ಸುನೀಲ್‌ ಶೆಟ್ಟಿ ಪುತ್ರಿಯ ಬಳಿ ಕ್ಷಮೆ ಕೇಳಿದ ಸಲ್ಲೂ ಬಾಯ್‌!

Published : Aug 07, 2021, 02:42 PM IST

ಈ ದಿನಗಳಲ್ಲಿ ಸುನೀಲ್‌ ಶೆಟ್ಟಿ ಪುತ್ರಿ ನಟಿ ಅಥಿಯಾ ಶೆಟ್ಟಿ ಸಕ್ಕತ್‌ ಸೌಂಡ್‌ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರ ರೂಮರ್ಡ್‌ ಬಾಯಫ್ರೆಂಡ್‌ ಕ್ರಿಕೆಟಿಗ ಕೆ ಎಲ್‌ ರಾಹುಲ್‌ ಜೊತೆ ಲಂಡನ್‌ನಲ್ಲಿ ಕಾಲಕಳೆಯುತ್ತಿದ್ದಾರೆ. ಇದರ ನಡುವೆ ಅಥಿಯಾರಿಗೆ ಸಂಬಂಧಿಸಿದ  ಘಟನೆಯೊಂದು ವೈರಲ್‌ ಆಗಿದೆ. ಇದರಲ್ಲಿ ಸಲ್ಮಾನ್‌ ಖಾನ್‌ ಅಥಿಯಾಗೆ ಕ್ಷಮೆ ಕೇಳಿಕೇಳಿರುವುದು ಕಂಡುಬರುತ್ತದೆ. ಸೂಪರ್‌ಸ್ಟಾರ್‌ ಸಲ್ಲೂ ಬಾಯ್‌ ಸುನೀಲ್‌ ಶೆಟ್ಟಿ ಪುತ್ರಿಗೆ ಸಾರಿ ಕೇಳಲು ಕಾರಣವೇನು ಗೊತ್ತಾ?

PREV
110
ಸುನೀಲ್‌ ಶೆಟ್ಟಿ ಪುತ್ರಿಯ ಬಳಿ ಕ್ಷಮೆ ಕೇಳಿದ ಸಲ್ಲೂ ಬಾಯ್‌!

ಸಲ್ಮಾನ್ ಖಾನ್ ಮತ್ತು ಸುನೀಲ್ ಶೆಟ್ಟಿ ತುಂಬಾ ಒಳ್ಳೆಯ ಸ್ನೇಹವನ್ನು ಹಂಚಿಕೊಂಡಿದ್ದಾರೆ. ಅವರ ಈ ಸಂಬಂಧ ಬಹಳ ಹಿಂದಿನಿಂದಲೂ ಇದೆ. ಇಬ್ಬರೂ ಬಾಲಿವುಡ್‌ನ ಬೆಸ್ಟ್‌ ಫ್ರೆಂಡ್ಸ್‌ನಲ್ಲಿ ಒಬ್ಬರು. 

210

ಸಲ್ಮಾನ್ ಖಾನ್ ಶೆಟ್ಟಿಯ ಮಗಳು ಅಥಿಯಾ ಶೆಟ್ಟಿಯೊಂದಿಗೆ ಉತ್ತಮ ಇಕ್ವೇಷನ್‌ ಹೊಂದಿದ್ದಾರೆ. ಅಥಿಯಾ ನಟಿಸಿದ ಹೀರೋ ಸಿನಿಮಾವನ್ನು ಸಲ್ಮಾನ್‌ ಖಾನ್‌  ನಿರ್ಮಿಸಿದರು. 

310

ಸಲ್ಮಾನ್ ಖಾನ್ ಇತ್ತೀಚೆಗೆ ತನ್ನ ಸಹೋದರನ ಚಾಟ್ ಶೋ ಪಿಂಚ್ ಸೀಸನ್ 2 ನಲ್ಲಿ ಕಾಣಿಸಿಕೊಂಡರು. 

410

ಈ ಸಮಯದಲ್ಲಿ ಅಥಿಯಾರಿಗೆ ಸಲ್ಮಾನ್‌ ಖಾನ್‌  ತಮಾಷೆಯಾಗಿ ಕ್ಷಮೆಯಾಚಿಸಿದರು.

510

ಕತ್ರಿನಾ ಕೈಫ್, ಅಥಿಯಾ ಶೆಟ್ಟಿ ಮತ್ತು ಸಂಗೀತ ಬಿಜಲಾನಿ  ಈ ಮೂವರಲ್ಲಿ ಯಾವ ನಟಿಯನ್ನು ಸಲ್ಮಾನ್‌ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿಲ್ಲ ಎಂದು ಕೇಳಲಾಯಿತು.

610

ಸಲ್ಮಾನ್ ಸಂಗೀತಾ ಎಂದು ಗೆಸ್‌ ಮಾಡಿದ್ದರು. ಆದರೆ  ಸರಿಯಾದ ಉತ್ತರ ಅಥಿಯಾ ಶೆಟ್ಟಿ ಆಗಿತ್ತು.

710

ಅಥಿಯಾರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡದೆ ಇರುವುದ್ದಕ್ಕಾಗಿ  ತಮಾಷೆಯಾಗಿ ಸಾರಿ ಕೇಳಿದರು ಮತ್ತು ನಟಿಯನ್ನು ಫಾಲೋ ಮಾಡುವುದಾಗಿ  ಪ್ರಾಮಿಸ್‌ ಕೂಡ ಮಾಡಿದರು ಸಲ್ಲೂ ಬಾಯಿ.  

810

ಸಲ್ಮಾನ್‌ ಏನೇ ಮಾಡಿದರೂ ಅವನು ತನ್ನ ಹೃದಯದಿಂದ ಮಾಡುತ್ತಾನೆ. ಆತ ಪರದೆಯ ಮೇಲೆ ಅಥಿಯಾಗೆ ಕ್ಷಮಿಸಿ ಎಂದು ಹೇಳಿದ್ದು ತುಂಬಾ ಕ್ಯೂಟ್‌ ಸಂಗತಿಯಾಗಿದೆ. ಅವರು ಒಂದು ಸುಂದರ ಸಂಬಂಧವನ್ನು ಹೊಂದಿದ್ದಾರೆ. ನಾನು  ಅವನೊಂದಿಗಿನ ಸಂಬಂಧವನ್ನು ಯಾವಾಗಲೂ ಚೆರಿಶ್‌ ಮಾಡುತ್ತೇನೆ ಎಂದು ಅಥಿಯಾ ತಂದೆ ಸುನೀಲ್ ಶೆಟ್ಟಿ ಇದಕ್ಕೆ ಪ್ರತಿಕ್ರಿಯಿಸಿ ಹೇಳಿದರು.

910

ಅಥಿಯಾ ಕೊನೆಯದಾಗಿ ಮೋತಿಚೂರ್ ಚಕ್ರನಾಚೂರಿನಲ್ಲಿ ಕಾಣಿಸಿಕೊಂಡರು.
 

 

1010

ಸಲ್ಮಾನ್ ಕೊನೆಯದಾಗಿ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

click me!

Recommended Stories