ತಮಿಳು ನಟ ವಿಶಾಲ್ ಕೃಷ್ಣ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ನಟಿ ಸಾಯಿ ಧನ್ಶಿಕಾ, ವಿಶಾಲ್ ಕೃಷ್ಣ ಅವರು ಶೀಘ್ರವೇ ಮದುವೆ ಆಗಲಿದ್ದಾರೆ. ಇವರ ವಿವಾಹವು ಆಗಸ್ಟ್ 29 ರಂದು ನಡೆಯಲಿದೆಯಂತೆ.
ತಮಿಳು ನಟ ವಿಶಾಲ್ ಕೃಷ್ಣ ನಟಿ ಸಾಯಿ ಧನ್ಶಿಕಾ ಅವರನ್ನು ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಈ ವಿವಾಹವು ಆಗಸ್ಟ್ ಅಥವಾ ಸೆಪ್ಟೆಂಬರ್ 2025 ರಲ್ಲಿ ನಡೆಯಬಹುದು. ಸಾಯಿ ಧನ್ಶಿಕಾ ಅವರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ವಿಶಾಲ್ ಭಾಗಿಯಾಗಿದ್ದರು. ಆ ವೇಳೆ ನಟ ವಿಶಾಲ್ ಅವರು ತಮ್ಮ ಜೀವನ ಸಂಗಾತಿ ಸಿಕ್ಕಿದ್ದಾರೆ ಎಂದು ದೃಢಪಡಿಸಿದ್ದಾರೆ. ಅವರು ಈಗ ತಮ್ಮ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ
26
ವಿಶಾಲ್ ಕೃಷ್ಣ ಮದುವೆಗೆ ಸಿದ್ಧ
ತಮಿಳು ನಟ ವಿಶಾಲ್ ಕೃಷ್ಣ ಅಂತಿಮವಾಗಿ ಮದುವೆಗೆ ಸಿದ್ಧರಾಗಿದ್ದಾರೆ. ದೀರ್ಘ ಊಹಾಪೋಹಗಳ ನಂತರ 47 ವರ್ಷದ ನಟ ಮದುವೆಯಾಗಲು ಸಿದ್ಧರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ನಾನು ಧನ್ಶಿಕಾರನ್ನು ಲವ್ ಮಾಡ್ತಿದ್ದೀನಿ, ಮದುವೆ ಆಗ್ತೀನಿ, ತುಂಬ ಚೆನ್ನಾಗಿ ನೋಡಿಕೊಳ್ತೀನಿ. ನಮ್ಮ ಮದುವೆಗೆ ಬನ್ನಿ, ಆಶೀರ್ವದಿಸಿ ಎಂದು ವಿಶಾಲ್ ಅವರು ಹೇಳಿದ್ದಾರೆ.
36
ಸಾಯಿ ಧನ್ಶಿಕಾ: ಕಬಾಲಿ ಖ್ಯಾತಿಯ ನಟಿ
ನಟ ರಜನಿಕಾಂತ್ ಅವರ ಕಬಾಲಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಮೆಚ್ಚುಗೆ ಗಳಿಸಿದ್ದಾರೆ. ಈ ಚಿತ್ರದಲ್ಲಿ ಅವರು ದಕ್ಷಿಣದ ದಿಗ್ಜ ನಟರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಮದುವೆ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡಬೇಕಿದೆ.
ಸಾಕಷ್ಟು ಸಿನಿಮಾಗಳಲ್ಲಿ ಸದ್ದು ಮಾಡಿರುವ ನಟ ವಿಶಾಲ್ ಆಗಾಗ ಕಾಂಟ್ರವರ್ಸಿ ವಿಷಯಗಳಿಗೆ ಅಥವಾ ಆರೋಗ್ಯದ ವಿಚಾರವಾಗಿ ಸದ್ದು ಮಾಡಿದ್ದರು. ಸಾಯಿ ಧನ್ಶಿಕಾ, ವಿಶಾಲ್ ಅವರು ಹಲವು ತಿಂಗಳುಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ವಿವಾಹದ ಮೊದಲು ಈ ಜೋಡಿ ನಿಶ್ಚಿತಾರ್ಥವನ್ನು ಘೋಷಿಸಬಹುದು. ವಿವಾಹವು ಆಗಸ್ಟ್ 29 ಸೆಪ್ಟೆಂಬರ್ 2025ರಲ್ಲಿ ನಡೆಯುವ ನಿರೀಕ್ಷೆಯಿದೆ.
56
ಮದುವೆಯ ವದಂತಿಗಳು
ಸಾಯಿ ಧನ್ಶಿಕಾ ಮತ್ತು ವಿಶಾಲ್ ಕೃಷ್ಣ ಇಬ್ಬರೂ ಮದುವೆಯ ಸುದ್ದಿಗಳನ್ನು ದೃಢಡಿಸಿದ್ದಾರೆ. ಮದುವೆ ಬಗ್ಗೆ ಈಗಲೇ ಎಲ್ಲ ಮಾಹಿತಿಯನ್ನು ಹೇಳಿಕೊಂಡರೆ ಕಿಕ್ ಇರೋದಿಲ್ಲ. ನನ್ನ ತಂದೆ-ತಾಯಿ, ಧನ್ಶಿಕಾ ತಂದೆ-ತಾಯಿ, ಕೆಲವೇ ಕೆಲವು ಸ್ನೇಹಿತರನ್ನು ಬಿಟ್ಟರೆ ಈಗಲೇ ನಿಮಗೆ ನಾನು ನನ್ನ ಮದುವೆ ಜೀವನದ ಬಗ್ಗೆ ಹೇಳಿದ್ದೇನೆ. ನಿಮ್ಮನ್ನು ಬಿಟ್ಟು ನಾನು ಏನೂ ಮಾಡೋದಿಲ್ಲ. ಇಂದು ನಾನು ಚೆನ್ನಾಗಿ ನಿದ್ದೆ ಮಾಡ್ತೀನಿ ಎಂದು ವಿಶಾಲ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
66
ಸಾಯಿ ಧನ್ಶಿಕಾ ಯಾರು?
ಸಾಯಿ ಧನ್ಶಿಕಾ ಯಾರು?
ಸಾಯಿ ಧನ್ಶಿಕಾ ಕೂಡ ದಕ್ಷಿಣ ಭಾರತದ ಜನಪ್ರಿಯ ನಟಿ. ಅವರು ತಮಿಳು ಚಿತ್ರರಂಗದ ಪ್ರಸಿದ್ಧ ನಾಯಕಿ. ಪೆರನ್ಮೈ (2009), ಮಾಂಜ ವೇಲು (2010) ಮತ್ತು ನಿಲ್ ಗವಾನಿ ಸೆಲಾಥೆ (2010) ಚಿತ್ರಗಳಲ್ಲಿನ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.