ಒಂದೇ ಹೆಸರಿನ 4 ಸಿನಿಮಾಗಳಲ್ಲಿ ಎರಡೆರಡು ಬಾರಿ ನಟಿಸಿದ ಏಕೈಕ ನಟ

ಬಾಲಿವುಡ್ ನಟ ಧರ್ಮೇಂದ್ರ ಅವರು ಒಂದೇ ಹೆಸರಿನ ನಾಲ್ಕು ಸಿನಿಮಾಗಳಲ್ಲಿ ಎರಡೆರಡು ಬಾರಿ ನಟಿಸಿದ್ದಾರೆ 'ಬೇಗಾನಾ', 'ಬಾಜಿ', 'ಲೋಹಾ' ಮತ್ತು 'ಪತ್ಥರ್ ಔರ್ ಪಾಯಲ್' ಹೆಸರಿನ ಸಿನಿಮಾಗಳಲ್ಲಿ ಎರಡೆರಡು ಬಾರಿ ನಟಿಸಿದ್ದು. ಕೆಲವು ಹಿಟ್ ಆದ್ರೆ, ಕೆಲವು ಫ್ಲಾಪ್ ಆದವು. 

Dharmendra The only actor starred in 4 movies with the same Title twice

ಬಾಲಿವುಡ್‌ನಲ್ಲಿ ಒಂದೇ ಹೆಸರಿನಲ್ಲಿ ಬೇರೆ ಬೇರೆ ಸಿನೆಮಾ ಬರೋದು ದೊಡ್ಡ ವಿಷಯ ಅಲ್ಲ. ಆದ್ರೆ ಒಂದೇ ಹೆಸರಿನ ಎರಡೆರಡು ಸಿನಿಮಾದಲ್ಲಿ ಒಬ್ಬನೇ  ಹೀರೋ ನಟಿಸುವುದು ಅಚ್ಚರಿಯಾಗಿದೆ.

Dharmendra The only actor starred in 4 movies with the same Title twice

ಆದರೆ ಬಾಲಿವುಡ್‌ನ ಒಂದು ಕಾಲದ ಸ್ಟೈಲ್ ಕಿಂಗ್ ಧರ್ಮೇಂದ್ರ ಅವರು ಒಂದೇ ಹೆಸರಿನ ನಾಲ್ಕು ಸಿನಿಮಾಗಳಲ್ಲಿ ಎರಡೆರಡು ಬಾರಿ ನಟಿಸಿದ್ದಾರೆ, ಕತೆಗಳು ಬೇರೆ ಆದರೆ ಸಿನಿಮಾದ ಹೆಸರಗಳು ಒಂದೇ


ಹೀಗೆ ಅವರಿ ನಟಿಸಿದ 'ಬೇಗಾನಾ' ಹೆಸರಿನ ಮೊದಲ ಸಿನಿಮಾ 1963ರಲ್ಲಿ ರಿಲೀಸ್ ಆಯ್ತು. ಈ ಸಿನಿಮಾವನ್ನು ಸದಾಶಿವ ರಾವ್ ಕವಿ ಡೈರೆಕ್ಟ್ ಮಾಡಿದ್ರು. ಈ ಸಿನಿಮಾ ಒಳ್ಳೆ ಹಿಟ್ ಆಗಿತ್ತು.

ಹಾಗೆಯೇ 'ಬೇಗಾನಾ' ಹೆಸರಿನ ಎರಡನೇ ಸಿನಿಮಾವನ್ನು ನಿರ್ದೇಶಕ ಅಂಬರೀಶ್ ಸಾಂಗಲ್ ಡೈರೆಕ್ಟ್ ಮಾಡಿದ್ರು, ಅದು 1986ರಲ್ಲಿ ರಿಲೀಸ್ ಆಯ್ತು. ಈ ಸಿನಿಮಾ ಯಶಸ್ಸು ಕಾಣದೇ ಫ್ಲಾಪ್ ಆಯ್ತು.

ಬರೀ ಬೇಗನಾ ಮಾತ್ರವಲ್ಲ ಧರ್ಮೇಂದ್ರ ಅವರು ಒಂದೇ ಹೆಸರಿನ ಮತ್ತೊಂದು ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾರೆ, ಅಂತಹ ಸಿನಿಮಾಗಳಲ್ಲಿ ‘ಬಾಜಿ’ ಕೂಡಾ ಒಂದು. ಈ ಸಿನಿಮಾ ಹಿಟ್ ಆಗಿತ್ತು.

ಹಾಗೆಯೇ 1984ರಲ್ಲಿ ಮತ್ತೆ 'ಬಾಜಿ' ಹೆಸರಿನಲ್ಲಿ ಇನ್ಜೊಂದು ಸಿನಿಮಾ ಬಂತು. ಈ ಸಿನಿಮಾದಲ್ಲಿ ಧರ್ಮೇಂದ್ರ ಜೊತೆಗೆ ಮಿಥುನ್ ಚಕ್ರವರ್ತಿ ನಟಿಸಿದ್ದರು.

ಇದಾದ ನಂತರ ಧರ್ಮೇಂದ್ರ ಅವರು 'ಲೋಹಾ' ಹೆಸರಿನ ಎರಡು ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದಾರೆ. ಮೊದಲನೇ 'ಲೋಹಾ' ಸಿನಿಮಾ 1987ರಲ್ಲಿ ರಿಲೀಸ್ ಆಯ್ತು.

ಆದರೆ ಇದಾದ ನಂತರ 1997ರಲ್ಲಿ ಡೈರೆಕ್ಟರ್ ಕಾಂತಿ ಶಾ 'ಲೋಹಾ' ಹೆಸರಿನಲ್ಲಿ ಮತ್ತೊಂದು ಸಿನಿಮಾ ಮಾಡಿದ್ರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂತಹ ದೊಡ್ಡ ಹಿಟ್ ಕಾಣಲಿಲ್ಲ, ಆವರೇಜ್ ಆಗಿತ್ತು.

ಹಾಗೆಯೇ 'ಪತ್ಥರ್ ಔರ್ ಪಾಯಲ್' ಹೆಸರಿನಲ್ಲಿ ಎರಡು ಸಿನಿಮಾಗಳು ಬಂದಿವೆ. ಇದರಲ್ಲಿಯೂ ಧರ್ಮೇಂದ್ರ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು.

ಹಾಗೆಯೇ ಎರಡನೇ ಬಾರಿ 'ಪತ್ಥರ್ ಔರ್ ಪಾಯಲ್' ಹೆಸರಿನ ಸಿನಿಮಾ 2000ನೇ ಇಸವಿಯಲ್ಲಿ ಬಂತು. ಈ ಸಿನಿಮಾದಲ್ಲೂ ಧರ್ಮೇಂದ್ರ ನಟಿಸಿದ್ದರು. ಆದರೆ ಈ ಸಿನಿಮಾ ಗೆಲುವು ಕಾಣದೇ ಡಿಸಾಸ್ಟರ್ ಆಗಿತ್ತು.

Latest Videos

vuukle one pixel image
click me!