಳಿದರು.
undefined
ಪ್ರಸ್ತುತ, ತೈಮೂರ್ ತನ್ನ ದೊಡ್ಡಮ್ಮ ಕರಿಷ್ಮಾ ಕಪೂರ್ ಜೊತೆ ವಾಸಿಸುತ್ತಿದ್ದಾನೆ.
undefined
'ಪುಟ್ಟ ತಮ್ಮನನ್ನು ಪಡೆದುದ್ದಕ್ಕಾಗಿ ಅವನು ತುಂಬಾ ಸಂತೋಷಪಟ್ಟಿದ್ದಾನೆ. ವಾಸ್ತವವಾಗಿ, ಸೈಫ್ ಕೂಡ ಎಕ್ಸೈಟ್‌ ಆಗಿದ್ದಾನೆ. ಅವನು ತುಂಬಾ ಸಂತೋಷವಾಗಿದ್ದಾನೆ, ನನ್ನ ಮಗಳೂ ಸಹ ಮತ್ತು ನಾನು ಅವರೆಲ್ಲರನ್ನೂ ಆಶೀರ್ವದಿಸುತ್ತೇನೆ' ರಣಧೀರ್ ಎಂದು ಹೇಳಿದ್ದಾರೆ.
undefined

Latest Videos

click me!