ಈ ಕಾರಣಕ್ಕೆ ಸಿನಿಮಾವನ್ನೇ ತೊರೆದ ಅಕ್ಷಯ್‌ಕುಮಾರ್‌ ಪತ್ನಿ ಟ್ವಿಂಕಲ್‌!

Suvarna News   | Asianet News
Published : Aug 06, 2021, 07:10 PM IST

ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಆದರೂ ಅವರ ಬಾಲಿವುಡ್ ವೃತ್ತಿ ಜೀವನ ದೊಡ್ಡ  ಫ್ಲಾಪ್ ಎಂದೇ ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣ ಅವರ ಸಿನಿಮಾಗಳು ಹಿಟ್ ಆಗದಿದ್ದು ಅವರ ಹೆಸರಿನಿಂದಲ್ಲ, ಬದಲಾಗಿ ಅವರ ಕೋಸ್ಟಾರ್‌ಗಳಿಂದಾಗಿ. ಟ್ವಿಂಕಲ್‌ ಖನ್ನಾ 8 ವರ್ಷಗಳ ಕಾಲ ಉದ್ಯಮದಲ್ಲಿ ಕೆಲಸ ಮಾಡಿದರು ಮತ್ತು ನಂತರ ಸ್ವತಃ ನಟನೆಗೆ ವಿದಾಯ ಹೇಳಿದರು. ಆಕೆ 2001ರಲ್ಲಿ ಲವ್ ಕೆ ಲಿಯೇ ಕುಚ್ ಭೀ ಕರೆಗಾ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

PREV
113
ಈ ಕಾರಣಕ್ಕೆ ಸಿನಿಮಾವನ್ನೇ ತೊರೆದ ಅಕ್ಷಯ್‌ಕುಮಾರ್‌ ಪತ್ನಿ ಟ್ವಿಂಕಲ್‌!

ಇತ್ತೀಚಿನ ಸಂದರ್ಶನವೊಂದರಲ್ಲಿ, ಟ್ವಿಂಕಲ್‌ ನಟನೆಯನ್ನು ತೊರೆಯಲು ಕಾರಣವನ್ನು ಬಹಿರಂಗಪಡಿಸಿದರು. 

213

ಟ್ವಿಂಕಲ್ ಬಾಲಿವುಡ್‌ನ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾರ ಪುತ್ರಿ. ಈ ಕಾರಣದಿಂದಾಗಿ ಟ್ವಿಂಕಲ್ ಖನ್ನಾ ಬೇರೆ ಕ್ಷೇತ್ರದಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಲಿಲ್ಲ. ಪೋಷಕರಂತೆ, ಟ್ವಿಂಕಲ್ ಕೂಡ ಕೆರಿಯರ್‌ಗಾಗಿ ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. 

313

1995 ರ ಬರ್ಸಾತ್ ಚಿತ್ರದ ಮೂಲಕ ಉದ್ಯಮವನ್ನು ಪ್ರವೇಶಿಸಿದರು. ನಾಯಕ ಬಾಬಿ ಡಿಯೋಲ್‌ಗೆ ಸಹ ಇದು ಚೊಚ್ಚಲ ಚಿತ್ರವಾಗಿತ್ತು  ಬರ್ಸಾತ್‌ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು.

413

ಇತ್ತೀಚೆಗೆ, ಟ್ವಿಂಕಲ್ ಮಾಧ್ಯಮವೊಂದಕ್ಕೆ ತಮ್ಮ ವೃತ್ತಿ ಜೀವನದ ಬಗ್ಗೆ ಮತ್ತು ಸಿನಿಮಾವನ್ನು ಬಿಡಲು ಕಾರಣದ ಬಗ್ಗೆ ಮಾತನಾಡಿದರು. 

513

ನಾನು ಮೊದಲಿನಿಂದಲೂ ಓದುವುದದರಲ್ಲಿ ತುಂಬಾ ಚುರುಕಾಗಿದ್ದೆ. ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸಿದ್ದೆ. ಆದರೆ ವಿಧಿಯಲ್ಲಿ ಬೇರೇನೋ ಇದ್ದುದರಿಂದ ಇದು ಸಾಧ್ಯವಾಗಲಿಲ್ಲ. ಎಂದು ಟ್ವಿಂಕಲ್ ಹೇಳಿದರು.

613

ನನ್ನ ಜೀವನದಲ್ಲಿ ದೊಡ್ಡ ಸಮಸ್ಯೆ ಎಂದರೆ ನನ್ನ ತಂದೆ-ತಾಯಿ ಇಬ್ಬರೂ ದೊಡ್ಡ ಬಾಲಿವುಡ್ ಸ್ಟಾರ್‌ಗಳು. ಆದ್ದರಿಂದ ನಾನು ನಟನೆಯನ್ನು ಹೊರತುಪಡಿಸಿ, ಬೇರೆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅವರ ತಾಯಿ ಡಿಂಪಲ್‌ನಿಂದಾಗಿ ನಟನಾ ಕ್ಷೇತ್ರಕ್ಕೆ ಪ್ರವೇಶಿಸಿದರು ಎಂದು ಅವರು ಸಂದರ್ಶನದಲ್ಲಿ ಹೇಳಿದರು.

