ಅಫ್ಘಾನಿಸ್ತಾನದಲ್ಲಿ ಶೂಟ್‌ ಮಾಡಲಾದ ಬಾಲಿವುಡ್‌ ಸಿನಿಮಾಗಳಿವು!

Suvarna News   | Asianet News
Published : Aug 19, 2021, 06:33 PM ISTUpdated : Aug 19, 2021, 08:11 PM IST

ಪ್ರಸ್ತುತ ಅಫ್ಘಾನಿಸ್ತಾನ ಚರ್ಚೆಯ ಹಾಟ್‌ ಟಾಪಿಕ್‌. ತಾಲಿಬಾನ್ 20 ವರ್ಷಗಳ ನಂತರ ಮತ್ತೊಮ್ಮೆ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ಅಲ್ಲಿನ ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆದರೆ ಆ ದೇಶದ ಸ್ಥಿತಿ ಮೊದಲು ಇಷ್ಟು ಭಯಂಕರವಾಗಿರಲಿಲ್ಲ. ಈ ಅಫ್ಘಾನಿಸ್ತಾನದಲ್ಲಿ ಅನೇಕ ಬಾಲಿವುಡ್ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಅವು ಯಾವುವು ಇಲ್ಲಿದೆ ನೋಡಿ.  

PREV
16
ಅಫ್ಘಾನಿಸ್ತಾನದಲ್ಲಿ ಶೂಟ್‌ ಮಾಡಲಾದ ಬಾಲಿವುಡ್‌ ಸಿನಿಮಾಗಳಿವು!

ಧರ್ಮಾತ್ಮ:
ಅಫ್ಘಾನಿಸ್ತಾನದಲ್ಲಿ ಚಿತ್ರೀಕರಿಸಿದ ಮೊದಲ ಭಾರತೀಯ ಚಿತ್ರ ಧರ್ಮಾತ್ಮ. 46 ವರ್ಷಗಳ ಹಿಂದೆ 1975ರಲ್ಲಿ ಬಿಡುಗಡೆಯಾದ 'ಧರ್ಮಾತ್ಮ' ಚಿತ್ರ ಆ ಕಾಲದ ಸೂಪರ್‌ಹಿಟ್ ಚಿತ್ರಗಳಲ್ಲಿ ಒಂದು. ಇದರಲ್ಲಿ ಹೇಮಾ ಮಾಲಿನಿ ಮತ್ತು ಫಿರೋಜ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಅಫ್ಘಾನಿಸ್ತಾನದ ಅನೇಕ ಸುಂದರ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. 

26

ಖುದಾ ಗವಾ:
ಅಮಿತಾಬ್ ಬಚ್ಚನ್ ಮತ್ತು ಶ್ರೀದೇವಿ ಅವರ ಈ ಸಿನಿಮಾವನ್ನು ಮುಕುಲ್ ಆನಂದ್ ನಿರ್ದೇಶಿಸಿದ್ದಾರೆ. ಕಾಬೂಲ್ ಮತ್ತು ಮಜರ್-ಇ-ಶರೀಫ್ ನಲ್ಲಿ ಖುದಾ ಗಾವದ ಹಲವು ದೃಶ್ಯಗಳನ್ನು ಶೂಟ್‌ ಮಾಡಲಾಗಿದೆ. ಚಿತ್ರೀಕರಣದ ಸಮಯದಲ್ಲಿ, ಅಂದಿನ ಅಧ್ಯಕ್ಷ ಮೊಹಮ್ಮದ್ ನಜಿಬ್ಬುಲ್ಲಾ ಅವರು ಅಮಿತಾಬ್ ಭದ್ರತೆಗಾಗಿ ಅರ್ಧ ಅಫ್ಘಾನ್ ಸೇನೆಯನ್ನು ನಿಯೋಜಿಸಿದ್ದರು.

