ಕಳೆದ ವರ್ಷ ಕೊರೋನಾದಿಂದ ಹಬ್ಬ ಆಚರಿಸಲಾಗದೆ ಈ ವರ್ಷ ಎಲ್ಲರೂ ಸಂಭ್ರಮದಿಂದ ದೀಪಾವಳಿ ಆಚರಿಸಿದ್ದಾರೆ. ಲಕ್ಷ್ಮೀ ಪೂಜೆ, ದೀಪಾವಳಿ, ಹಬ್ಬದ ಸಂಭ್ರಮ ಈ ಬಾರಿ ಜೋರಾಗಿಯೇ ಇದೆ. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಈಗ ಪತಿಯ ಜೊತೆ ಲಾಸ್ ಎಂಜಲೀಸ್‌ನಲ್ಲಿ ಹಬ್ಬ ಆಚರಿಸಿದ್ದಾರೆ.
ಸೆಲೆಬ್ರಿಟಿಗಳು ತಮ್ಮ ಕುಟುಂಬದೊಂದಿಗೆ ಹಬ್ಬದ ಶುಭ ಸಂದರ್ಭವನ್ನು ಆರಿಸಿಕೊಂಡರು. ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಅಮೇರಿಕನ್ ಪಾಪ್‌ಸ್ಟಾರ್ ಪತಿ ನಿಕ್ ಜೋನಾಸ್ ಗುರುವಾರ ದೀಪಾವಳಿ ಪೂಜೆ ಮಾಡಿ ಒಟ್ಟಿಗೆ ದೀಪಗಳನ್ನು ಬೆಳಗಿಸಿದ್ದಾರೆ.
ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಪ್ರಿಯಾಂಕಾ ಚೋಪ್ರಾ ಸುಂದರವಾಗಿ ಕಾಣುತ್ತಿದ್ದರು. ನಿಕ್ ಜೋನಾಸ್ ಅವರು ಲಕ್ಷ್ಮಿ ಪೂಜೆಯನ್ನು ಮಾಡುವಾಗ ಕಸೂತಿ ಬಿಳಿ ಕುರ್ತಾವನ್ನು ಧರಿಸಿದ್ದರು.
ಮಹಾಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ ನಾವು ಅವಳ ಕೃಪೆ ಮತ್ತು ಸಮೃದ್ಧಿಯನ್ನು ನಮ್ಮ ಮನೆಗೆ ಆಹ್ವಾನಿಸುತ್ತೇವೆ. ದೀಪಾವಳಿಯ ಶುಭಾಶಯಗಳು ಎಂದು ಪ್ರಿಯಾಂಕಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಜೋನಾಸ್ ಬ್ರದರ್ಸ್ ರೋಸ್ಟ್ ನೆಟ್‌ಫ್ಲಿಕ್ಸ್ ವಿಶೇಷ ಚಿತ್ರೀಕರಣಕ್ಕಾಗಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಲಾಸ್ ಏಂಜಲೀಸ್‌ಗೆ ಮರಳಿದ್ದಾರೆ. ಅವರು ರಿಚರ್ಡ್ ಮ್ಯಾಡೆನ್ ಜೊತೆಗೆ ಲಂಡನ್‌ನಲ್ಲಿ ತನ್ನ ಅಮೆಜಾನ್ ಶೋ ಸಿಟಾಡೆಲ್ ಶೂಟಿಂಗ್‌ನಲ್ಲಿದ್ದರು.