Diwali 2021: ದೀಪಾವಳಿ ಪಾರ್ಟಿಗೆ ಸೀರೆಯಲ್ಲಿ ಮಿಂಚಿದ ಜಾಹ್ನವಿ

First Published | Nov 6, 2021, 11:56 AM IST
  • Diwali 2021: ದೀಪಾವಳಿ ಪಾರ್ಟಿಗೆ ಹಸಿರು ಸೀರೆಯಲ್ಲಿ ಮಿಂಚಿದ ಜಾಹ್ನವಿ
  • Janhvi Kapoor: ಶ್ರೀದೇವಿ ಮಗಳ ಹಬ್ಬದ ಲುಕ್ ಹೀಗಿತ್ತು

ಬಾಲಿವುಡ್(Bollywood) ನಟಿ ಜಾಹ್ನವಿ ಕಪೂರ್(Janhvi Kapoor) ಅನಿಲ್ ಕಪೂರ್ ಮನೆಯಲ್ಲಿ ನಡೆದ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ತಂದೆ ಮತ್ತು ತಂಗಿಯೊಂದಿಗೆ ಪಾರ್ಟಿಗೆ ಬಂದ ಜಾಹ್ನವಿ ಚಂದದ ಸೀರೆಯುಟ್ಟಿದ್ದರು.

ಜಾಹ್ನವಿ ಕಪೂರ್ ಚಂದದ ಲಂಗ ದಾವಣಿಯಲ್ಲಿ ತಂಗಿ ಹಾಗೂ ತಂದೆಯೊಂದಿಗೆ ಲಕ್ಷ್ಮೀ ಪೂಜೆಯಲ್ಲಿಯೂ ಭಾಗಿಯಾಗಿದ್ದರು, ನಂತರ ದಿವಾಲಿ ಬಾಶ್‌ನಲ್ಲಿ ಮಿಂಚಿದ್ದಾರೆ

Tap to resize

ಮಿರರ್ ವರ್ಕ್ ಇದ್ದ ಸೀರೆಯ ಸೆರವು ಉದ್ದನೆ ಇಳಿಬಿಟ್ಟಿದ್ದ ನಟಿಯ ಬ್ಲೌಸ್‌ನಲ್ಲಿಯೂ ಹೆವಿ ಮಿರರ್ ವರ್ಕ್ ಇದ್ದು ಪಾರ್ಟಿಗೆ ಸರಿಯಾಗಿ ಸೂಟ್ ಆಗುವಂತಿತ್ತು.

ತಮ್ಮ ಚಿಕ್ಕಪ್ಪ ಹಿರಿಯ ನಟ ಅನಿಲ್ ಕಪೂರ್ ಅವರ ಮುಂಬೈ ನಿವಾಸದಲ್ಲಿ ದೀಪಾವಳಿ ಹಬ್ಬದಂದು ಕುಟುಂಬವು ಒಟ್ಟುಗೂಡಿತು. ಆದರೆ ಸೋನಂ ತಮ್ಮ ಪತಿ ಆನಂದ್ ಅಹುಜಾ ಮತ್ತು ಸ್ನೇಹಿತರೊಂದಿಗೆ ಲಂಡನ್‌ನ ಮನೆಯಲ್ಲಿ ದೀಪಾವಳಿ ಆಚರಿಸಿದರು.

ದೊಡ್ಡ ತಾರೆಗಳಾದ ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರ ದೀಪಾವಳಿ ಹಬ್ಬದ ಪಾರ್ಟಿ ಆಯೋಜಿಸದ ಕಾರಣ ಬಾಲಿವುಡ್ ಹೆಚ್ಚಾಗಿ ಸರಳ ದೀಪಾವಳಿ ಆಚರಣೆಗಳನ್ನು ಹೊಂದಿತ್ತು. ಆದರೆ ಅನಿಲ್ ಕಪೂರ್ ಹಾಗೂ ಏಕ್ತಾ ಕಪೂರ್ ಪಾರ್ಟಿ ಆಯೋಜಿಸಿದ್ದರು.

ಅನಿಲ್ ಮಗಳು ರಿಯಾ ಕಪೂರ್, ಗೆಳತಿ ಮಲೈಕಾ ಅರೋರಾ ಜೊತೆ ಅರ್ಜುನ್ ಕಪೂರ್, ಪುತ್ರಿಯರಾದ ಜಾನ್ವಿ ಕಪೂರ್, ಖುಷಿ ಕಪೂರ್ ಮತ್ತು ಅಂಶುಲಾ ಅವರೊಂದಿಗೆ ಬೋನಿ ಕಪೂರ್; ಮತ್ತು ಶನಯಾ ಕಪೂರ್ ಸೇರಿದಂತೆ ಅನೇಕರು ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಅನೇಕ ಅತಿಥಿಗಳು ದೀಪಾವಳಿ ಪಾರ್ಟಿಯ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅನಿಲ್ ಕಪೂರ್ ಲಕ್ಷ್ಮಿ ಪೂಜೆ ಮಾಡುತ್ತಿರುವಾಗ ಮಲೈಕಾ ಮತ್ತು ಅರ್ಜುನ್ ಕಪೂರ್ ಸಹೋದರಿ ಅನ್ಶುಲಾ ಸೆಲ್ಫಿಗೆ ಪೋಸ್ ನೀಡಿದ್ದಾರೆ.

ಅನಿಲ್ ಕಪೂರ್ ಶಟರ್‌ಬಗ್‌ಗಳಿಗೆ ಪೋಸ್ ನೀಡಲು ತಮ್ಮ ಮನೆಯಿಂದ ಹೊರಬರುತ್ತಿದ್ದಂತೆ, ಅವರು ಅವರಿಗೆ ಶುಭ ಹಾರೈಸಿದರು ಮತ್ತು ಸಿಹಿತಿಂಡಿಗಳ ಪ್ಯಾಕೆಟ್‌ಗಳನ್ನು ವಿತರಿಸಿದರು.

Latest Videos

click me!