ಒಪ್ಪತ್ತು ಊಟ ಮಾಡಿ, 500 ರೂಗೆ ಹೊಟೇಲಲ್ಲಿ ದುಡಿದಿದ್ದ ಈಕೆ ಇಂದು ಸೂಪರ್ ಸ್ಟಾರ್ ನಟಿ

Published : Apr 14, 2025, 11:46 AM ISTUpdated : Apr 14, 2025, 11:53 AM IST

ಸ್ಟಾರ್ ನಟಿಯಾಗೋದಕ್ಕೂ ಮುನ್ನ ಕೇವಲ 500 ರೂ.ಗೆ ಹೋಟೆಲ್‌ನಲ್ಲಿ 8 ಗಂಟೆಗಳ ಕಾಲ ಕೆಲಸ ಮಾಡಿದ ಇವರ,  ಅದೃಷ್ಟ ಎಷ್ಟು ಬದಲಾಯಿತು ಎಂದರೆ ಇಂದು ಅವರ ಹೆಸರು ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಲಿಸ್ಟ್ ನಲ್ಲಿ ಸೇರಿದೆ.  

PREV
18
ಒಪ್ಪತ್ತು ಊಟ ಮಾಡಿ, 500 ರೂಗೆ ಹೊಟೇಲಲ್ಲಿ ದುಡಿದಿದ್ದ ಈಕೆ ಇಂದು ಸೂಪರ್ ಸ್ಟಾರ್ ನಟಿ

ಅನೇಕ ಸೂಪರ್‌ಸ್ಟಾರ್‌ಗಳು (Super Stars) ತಾರಾಪಟ್ಟ ಅಲಕರಿಸುವ ಮೊದಲು ಅನೇಕ ತೊಂದರೆಗಳನ್ನು ಎದುರಿಸಿದ್ದಾರೆ. ಅಂತಹ ಒಬ್ಬ ನಟಿ ತನ್ನ ಶಿಕ್ಷಣದ ವೆಚ್ಚವನ್ನು ಭರಿಸಲು ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಇಂದು ಅವರು ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಗಳಲ್ಲಿ ಒಬ್ಬರು.
 

28

ನಾವು ನಿಮಗೆ ಹೇಳುತ್ತಿರುವ ನಟಿ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಿದ್ದರು, ಕಷ್ಟ ಪಟ್ಟು ಮೇಲೆ ಬಂದ ಈಕೆ ಈಗ 80 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಯಾರಿವರು ಅನ್ನೋದು ಗೊತ್ತಾಯ್ತ? ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu).
 

38

ನಟಿ ಒಮ್ಮೆ ಸಂದರ್ಶನವೊಂದರಲ್ಲಿ ತನ್ನ ಆರಂಭಿಕ ಜೀವನದ ಹೋರಾಟಗಳ ಬಗ್ಗೆ ಮಾತನಾಡುತ್ತಾ, 'ನಾನು ಕನಿಷ್ಠ ಎರಡು ತಿಂಗಳ ಕಾಲ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡಿದ್ದೇನೆ. ನಾನು ಹಲವು ರೀತಿಯ ಕೆಲಸಗಳನ್ನು ಮಾಡಿದ್ದೇನೆ. ಹಾಗಾಗಿಯೇ ನಾನು ಇವತ್ತು ಈ ಸ್ಥಾನದಲ್ಲಿದ್ದೇನೆ ಎಂದು ಹೇಳಿದ್ದರು. 
 

48

ಸಮಂತಾ, ತಮ್ಮ ಆರಂಭದ ದಿನಗಳಲ್ಲಿ ಹೋಟೆಲ್‌ನಲ್ಲಿ ಎಂಟು ಗಂಟೆಗಳ ಶಿಫ್ಟ್‌ಗೆ 500 ರೂ. ಸಂಪಾದಿಸುತ್ತಿದ್ದರು. ಆ ಸಮಯದಲ್ಲಿ ಅವರು 10 ಅಥವಾ 11 ನೇ ತರಗತಿಯಲ್ಲಿದ್ದರು. ಮನೆಯಲ್ಲಿನ ಆರ್ಥಿಕ ತೊಂದರೆಯಿಂದಾಗಿ (financial problem) ತಮಗೆ 20 ವರ್ಷ ಆಗುವವರೆಗೆ ನಟಿ ಇಂತಹ ಕೆಲಸಗಳನ್ನು ಮಾಡುತ್ತಿದ್ದರು. 
 

58

ಆರ್ಥಿಕ ಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತಾ ಬಂದಂತೆ, ಸಮಂತಾ, ಆ ಕೆಲಸ ಬಿಟ್ಟು ಮಾಡೆಲ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದಳು ಮತ್ತು ಈ ಹಂತದಲ್ಲಿಯೇ ಚಲನಚಿತ್ರ ನಿರ್ಮಾಪಕ ರವಿ ಕಣ್ಣಿಗೆ ಸಮಂತಾ ಬಿದ್ದಿದ್ದರು. ಆ ಮೂಲಕವೇ ಚಲನಚಿತ್ರಗಳಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು ಸಮಂತಾ. 

68

ನಾಗ ಚೈತನ್ಯ ಜೊತೆಗಿನ 'ಯೇ ಮಾಯಾ ಚೆಸಾವೆ' (ye maaya chesave) ಚಿತ್ರದಲ್ಲಿ ಮೊದಲ ಬ್ರೇಕ್ ಪಡೆದ ನಟಿ, ತಮ್ಮ ಮೊದಲ ಸಿನಿಮಾದಿಂದಲೇ ರಾತ್ರೋರಾತ್ರಿ ಜನಪ್ರಿಯ ತಾರೆಯಾದರು. ಇದಾದ ನಂತರ, ಅವರು ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ದೊಡ್ಡ ತಾರೆಯರೊಂದಿಗೆ ಕೆಲಸ ಮಾಡಿದರು.

78

ಸಿನಿಮಾಗಳ ಬಳಿಕ ಅವರು 'ದಿ ಫ್ಯಾಮಿಲಿ ಮ್ಯಾನ್' (The Family Man) ವೆಬ್ ಸೀರೀಸ್ ಮೂಲಕ ಹಿಂದಿ ಚಿತ್ರರಂಗದಲ್ಲಿ ಡಿಜಿಟಲ್ ಪ್ರವೇಶ ಮಾಡಿದರು ಮತ್ತು ತಮ್ಮ ನಟನೆಯಿಂದ ಎಲ್ಲರ ಗಮನ ಸೆಳೆದರು. ಪ್ರಸ್ತುತ, ಸಮಂತಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದು, ಪ್ರತಿ ಪ್ರಾಜೆಕ್ಟ್‌ಗೆ 10 ಕೋಟಿ ರೂ. ಪಡೆಯುತ್ತಿದ್ದಾರೆ.
 

88

ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಸಮಂತಾ 2017 ರಲ್ಲಿ 30 ನೇ ವಯಸ್ಸಿನಲ್ಲಿ ನಾಗ ಚೈತನ್ಯ  (Naga Chaitanya) ಅವರನ್ನು ವಿವಾಹವಾದರು ಮತ್ತು 2021 ರಲ್ಲಿ ಅವರು ವಿಚ್ಛೇದನ ಪಡೆದರು. ಪ್ರಸ್ತುತ, ಸಮಂತಾ ರುತು ಪ್ರಭು ಅವರ ನಿವ್ವಳ ಮೌಲ್ಯ 101 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
 

Read more Photos on
click me!

Recommended Stories