Diwali 2021: ಚಾಹಲ್-ಧನಶ್ರೀ, ವರುಣ್ ಧವನ್-ನತಾಶಾ: ದೀಪಾವಳಿ ಸೆಲೆಬ್ರೆಟ್‌ ಮಾಡುತ್ತಿರುವ ಹೊಸ ಜೋಡಿ!

Published : Nov 05, 2021, 04:30 PM ISTUpdated : Nov 05, 2021, 04:45 PM IST

ಇತ್ತೀಚೆಗೆ ವಿವಾಹವಾದ ಕೆಲವು ಪ್ರಸಿದ್ಧ ಜೋಡಿಗಳಿಗೆ ಈ ವರ್ಷ ದೀಪಾವಳಿ ವಿಶೇಷ ಮತ್ತು ಸ್ಮರಣೀಯವಾಗಿರುತ್ತದೆ ಮತ್ತು ಈ ಜೋಡಿಗಳು ತಮ್ಮ ಸಂಗಾತಿಯ ಜೊತೆ ಈ ಬಾರಿ ಅಂದರೆ 2021ರಲ್ಲಿ ಮೊದಲ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಇಲ್ಲಿದೆ ಆ ಜೋಡಿಗಳ ಬಗ್ಗೆ ಮಾಹಿತಿ. 

PREV
16
Diwali 2021: ಚಾಹಲ್-ಧನಶ್ರೀ, ವರುಣ್ ಧವನ್-ನತಾಶಾ: ದೀಪಾವಳಿ ಸೆಲೆಬ್ರೆಟ್‌ ಮಾಡುತ್ತಿರುವ ಹೊಸ ಜೋಡಿ!

ಸೆಲೆಬ್ರಿಟಿ ಕಪಲ್‌ಗಳಾದ ವರುಣ್ ಧವನ್ ಮತ್ತು ನತಾಶಾ ದಲಾಲ್ , ಯುಜ್ವೇಂದ್ರ ಚಾಹಲ್-ಧನಶ್ರೀ,  ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಈ ವರ್ಷ ವೈವಾಹಿಕ ಝೀವನಕ್ಕೆ ಕಾಲಿಟ್ಟಿದ್ದಾರೆ. ಈ ನವವಿವಾಹಿತರು 2021 ರಲ್ಲಿ ತಮ್ಮ ಮೊದಲ ದೀಪಾವಳಿಯನ್ನು ಆಚರಿಸುತ್ತಿದ್ದಾರೆ.

26

ಯಾಮಿ ಗೌತಮ್ ಮತ್ತು ಆದಿತ್ಯ ಧರ್: Yami Gautam and Aditya Dhar 
ಕರ್ವಾ ಚೌತ್‌ನಂತೆ, ದೀಪಾವಳಿಯು ಈ ವರ್ಷ ದಂಪತಿಗಳಿಗೆ ವಿಶೇಷವಾಗಿರುತ್ತದೆ. ಯಾಮಿ ಗೌತಮ್ ಮತ್ತು ಆದಿತ್ಯ ಧರ್ ಜೂನ್ 4 ರಂದು ಹಿಮಾಚಲ ಪ್ರದೇಶದ ಬಳಿಯ ಸುಂದರ ಸ್ಥಳದಲ್ಲಿ ಮದುವೆಯಾದರು. ಇವರ ಮದುವೆಯಲ್ಲಿ ಕೇವಲ ಆಪ್ತ ಕುಟುಂಬ ಮತ್ತು ಸ್ನೇಹಿತರು ಮಾತ್ರ ಮದುವೆಯಲ್ಲಿ ಭಾಗವಹಿಸಿದ್ದರು.

36

ವರುಣ್ ಧವನ್ ಮತ್ತು ನತಾಶಾ ದಲಾಲ್: Varun Dhawan and Natasha Dalal 
ಬಾಲಿವುಡ್‌ನ ಹ್ಯಾಂಡ್‌ಸಮ್‌ ನಟರಲ್ಲಿ ಒಬ್ಬರಾದ ವರುಣ್ ಧವನ್  ಜನವರಿ 24 ರಂದು  ಅವರ ಬಹುಕಾಲದ ಗೆಳತಿ ನತಾಶಾ ದಲಾಲ್ ವಿವಾಹವಾದರು.ಈ ಬಾರಿ ಮೊದಲ ದೀಪಾವಳಿ ಆಚರಿಸುತ್ತಿರುವ ಈ ಕಪಲ್‌ನ ಫೋಟೋಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
 

46

ದಿಯಾ ಮಿರ್ಜಾ ಮತ್ತು ವೈಭವ್ ರೇಖಿ: Dia Mirza and Vaibhav Rekhi
ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ದಂಪತಿಗಳಿಗೆ ಮಾತ್ರವಲ್ಲ, ಅವರ ಮಗ ಅವ್ಯಾನ್ ಆಜಾದಿತ್‌ಗೆ ಸಹ ಈ ಬಾರಿ ಹೊಸ ದೀಪಾವಳಿ ಹಬ್ಬವಾಗಿದೆ. ಪತಿ-ಪತ್ನಿಯಾಗಿ ಮತ್ತು ಪೋಷಕರಾಗಿ ಅವರ ಮೊದಲ ದೀಪಾವಳಿಯಾಗಿದೆ. ಈ ವರ್ಷ ಫೆಬ್ರವರಿಯಲ್ಲಿ ದಂಪತಿಗಳು ವಿವಾಹವಾದರು ಮತ್ತು  ಮೇ ತಿಂಗಳಲ್ಲಿ ಮಗನನ್ನು ಸ್ವಾಗತಿಸಿದರು.  

56

ರಾಹುಲ್ ವೈದ್ಯ ಮತ್ತು ದಿಶಾ ಪರ್ಮಾರ್:Rahul Vaidya and Disha Parmar 
ಬಾಲಿವುಡ್ ಗಾಯಕ ರಾಹುಲ್ ವೈದ್ಯ ಮತ್ತು ಟಿವಿ ನಟಿ ದಿಶಾ ಪರ್ಮಾರ್ ಜುಲೈ 16 ರಂದು ಮುಂಬೈನಲ್ಲಿ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಈ ಸೆಲೆಬ್ರಿಟಿ ಕಪಲ್‌ನ ಮದುವೆ ಸಖತ್‌ ಸದ್ದು ಮಾಡಿತ್ತು. ಮದುವೆಯ ನಂತರ ಹೊಸ ದೀಪಾವಳಿ ಆಚರಿಸುತ್ತಿದ್ದಾರೆ ಈ ಜೋಡಿ.

66

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ:Yuzvendra Chahal and Dhanashree Verma
ಟೀಮ್‌ ಇಂಡಿಯಾದ ಬೌಲರ್‌  ಯುಜ್ವೇಂದ್ರ ಚಹಾಲ್ ಕಳೆದ ವರ್ಷ ಡಿಸೆಂಬರ್ 22 ರಂದು ನೃತ್ಯ ಸಂಯೋಜಕ ಮತ್ತು ಯುಟ್ಯೂಬರ್ ಧನಶ್ರೀ ವರ್ಮಾ ಅವರನ್ನು ವಿವಾಹವಾದರು. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಇರುವ ಈ ಜೋಡಿ ತಮ್ಮ ಫೋಟೋ ಹಾಗೂ ವಿಡಿಐಓಗಳ ಮೂಲಕ ಫ್ಯಾನ್ಸ್‌ಗೆ ರಂಜಿಸುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories