ಮದುವೆಯಾದ 6 ತಿಂಗಳಲ್ಲಿ ವಿರುಷ್ಕಾ ಜೋಡಿ ಜೊತೆಗಿದ್ದ ದಿನವೆಷ್ಟು? ಲೆಕ್ಕ ಹೇಳಿದ ಅನುಷ್ಕಾ

Published : May 19, 2025, 09:29 PM IST

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಕರಿಯರ್ ಪೀಕ್ ಟೈಮ್‌ನಲ್ಲಿ ಮದುವೆಯಾಗಿದ್ದಾರೆ. ಆದರೆ ಮದುವೆಯಾದ ಮೊದಲ 6 ತಿಂಗಳಲ್ಲಿ ಇವರು ಜೊತೆಗಿದ್ದ ದಿನವೆಷ್ಟುಗೊತ್ತಾ? ಈ ಕುರಿತು ಅನುಷ್ಕಾ ಶರ್ಮಾ ಲೆಕ್ಕ ಹೇಳಿದ್ದಾರೆ.

PREV
16
ಮದುವೆಯಾದ 6 ತಿಂಗಳಲ್ಲಿ ವಿರುಷ್ಕಾ ಜೋಡಿ ಜೊತೆಗಿದ್ದ ದಿನವೆಷ್ಟು? ಲೆಕ್ಕ ಹೇಳಿದ ಅನುಷ್ಕಾ

ಸೆಲೆಬ್ರಿಟಿ ಜೋಡಿಗಳಾದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮಹತ್ತರ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಇಬ್ಬರು ತಮ್ಮ ಕರಿಯರ್ ಉತ್ತುಂಗದಲ್ಲಿ  ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2017, ಡಿಸೆಂಬರ್ 11ರಂದು ವಿರಾಟ್ ಹಾಗೂ ಅನುಷ್ಕಾ ಶರ್ಮಾ ಮದುವೆಯಾಗಿದ್ದಾರೆ. ಇದೀಗ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಇತ್ತ ಕೊಹ್ಲಿ ಟೆಸ್ಟ್ ಮಾದರಿಗೆ ವಿದಾಯ ಹೇಳಿದರೆ, ಅತ್ತ ಅನುಷ್ಕಾ ಶರ್ಮಾ ಮಕ್ಕಳಾದ ಮೇಲೆ ಹೆಚ್ಚಿನ ಸಮಯ ಮಕ್ಕಳಿಗೆ ಮೀಸಲಿಟ್ಟಿದ್ದಾರೆ. ಆದರೆ ಮದುವೆಯಾದ ಆರಂಭಿಕ ದಿನಗಳಲ್ಲಿ ಈ ಜೋಡಿಗೆ ಒಂದೊಂದು ನಿಮಿಷವೂ ಅತ್ಯಮೂಲ್ಯವಾಗಿತ್ತು. ಈ ಕುರಿತು ಅನುಷ್ಕಾ ಶರ್ಮಾ ಮನಬಿಚ್ಚಿ ಮಾತಾನಾಡಿದ್ದಾರೆ.

26

ಮದುವೆಯಾದ ಮೊದಲ 6 ತಿಂಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕೇವಲ 21 ದಿನ ಮಾತ್ರ ಜೊತೆಗಿದ್ದರು. ಇನ್ನುಳಿದ ದಿನ ಇಬ್ಬರು ತಮ್ಮ ತಮ್ಮ ಕ್ಷೇತ್ರದಲ್ಲಿ ಬ್ಯೂಸಿಯಾಗಿದ್ದರು. ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ, ಟಿ20 ಮಾದರಿ ಜೊತೆಗೆ ಐಪಿಎಲ್ ಟೂರ್ನಿಯಲ್ಲಿ ಬ್ಯೂಸಿಯಾಗಿದ್ದರೆ, ಇತ್ತ ಅನುಷ್ಕಾ ಶರ್ಮಾ ಸಿನಿಮಾದಲ್ಲಿ ಬ್ಯೂಸಿಯಾಗಿದ್ದರು. ಇಬ್ಬರು ಜೊತೆಗಿರುವುದು ದೂರದ ಮಾತು, ಭೇಟಿ ಮಾಡುವುದೇ ವಿರಳವಾಗಿತ್ತು ಎಂದು ಅನುಷ್ಕಾ ಶರ್ಮಾ ವೋಗ್ ಇಂಡಿಯಾ ಸಂದರ್ಶದಲ್ಲಿ ಹೇಳಿದ ಹಳೇ ಮಾತು ಇದೀಗ ಮತ್ತೆ ಸದ್ದು ಮಾಡುತ್ತಿದೆ.