713

ನೀನು ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸಿದರೆ, ಜನಪ್ರಿಯ ನಟಿಯಾದ ನಂತರವೂ ಆ ಕೆಲಸವನ್ನು ಮಾಡಬಹುದು. ಆದರೆ ಈಗ ನೀನು  ಚಾರ್ಟರ್ಡ್ ಅಕೌಂಟೆಂಟ್ ಅನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರೆ ನಂತರ  ನಟಿಯಾಗುವುದು ತುಂಬಾ ಕಷ್ಟ ಎಂದು ತಾಯಿ ನನಗೆ ಹೇಳಿದರು, ಎಂಬ ವಿಷಯ ಇಂಟರ್‌ವ್ಯೂವ್‌ನಲ್ಲಿ ಬಹಿರೊಂಗ ಪಡಿಸಿದ ಅಕ್ಷಯ್‌ ಕುಮಾರ್‌ ಪತ್ನಿ. 

813

8 ವರ್ಷಗಳ ಕಾಲ ನಿರಂತರವಾಗಿ ಸಿನಿಮಾಗಳಲ್ಲಿ ಕೆಲಸ ಮಾಡಿದ ನಂತರ, ನಾನು ಒಬ್ಬ ನಟಿಯಾಗಿ ಸಂಪೂರ್ಣವಾಗಿ ವಿಫಲನಾಗಿದ್ದೇನೆ ಎಂದು ನಾನು ಭಾವಿಸಿದೆ. ಆದರೆ ನಾನು ಬೇರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ ಎಂದು ಇನ್ನಷ್ಟು ಹೇಳಿಕೊಂಡರು

913

ಟ್ವಿಂಕಲ್‌ ಬರವಣಿಗೆಯಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದರು ಮತ್ತು ಯಶಸ್ಸನ್ನು ಪಡೆದರು. ಇಲ್ಲಿಯವರೆಗೆ ಇವರ ಅನೇಕ ಪುಸ್ತಕಗಳು ಪ್ರಕಟವಾಗಿವೆ.
 


 

1013

ಬಾಲಿವುಡ್‌ನಲ್ಲಿ ಕೆಲಸ ಮಾಡದಿದ್ದಾಗ, ಟ್ವಿಂಕಲ್ ಚಲನಚಿತ್ರಗಳನ್ನು ನಿರ್ಮಿಸಲು ಪ್ರಾರಂಭಿಸಿದರು. ಆಕೆಯ ಪತಿ ಅಕ್ಷಯ್ ಕುಮಾರ್ ಅವರ ಅನೇಕ  ಸಿನಿಅಮಗಳನ್ನು ನಿರ್ಮಿಸಿದ್ದಾರೆ.  ಪಟಿಯಾಲ ಹೌಸ್, ಪ್ಯಾಡ್ ಮ್ಯಾನ್, ತೀಸ್ ಮಾರ್ ಖಾನ್, ಥ್ಯಾಂಕ್ಸ್‌, ಖಿಲಾಡಿ 786, ಹಾಲಿಡೇ ಅವುಗಳಲ್ಲಿ ಸೇರಿವೆ.


 

1113

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅಂತಾರಾಷ್ಟ್ರೀಯ ಖಿಲಾಡಿ ಚಿತ್ರದ ಶೂಟಿಂಗ್‌ನಲ್ಲಿ  ಭೇಟಿಯಾದರು. ಈ ಸಮಯದಲ್ಲಿ ಇಬ್ಬರೂ ಹತ್ತಿರ ಬಂದರು. 

1213

ಅಕ್ಷಯ್‌ ಟ್ವಿಂಕಲ್‌ ಖನ್ನಾರಿಗೆ ಪ್ರಫೋಸ್‌ ಮಾಡಿದಾಗ ನಟಿ ತನ್ನ ಚಿತ್ರ ಮೇಳ ಫ್ಲಾಪ್ ಆದರೆ ಮದುವೆಯಾಗುವುದಾಗಿ ಹೇಳಿದ್ದರು. ಅದು ಕಾಕತಾಳೀಯವಾಗಿ ಸಂಭವಿಸಿತು.

1313

ಅಕ್ಷಯ್-ಟ್ವಿಂಕಲ್ ಜನವರಿ 2001ರಲ್ಲಿ ವಿವಾಹವಾದರು. ಟ್ವಿಂಕಲ್‌ಗೆ 2002 ರಲ್ಲಿ ಮಗ ಆರವ್ ಮತ್ತು 2012 ರಲ್ಲಿ ಮಗಳು ನಿತಾರಾ ಜನಿಸಿದರು. 

click me!

Recommended Stories