ಈ ನಡುವೆ ಪವನ್ ಕಲ್ಯಾಣ್ ಕೂಡ ತಮ್ಮ ಮಗ ಪ್ರಸ್ತುತ ಸ್ಥಿರನಾಗಿದ್ದಾನೆ ಮತ್ತು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸಿಂಗಾಪುರದಲ್ಲಿ ನನ್ನ ಮಗ ಮಾರ್ಕ್ ಶಂಕರ್ ಅವರ ಬೇಸಿಗೆ ಶಿಬಿರದಲ್ಲಿ ಸಂಭವಿಸಿದ ದುರದೃಷ್ಟಕರ ಬೆಂಕಿ ಅವಘಡದ ನಂತರ, ಪ್ರಪಂಚದೆಲ್ಲೆಡೆಯ ಪ್ರಾರ್ಥನೆಗಳು, ಕಾಳಜಿ ಮತ್ತು ಬೆಂಬಲದಿಂದ ನಾನು ಭಾವುಕನಾಗಿದ್ದೇನೆ. ಈ ಕಷ್ಟದ ಸಮಯದಲ್ಲಿ ನಮ್ಮ ಕುಟುಂಬದ ಬೆಂಬಲಕ್ಕೆ ನಿಂತಿದ್ದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಜನ ಸೇನಾ ಪಕ್ಷದ ನಾಯಕರು, ಜನ ಸೈನಿಕರು, ಹಿತೈಷಿಗಳು, ಚಲನಚಿತ್ರ ಭ್ರಾತೃತ್ವದ ಸದಸ್ಯರು, ಸ್ನೇಹಿತರು ಮತ್ತು ಪ್ರಪಂಚದೆಲ್ಲೆಡೆಯ ಬೆಂಬಲಿಗರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮಾರ್ಕ್ ಶಂಕರ್ ಈಗ ಸ್ಥಿರವಾಗಿದ್ದು ಮತ್ತು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ನಿಮ್ಮ ಹೃತ್ಪೂರ್ವಕ ಸಂದೇಶಗಳು ನಿಜವಾಗಿಯೂ ನಮಗೆ ಬಲವನ್ನು ನೀಡಿವೆ ಎಂದು ಟ್ವಿಟ್ ಮಾಡಿದ್ದರು.