36

ನಾನು ಲೆಕ್ಕ ಮಾಡಿದ್ದೇನೆ, ಕೇವಲ 21 ದಿನ ನಾವು ಜೊತೆಗಿದ್ದೆವು. ಮದುವೆಯಾದ ಮೊದಲ 6 ತಿಂಗಳ ನಾವಿಬ್ಬರು ಸಮಯ ಮಾಡಿಕೊಂಡು ಜೊತೆಗಿರುವುದೇ ಕಷ್ಟವಾಗಿತ್ತು ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾ ಜೊತೆ ವಿದೇಶ ಪ್ರವಾಸದಲ್ಲಿದ್ದರು. ಹಲವು ದಿನಗಳಿಂದ ನಾವು ಭೇಟಿಯಾಗಿರಲಿಲ್ಲ. ಹೀಗಾಗಿ ನಾನು ಶೂಟಿಂಗ್ ಸಮಯದಿಂದ ಬಿಡುವು ಮಾಡಿಕೊಂಡು ವಿದೇಶಕ್ಕೆ ತೆರಳಿದ್ದೆ. ಅಲ್ಲಿ ಕೊಹ್ಲಿ ಜೊತೆಗೆ ರೆಸ್ಟೋರೆಂಟ್‌ಗೆ ತೆರಳಿ ಆಹಾರ ಸೇವಿಸಿ ಮರಳಿ ಬಂದಿದ್ದೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
 

46

ನಾನು ವಿರಾಟ್ ಕೊಹ್ಲಿಯನ್ನು ಭೇಟಿಯಾದಾಗ, ಅಥವಾ ವಿರಾಟ್ ಕೊಹ್ಲಿ ನನ್ನನ್ನು ಭೇಟಿಯಾದಾಗ ಇಬ್ಬರಿಗೂ ರಜಾ ದಿನ ಎಂದು ಭಾವಿಸುತ್ತಿದ್ದರು. ಆದರೆ ಹಾಗಲ್ಲ, ನಾವಿಬ್ಬರು, ಕ್ರೀಡಾಂಗಣದಲ್ಲಿ, ಶೂಟಿಂಗ್ ಸೆಟ್‌ನಲ್ಲಿ ಅಥವಾ ಇನ್ಯಾವುದೇ ಕಡೆ ಭೇಟಿಯಾದ ಒಬ್ಬರು ಕಲಸ ಮಾಡುತ್ತಿದ್ದರು. ಇಬ್ಬರು ಸಮಯ ಹೊಂದಿಸಿಕೊಂಡು ಜೊತೆಗಿರುವುದು ಅತ್ಯಂತ ಸವಾಲಾಗಿತ್ತು ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

56

ಸಿನಿಮಾ, ನಿರ್ಮಾಣ ಸೇರಿದಂತೆ ಹಲವು ಕೆಲಸಗಳಿಂದ ನಾನು ಬ್ರೇಕ್ ಪಡೆದಿದ್ದೇನೆ. ಮಕ್ಕಳನ್ನು ನೋಡಿಕೊಳ್ಳಲು, ನಾವು ಜೊತೆಗಿರಲು, ಸಮಯ ಕಳೆಯಲು ಬ್ರೇಕ್ ಪಡೆದಿದ್ದೇನೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ಇತ್ತ  ವಿರಾಟ್ ಕೊಹ್ಲಿ ಕೂಡ ಇತ್ತೀಚೆಗೆ ಟೆಸ್ಚ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರೆ. ಈಗಾಗಲೇ ಟಿ20 ಕ್ರಿಕೆಟ್‌ಗೂ ವಿದೆಯಾ ಹೇಳಿದ್ದಾರೆ. ಈಗ ಕೇವಲ ಏಕದಿನದಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಚ್ಚಿನ ಸಮಯವನ್ನು ಕುಟುಂಬದ ಜೊತೆ ಕಳೆಯಲು ನಿರ್ಧರಿಸಿದ್ದಾರೆ. 

66

ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅತ್ಯುತ್ತಮ ಫಾರ್ಮ್, ಕರಿಯರ್ ಪೀಕ್ ಸಮಯದಲ್ಲೇ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ಕೊಹ್ಲಿ ಒಂದಷ್ಟು ಕಾಲ ಟೆಸ್ಟ್ ಮಾದರಿಯಲ್ಲೂ ಕಾಣಿಸಿಕೊಳ್ಲಬೇಕಿತ್ತು ಅನ್ನೋದು ಅಭಿಮಾನಿಗಳ ಆಸೆಯಾಗಿತ್ತು. ಹಲವು ಕ್ರಿಕೆಟಿಗರು ಕೊಹ್ಲಿ ವಿದಾಯಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Read more Photos on
click me!

Recommended Stories