Ajay Devgn ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಪಡೆದಿದ್ದಾರಾ?

First Published | Apr 27, 2022, 4:37 PM IST

ಅಜಯ್ ದೇವಗನ್ (Ajay Devgn ) ಅಭಿನಯದ ರನ್ವೇ 34 (Runway 34)  ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಟಿಸುವುದರ ಜೊತೆಗೆ ನಟ  ನಿರ್ದೇಶಕರ ಕುರ್ಚಿಯನ್ನು ಆಲಂಕರಿಸಿದ್ದಾರೆ, ಅವರ ನಿರ್ದೇಶನದ ಚೊಚ್ಚಲ ಸಿನಿಮಾ ಪ್ರಥಮ ಪ್ರದರ್ಶನಕ್ಕೆ ಕೇವಲ ನಾಲ್ಕು ದಿನಗಳಿರುವಾಗ, ಅಜಯ್ ದೇವಗನ್ ರನ್ವೇ 34 ಅನ್ನು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
 

ರನ್ವೇ 34   ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಾಕುಲ್ ಪ್ರೀತ್ ಸಿಂಗ್ ಮತ್ತು ಬೊಮನ್ ಇರಾನಿ ಅವರೊಂದಿಗೆ ಅಜಯ್ ದೇವಗನ್ ನಟಿಸಿದ್ದಾರೆ ಮತ್ತು ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾಗಿದೆ. 

ಇತ್ತೀಚಿನ ಸಂದರ್ಶನವೊಂದರಲ್ಲಿ, ಅಜಯ್ ತನ್ನ ಮಾನಸಿಕ ಆರೋಗ್ಯ ಮತ್ತು ಸಮಾಲೋಚನೆಯ ಅಗತ್ಯದ ಬಗ್ಗೆ ಮುಕ್ತ ಮತ್ತು ಪ್ರಾಮಾಣಿಕವಾಗಿ ಮಾತಾನಾಡಿದ್ದಾರೆ.

Tap to resize

ಅಜಯ್ ಅವರು ತುಂಬಾ ಅಂತರ್ಮುಖಿ ವ್ಯಕ್ತಿಯಾಗಿದ್ದು, ಇತರರಿಗೆ ತೆರೆದುಕೊಳ್ಳಲು ಕಷ್ಟಪಡುತ್ತಾರೆ ಎಂದು ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಅವರು ಇಷ್ಟಪಡದ ನ್ಯೂನತೆಗಳಲ್ಲಿ ಇದು ಒಂದು ಎಂದು ಅವರು ಉಲ್ಲೇಖಿಸಿದ್ದಾರೆ. 

ಅವರು ತಮ್ಮ ಸಮಸ್ಯೆಗಳನ್ನು ತಾವಾಗಿಯೇ ಪರಿಹರಿಸಿಕೊಳ್ಳಲು ಆದ್ಯತೆ ನೀಡುತ್ತಾರೆ ಮತ್ತು ಆದ್ದರಿಂದ ದೂರವಾಗುತ್ತಾರೆ ಎಂದು ಅವರು ಹೇಳುತ್ತಾರೆ. ಬಾಲಿವುಡ್ ನಟ ತನ್ನನ್ನು ತಾನು ವ್ಯಕ್ತಪಡಿಸಲು ಕಷ್ಟಪಡುವ ಅಂತರ್ಮುಖಿ ಎಂದು ಒಪ್ಪಿಕೊಂಡಿದ್ದಾರೆ.
 

ಅವರು ಮಾನಸಿಕ ಪರಿಹಾರವನ್ನು ಹೇಗೆ ಪಡೆಯುತ್ತಾರೆ ಎಂದು ಪ್ರಶ್ನಿಸಿದಾಗ ಅಜಯ್ ಅವರು ಕೌನ್ಸೆಲಿಂಗ್ ಪ್ರಯತ್ನಿಸಿದ್ದು  ಆದರೆ ಅವರು ಓಪನ್‌ ಅಪ್‌ ಆಗಲು ಸಾಧ್ಯವಾಗದ ಕಾರಣ ವಿಫಲವಾಗಿದೆ ಎಂದು ಒಪ್ಪಿಕೊಂಡರು

ಇದೇ ವೇಳೆ ಅವರು ಸಂದರ್ಶನದಲ್ಲಿ ತಮ್ಮ ಹಾಗೂ ಕಾಜೋಲ್ ಮದುವೆ ಬಗ್ಗೆ ಮಾತನಾಡಿದ್ದಾರೆ. 'ನನಗೆ ಪ್ರಾಮಾಣಿಕವಾಗಿ ಗೊತ್ತಿಲ್ಲ. ನಾವು ಭೇಟಿಯಾದೆವು, ನಾವು ತುಂಬಾ ಚೆನ್ನಾಗಿ ಜೊತೆಯಾದೆವು' ಎಂದು ಹೇಳಿದರು.

ಅಜಯ್ ಅವರು ಕಾಜೋಲ್ ಅವರನ್ನು ಏಕೆ ಮದುವೆಯಾಗಲು ನಿರ್ಧರಿಸಿದರು ಎಂದು ಕೇಳಿದಾಗ ನಾವು ಎಂದಿಗೂ ಪ್ರಪೋಸ್‌ ಮಾಡದೆ  ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದ್ದೇವು ಮತ್ತು ಶೀಘ್ರದಲ್ಲೇ ನಾವು ಮದುವೆಯಾಗುತ್ತೇವೆ ಎಂದು ಊಹಿಸಿದೆವು. ನಮ್ಮ ಆಲೋಚನೆಗಳು ಹೊಂದಿದವು ಮತ್ತು ನಮ್ಮ ಮಾದರಿಗಳು ಹೊಂದಾಣಿಕೆಯಾಗುತ್ತವೆ. ಪರಿಣಾಮವಾಗಿ, ವಿಷಯಗಳು ಫ್ಲೋ ಆಯಿತು ಎಂದು ಅಜಯ್‌ ಹೇಳಿದ್ದಾರೆ.

Latest Videos

click me!