ಒಂದು ಕಾಲದಲ್ಲಿ ಕರಿಷ್ಮಾ ಕಪೂರ್ ಮತ್ತು ರವೀನ್ ಟಂಡನ್ ನಡುವಿನ ಜಗಳ ಸಾಕಷ್ಟು ಸುದ್ದಿ ಮಾಡಿತ್ತು.
undefined
ಶಾರುಖ್ ಖಾನ್ ಅವರ ಹೋಳಿ ಪಾರ್ಟಿಯಲ್ಲಿ ರವೀನಾ ಮತ್ತು ಕರಿಷ್ಮಾ ಜಗಳ ಮಾಡಿದ್ದರು ಎಂದು ಹೇಳಲಾಗುತ್ತದೆ.
undefined
ರವೀನಾ ಅವರು ಅಜಯ್ ದೇವ್‌ಗನ್‌ರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು. ಆದರೆ ಕರಿಷ್ಮಾ ಕಪೂರ್‌ಗಾಗಿ ಅಜಯ್ ರವೀನಾರನ್ನು ಬಿಟ್ಟರಂತೆ.
undefined
ಈ ಹಳೆಯ ಸಂದರ್ಶನದಲ್ಲಿ, ಒಮ್ಮೆ ಅಜಯ್ ದೇವ್‌ಗನ್ ಮತ್ತು ಕರಿಷ್ಮಾ ಕಪೂರ್ ಅವರ ಫಿಲ್ಮಿ ಕೆರಿಯರ್‌ಹಾಳು ಮಾಡಿದ್ದಾರೆ ಮತ್ತು ಪರೋಕ್ಷವಾಗಿ ಇವರಿಬ್ಬರು ರವೀನಾರನ್ನು ನಾಲ್ಕು ಚಿತ್ರಗಳಿಂದ ಬಿಡಲುಸೂಚಿಸಿದರು ಎಂದು ಟಂಡನ್ ಅರೋಪಿಸಿದರು.
undefined
ಅದೇ ಸಂದರ್ಶನದಲ್ಲಿ, ರವೀನಾ ಖಾನ್ ಹೋಳಿ ಪಾರ್ಟಿಯ ಬಗ್ಗೆ ಮಾತನಾಡಿದರು, ಅಲ್ಲಿ ಮಾಧ್ಯಮ ಮತ್ತು ಅತಿಥಿಗಳ ಮುಂದೆ ಕರಿಷ್ಮಾ ಅವರನ್ನು ಅವಮಾನಿಸಿದರು ಎಂದೂ ಹೇಳಿದ್ದರು.
undefined
ರೆಡಿಫ್‌ಗಾಗಿ ಅಸಾದ್ ಅಹ್ಮದ್ ಅವರೊಂದಿಗೆ ಮಾತನಾಡಿದ ರವೀನಾ, ನಾನು ಹೀರೋಯಿನ್ ಹೆಸರು ಹೇಳುವುದಿಲ್ಲ. ಆದರೆ ಅವಳು ನನ್ನ ಬಗ್ಗೆ ಇನ್‌ಸೆಕ್ಯೂರ್ ಆಗಿ ನನ್ನನ್ನು ನಾಲ್ಕು ಚಿತ್ರಗಳಿಂದ ತೆಗೆದು ಹಾಕಿದ್ದಳು ಎಂದು ಹೇಳಿದ್ದಾರೆ.
undefined
'ವಾಸ್ತವವಾಗಿ, ನಾನು ಅವಳೊಂದಿಗೆ ಒಂದು ಸಿನಿಮಾ ಮಾಡಬೇಕಾಗಿತ್ತು. ಅವಳು ನಿರ್ಮಾಪಕ ಮತ್ತು ನಾಯಕನಿಗೆ ಕ್ಲೋಸ್ ಇದ್ದಳು. ಅದರಿಂದನನ್ನನ್ನು ತೆಗೆದು ಹಾಕಿದ್ದಳು. ಆದರೆ ನಾನು ಈ ರೀತಿಯ ಆಟ ವಾಡುವುದಿಲ್ಲ,' ಎಂದಿದ್ದರು.
undefined
ಆಗಿನ ಬಾಯ್ ಫ್ರೆಂಡ್ ಅಜಯ್ ದೇವ್‌ಗನ್ ಕಾರಣದಿಂದಾಗಿ ಕರಿಷ್ಮಾ ತನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದ್ದಾಳೆ, ಎಂದು ರವೀನಾ ಸುಳಿವು ನೀಡಿದ್ದಾರೆ.
undefined
ರವೀನಾ ಮತ್ತು ಕರಿಷ್ಮಾ ಒಮ್ಮೆ ಶಾರುಖ್ ಖಾನ್ ಅವರ ಹೋಳಿ ಪಾರ್ಟಿಯಲ್ಲಿ ಒಟ್ಟಿಗೆ ಫೋಟೋಗೆ ಪೋಸ್ ನಿಡಲು ಸಹ ನಿರಾಕರಿಸಿದರು. ಕರಿಷ್ಮಾ ಜೊತೆ ಏಕೆ ಪೋಸ್ ನೀಡಲಿಲ್ಲ ಎಂದು ರವೀನಾ ಅವರನ್ನು ಕೇಳಿದಾಗ, 'ನಾನು ಇಂದು ಕರಿಷ್ಮಾ ಕಪೂರ್ ಜೊತೆಪೋಸ್ ನೀಡಿದರೆ ಅದು ನನ್ನನ್ನು ಸೂಪರ್ ಸ್ಟಾರ್ ಮಾಡುವುದಿಲ್ಲ. ಅವಳು ನನ್ನ ಜೀವನದಲ್ಲಿ ಯಾವುದೇ ರೀತಿಯಲ್ಲಿ ಮುಖ್ಯವಲ್ಲ,' ಎಂದು ಹೇಳಿದರು.
undefined
'ನಾನು ಯಾವುದಕ್ಕೂ ಹೆದರುವುದಿಲ್ಲ. ಅಗತ್ಯವಿದ್ದರೆ ಪೊರಕೆ ಜೊತೆ ಬೇಕಾದರೂ ಪೋಸ್ ನೀಡುತ್ತೇನೆ. ಕರಿಷ್ಮಾ ಮತ್ತು ನಾನು ಉತ್ತಮ ಸ್ನೇಹಿತರಲ್ಲ. ಅಜಯ್ ಜೊತೆಯೂ ಅಷ್ಟೇ. ವೃತ್ತಿಪರವಾಗಿ ನಾನು ಅಜಯ್ ಅಥವಾ ಕರಿಷ್ಮಾ ಅವರೊಂದಿಗೆ ಕೆಲಸ ಮಾಡಲು ಸಿದ್ಧನಿದ್ದೇನೆ. ಕೆಲಸದ ವಿಷಯ ಬಂದಾಗಇಗೋ ಪ್ರಾಬ್ಲಂ ಬಗ್ಗೆನಾನು ತಲೆಕೆಡಿಸಿಕೊಳ್ಳುವುದಿಲ್ಲ,' ಎಂದು ರವೀನಾ ಪಿಂಕ್ವಿಲ್ಲಾ ಹೇಳಿದ್ದಾರೆ.
undefined