ಮಾಲ್ಡೀವ್ಸ್‌ ವೆಕೇಷನ್‌ ನಂತರ ಉದಯ್‌ಪುರದಲ್ಲಿ ಜಾನ್ವಿ ಕಪೂರ್‌!

First Published | Apr 16, 2021, 5:43 PM IST

ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಇಂಟರ್ನೆಟ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ತಂಗಿ ಜೊತೆ ನ್ಯೂಯಾರ್ಕ್‌ ಹಾಗೂ ನಂತರ ಫ್ರೆಂಡ್ಸ್ ಜೊತೆ ಮಾಲ್ಡೀವ್ಸ್‌ನಲ್ಲಿ ವೆಕೇಷನ್‌ ಎಂಜಾಯ್‌ ಮಾಡಿದ ನಂತರ ರಾಜಸ್ಥಾನಕ್ಕೆ ಆಗಮಿಸಿದ್ದಾರೆ. ಆ್ಯಡ್‌ ಶೂಟ್‌ಗಾಗಿ ಉದಯಪುರಕ್ಕೆ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 
 

ಶ್ರೀದೇವಿ ಪುತ್ರಿ ಬಾಲಿವುಡ್‌ನ ನಟಿ ಜಾನ್ವಿ ಕಪೂರ್‌ ಪ್ರಸ್ತುತ ಉದಯಪುರದಲ್ಲಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆದ ನಂತರ ಜಾನ್ವಿ ಉದಯಪುರ ತಲುಪಿದರು.
Tap to resize

ಉದಯಪುರದ ಪಿಚೋಲಾ ಸರೋವರದ ದಡದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿದ್ದರು ನಟಿ.
ಪಿಚೋಲಾ ಸರೋವರದಲ್ಲಿ ಬೋಟ್‌ ರೈಡ್‌ ಎಂಜಾಯ್‌ ಮಾಡುತ್ತಿರುವ ಜಾನ್ವಿ ಕಪೂರ್‌.
ಜಾನ್ವಿಚೊಚ್ಚಲ ಸಿನಿಮಾ ಧಡಕ್ ಶೂಟಿಂಗ್ಉದಯಪುರದಲ್ಲೇ ನೆಡೆದಿತ್ತು. ಅದರ ನಂತರ ಜಾನ್ವಿ ಉದಯಪುರದ ಅನೇಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ರೂಹಿ ಸಿನಿಮಾದ ಸಕ್ಸಸ್ ನಂತರ ಮಾಲ್ಡೀವ್ಸ್ ವೆಕೇಷನ್‌ನಲ್ಲಿದ್ದ ಶ್ರೀದೇವಿ ಪುತ್ರಿಯ ಹಾಟ್ ಫೋಟೋ ವೈರಲ್ ಆಗಿತ್ತು.
ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆಮಾಲ್ಡೀವ್ಸ್‌ ತೆರಳಿದ್ದರು .
ಅದಕ್ಕೂ ಮೊದಲು ನ್ಯೂಯಾರ್ಕ್‌ನ ವೆಕೇಷನ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.

Latest Videos

click me!