ಬಾಲಿವುಡ್ ಸ್ಟಾರ್ ನಟಿಯರಿಗೆ ಟಕ್ಕರ್ ಕೊಟ್ಟ ಕನ್ನಡ ಧಾರಾವಾಹಿ ನಟಿ ದಿಶಾ ಮದನ್!

Published : May 20, 2025, 12:04 PM ISTUpdated : May 20, 2025, 02:16 PM IST

ಕಾನ್ಸ್ ಚಲನಚಿತ್ರೋತ್ಸವ 2025ರಲ್ಲಿ ದಿಶಾ ಮದನ್ 70 ವರ್ಷ ಹಳೆಯ ಚಿನ್ನದ ಕಾಂಜೀವರಂ ಸೀರೆಯುಟ್ಟು ಮಿಂಚಿದರು. ಹಳೆಯ ಸೀರೆಯಿಂದ ಮಾಡಿಸಿದ ಗೌನ್ ಧರಿಸಿ ಬಾಲಿವುಡ್ ನಟಿಯರನ್ನೂ ಮೀರಿಸಿದ ಫ್ಯಾಷನ್ ಪ್ರದರ್ಶನ  ಮಾಡಿದ್ದಾರೆ. ಈ ಮೂಲಕ ಬಾಲಿವುಡ್ ಮಂದಿಗೆ ದಿಶಾ ಮದನ್ ಶಾಕ್ ನೀಡಿದ್ದಾರೆ.

PREV
16
ಬಾಲಿವುಡ್ ಸ್ಟಾರ್ ನಟಿಯರಿಗೆ ಟಕ್ಕರ್ ಕೊಟ್ಟ ಕನ್ನಡ ಧಾರಾವಾಹಿ ನಟಿ ದಿಶಾ ಮದನ್!

ಕಾನ್ಸ್ ಚಿತ್ರೋತ್ಸವದಲ್ಲಿ ದಕ್ಷಿಣ ಭಾರತದ ನಟಿ ಅದರಲ್ಲಿಯೂ ನಮ್ಮ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ದಿಶಾ ಮದನ್ ಭಾರತೀಯ ಉಡುಪಿನಲ್ಲಿ ಮಿಂಚಿದರು. ಅವರು ವಿಶಿಷ್ಟ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು.

26

ದಕ್ಷಿಣ ಭಾರತದ ನಟಿ ದಿಶಾ ಮದನ್, ಕಾನ್ಸ್‌ ರೆಡ್ ಕಾರ್ಪೆಟ್ ವೇದಿಕೆಯಲ್ಲಿ ಕಾಂಜೀವರಂ ಸೀರೆಯನ್ನು ಧರಿಸುವ ಮೂಲಕ ದಕ್ಷಿಣ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸಿದರು.

36

ದಿಶಾ ಮದನ್ ಕಾನ್ಸ್‌ ವೇದಿಕೆಗೆ 70 ವರ್ಷ ಹಳೆಯ ಕಾಂಜೀವರಂ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಹಳೆಯ ಸೀರೆಯಿಂದ ಮಾಡಿಸಿದ ಗೌನ್ ಧರಿಸಿ ಬಾಲಿವುಡ್ ನಟಿಯರನ್ನೂ ಮೀರಿಸಿದ ಫ್ಯಾಷನ್ ಪ್ರದರ್ಶನ  ಮಾಡಿದ್ದಾರೆ. ಈ ಮೂಲಕ ಬಾಲಿವುಡ್ ಮಂದಿಗೆ ದಿಶಾ ಮದನ್ ಶಾಕ್ ನೀಡಿದ್ದಾರೆ.

46

ಕೆಂಪು ಬಣ್ಣದ ಕಾಂಜೀವರಂ ಸೀರೆಯಲ್ಲಿ ಶುದ್ಧ ಚಿನ್ನದ ಜರಿ ಕೆಲಸ ಮಾಡಲಾಗಿತ್ತು. ಈ ಸೀರೆಯನ್ನು ಕುಶಲಕರ್ಮಿಗಳು 400 ಗಂಟೆಗಳಿಗೂ ಹೆಚ್ಚು ಸಮಯದಲ್ಲಿ ನೇಯ್ದಿದ್ದಾರೆ.

56

ಸೀರೆಯೊಂದಿಗೆ ಕೈಯಿಂದ ಮಾಡಿದ ಕಾರ್ಸೆಟ್ ಬ್ಲೌಸ್ ಅನ್ನು ನಟಿ ಧರಿಸಿದ್ದರು. ಈ ಬ್ಲೌಸ್ ಅನ್ನು ತಯಾರಿಸಲು 4 ಕುಶಲಕರ್ಮಿಗಳು 250 ಗಂಟೆಗಳ ಕಾಲ ಶ್ರಮಿಸಿದ್ದಾರೆ.

66

ದಿಶಾ ಮದನ್ ಕಾಂಜೀವರಂ ಸೀರೆಯ ಸೌಂದರ್ಯವನ್ನು ಹೆಚ್ಚಿಸಲು ಗಜರಾಜ್ ಶೈಲಿಯ ಚಿನ್ನ ಮತ್ತು ಹಸಿರು ಆಭರಣಗಳನ್ನು ಧರಿಸಿದ್ದರು.

Read more Photos on
click me!

Recommended Stories