36

ತೋರ್ಬಾಜ್:
ನಿರ್ದೇಶಕ ಗಿರೀಶ್ ಮಲಿಕ್ ಅವರ ಸಿನಿಮಾ ತೋರ್ಬಾಜ್ 2020ರಲ್ಲಿ ಬಿಡುಗಡೆಯಾಯಿತು. ಸಂಜಯ್ ದತ್, ನರ್ಗಿಸ್ ಫಕ್ರಿ, ರಾಹುಲ್ ದೇವ್  ನಟಿಸಿರುವ ಈ ಸಿನಿಮಾದ ಕಥೆ ಅಫ್ಘಾನಿಸ್ತಾನದ ಮಕ್ಕಳ ಆತ್ಮಹತ್ಯಾ ಬಾಂಬರ್‌ಗಳನ್ನು ಆಧರಿಸಿದೆ. ಇದನ್ನು ಅಫ್ಘಾನಿಸ್ತಾನದ ವಿವಿಧ ಪ್ರದೇಶಗಳಲ್ಲಿ ಶೂಟ್‌ ಮಾಡಲಾಗಿದೆ. ಬಿಷ್ಕೆಕ್ ಮತ್ತು ಕಿರ್ಗಿಸ್ತಾನ್‌ನಲ್ಲಿ ಚಿತ್ರೀಕರಿಸಲಾಗಿದೆ.

46

ಏಜೆಂಟ್ ವಿನೋದ್:
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಏಜೆಂಟ್ ವಿನೋದ್ ಸಿನಿಮಾದ ಹಲವು ದೃಶ್ಯಗಳಲ್ಲಿ ಅಫ್ಘಾನಿಸ್ತಾನವನ್ನು ಕಾಣಬಹುದಾಗಿದೆ. ನಿರ್ದೇಶಕ ಶ್ರೀರಾಮ್ ರಾಘವನ್ ಅವರ ಈ ಆಕ್ಷನ್-ಸ್ಪೈ, ಸಿನಿಮಾದ ಸಿನಿಮಾದ ಹಾಡುಗಳು ಸಕ್ಕತ್‌ ಹಿಟ್‌ ಆಗಿದ್ದವು. 

56

ಕಾಬೂಲ್ ಎಕ್ಸ್‌ಪ್ರೆಸ್:
ಜಾನ್ ಅಬ್ರಹಾಂ ಮತ್ತು ಅರ್ಷದ್ ವಾರ್ಸಿ ಅವರ ಕಾಬೂಲ್ ಎಕ್ಸ್‌ಪ್ರೆಸ್ ಅಫ್ಘಾನಿಸ್ತಾನದಲ್ಲಿ  ಶೂಟ್‌ ಮಾಡಿದ ಇನ್ನೊಂದ ಬಾಲಿವುಡ್‌ ಸಿನಿಮಾ. ಚಿತ್ರದ ಹೆಸರೇ ಸೂಚಿಸುವಂತೆ, ಇದು ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್ ಅನ್ನು ಒಳಗೊಂಡಿದೆ. ಸಿನಿಮಾದ  ಹಲವು ದೃಶ್ಯಗಳನ್ನು ಗ್ರೀನ್ ಪ್ಯಾಲೇಸ್, ಬಾಲ ಹಿಸ್ಸಾರ್ ಕೋಟೆ, ದಾರುಲ್ ಅಮಾನ್ ಪ್ಯಾಲೇಸ್ ಮತ್ತು ಪಂಜಶೀರ್ ವ್ಯಾಲಿಯಲ್ಲಿ ಶೂಟ್‌ ಮಾಲಾಗಿದೆ.

66

ಜನ್ ಶೀನ್
ಫರ್ದೀನ್ ಖಾನ್ ಮತ್ತು ಸೆಲಿನಾ ಜೇಟ್ಲಿ ಅವರ ರೊಮ್ಯಾಂಟಿಕ್ ಸಿನಿಮಾ ಜನ್‌ಶೀನ್ ಚಿತ್ರೀಕರಣವನ್ನು ಅಫ್ಘಾನಿಸ್ತಾನದಲ್ಲಿ ಮಾಡಲಾಗಿದೆ. ಈ ಚಿತ್ರವನ್ನು ಚಿತ್ರೀಕರಿಸಿದಾಗ, ಅಫ್ಘಾನಿಸ್ತಾನ ಮತ್ತು ತಾಲಿಬಾನ್ ನಡುವೆ ಯುದ್ಧ ನಡೆಯುತ್ತಿತ್ತು. ಇದರ ಹೊರತಾಗಿಯೂ, ಫಿರೋಜ್ ಖಾನ್ ಅಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದರು. 

click me!

Recommended Stories