ಬಚ್ಚನ್ ಮತ್ತು ಕಪೂರ್ ಕುಟುಂಬಗಳು ಪರಸ್ಪರ ಸಂಬಂಧಿಕರು. ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಕೈಗಾರಿಕೋದ್ಯಮಿ ನಿಖಿಲ್ ನಂದಾರನ್ನು ವಿವಾಹವಾಗಿದ್ದಾರೆ. ನಿಖಿಲ್ ನಂದಾ ರಾಜ್ ಕಪೂರ್ಪುತ್ರಿ ರಿತು ನಂದಾರ ಪುತ್ರ. ನಿಖಿಲ್ಕರೀನಾ ಮತ್ತು ಕರಿಷ್ಮಾ ಕಪೂರ್ ಕಸಿನ್ಸ್.ಆದ್ದರಿಂದ ಬಿಗ್ ಬಿ ಅವರ ಮಗಳು ಶ್ವೇತಾ ಕರೀನಾರಿಗೆ ಸಂಬಂಧದಲ್ಲಿ ಅತ್ತಿಗೆ.
ಪಟೌಡಿ ಮತ್ತು ಕಪೂರ್ ಫ್ಯಾಮಿಲಿ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ರಾಜ್ ಕಪೂರ್ ಅವರ ಮೊಮ್ಮಗಳು ಹಾಗೂ ರಣಧೀರ್ ಕಪೂರ್ ಅವರ ಪುತ್ರಿ ಕರೀನಾ ಪಟೌಡಿ ಕುಟುಂಬದ ಸೊಸೆ .
ಹಿರಿಯ ನಟಿಯರಾದ ನೂತನ್ ಮತ್ತು ತನುಜಾ ಸಹೋದರಿಯರು. ತನುಜಾ ಮಗಳು ಕಾಜೋಲ್. ನೂತನ್ ಮಗ ಮೋಹ್ನೀಶ್ ಬೇಹ್ಲ್. ಇವರಿಬ್ಬರು ಕಸಿನ್ಸ್. ಇನ್ನು ಕಾಜೋಲ್ ಅಪ್ಪ ಶೋಮು ಮುಖರ್ಜಿ ಹಾಗೂ ರಾಣಿ ಮುಖರ್ಜಿ ಅಪ್ಪ ರಾಮ್ ಮುಖರ್ಜಿ ಸಹ ಕಸಿನ್ಸ್. ಹಾಗಾಗಿ ರಾಣಿ ಹಾಗೂ ಕಾಜೋಲ್ ಸಹ ಹತ್ತಿರದ ಸಂಬಂಧಿಗಳೇ.
ಸಂಜಯ್ ದತ್ ಸಹೋದರಿ ನಮ್ರತಾ ದತ್ ಹಳೆಯ ಸ್ಟಾರ್ ರಾಜೇಂದ್ರ ಅವರ ಪುತ್ರ ಕುಮಾರ್ ಗೌರವ್ ಅವರ ಪತ್ನಿ. ಹಾಗಾಗಿ ಸಂಜಯ್ ಮತ್ತು ಕುಮಾರ್ ಗೌರವ್ ನಡುವೆ ಭಾವನೆಂಟನ ಸಂಬಂಧವಿದೆ.
ಕರಣ್ ಜೋಹರ್ ಅವರ ತಾಯಿ ಹೀರು ಜೋಹರ್ ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗೆ ಅತ್ತೆ. ಅದರಂತೆ ಆದಿತ್ಯ ಅವರ ಪತ್ನಿ ರಾಣಿ ಮುಖರ್ಜಿ ಸಂಬಂಧದಲ್ಲಿ ಕರಣ್ ಅವರ ಅತ್ತಿಗೆ.
ಸೋನಮ್ ಕಪೂರ್ ಮತ್ತು ರಣವೀರ್ ಸಿಂಗ್ ಸಂಬಂಧದಲ್ಲಿ ಕಸಿನ್ಸ್. ವಾಸ್ತವವಾಗಿ, ರಣವೀರ್ ಅವರ ಅಜ್ಜಿ ಮತ್ತು ಸೋನಮ್ ಕಪೂರ್ ಅವರ ಅಜ್ಜಿ ಸಹೋದರಿಯರು.
ಫರ್ಹಾನ್, ಜೊಯಾ ಅಖ್ತರ್ ಮತ್ತು ಫರಾಹ್-ಸಾಜಿದ್ ಖಾನ್ ಕಸಿನ್ಸ್. ಇದರ ಪ್ರಕಾರ, ಈ ನಾಲ್ವರು ನಡುವೆ ಸಹೋದರ ಸಹೋದರಿಯರ ಸಂಬಂಧವಿದೆ.
ಹಿಂದಿನ ನಟಿಯರಾದ ಸಾಧನಾ ಮತ್ತು ಬಬಿತಾ ಸೋದರ ಸಂಬಂಧಿಗಳು.ಈ ನಟಿಯರ ತಂದೆ ಖಾಸಾ ಸಹೋದರರು. ಇದರ ಪ್ರಕಾರ ಕರಿನಾ ಮತ್ತು ಕರೀನಾ ಕಪೂರ್ ಹಿರಿಯ ನಟಿ ಸಾಧನರ ಸೋದರ ಸೊಸೆ.
ಆಲಿಯಾ ಭಟ್ ಮತ್ತು ಎಮ್ರಾನ್ ಹಶ್ಮಿ ಅಣ್ಣ ತಂಗಿಯಾಗಬೇಕು. ಏಕೆಂದರೆ, ಆಲಿಯಾಳ ತಂದೆ ಮಹೇಶ್ ಭಟ್, ಎಮ್ರಾನ್ ಹಶ್ಮಿಗೆ ಚಿಕ್ಕಪ್ಪ.