ಧನುಷ್, ಐಶ್ವರ್ಯ ರಜನಿಕಾಂತ್ ವಿಚ್ಛೇದನ ರದ್ದು? ಮಗನ ಶಾಲಾ ಸಮಾರಂಭದಲ್ಲಿ ಮಾಜಿ ದಂಪತಿ!

Published : Oct 14, 2023, 03:31 PM IST

ತಮಿಳು ಸ್ಟಾರ್ ಧನುಷ್ (Dhanush) ಮತ್ತು ಅವರ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ (Aishwaryaa Rajinikanth) ಇಬ್ಬರೂ ತಮ್ಮ ಮಗನ ಶಾಲೆಯ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡರು, ಇದು ಇಬ್ಬರ ನಡುವಿನ ರಾಜಿ ವದಂತಿಗಳನ್ನು ಹುಟ್ಟು ಹಾಕಿದೆ ಮತ್ತು ಸುಮಾರು 2 ವರ್ಷಗಳ ನಂತರ ಮಾಜಿ ದಂಪತಿ ವಿಚ್ಛೇದನವನ್ನು ಅಂತ್ಯಗೊಳಿಸಿದ್ದಾರೆ ಎಂದು ವರದಿಗಳು ಹರಿದಾಡಲು ಶುರುವಾಗಿದೆ. ಅಷ್ಷಕ್ಕೂ ಈ ವರದಿಗಳ ಸತ್ಯಾಂಶವೇನು?

PREV
18
 ಧನುಷ್, ಐಶ್ವರ್ಯ ರಜನಿಕಾಂತ್ ವಿಚ್ಛೇದನ ರದ್ದು?  ಮಗನ ಶಾಲಾ ಸಮಾರಂಭದಲ್ಲಿ ಮಾಜಿ ದಂಪತಿ!

ಕಳೆದ ವರ್ಷ ಜನವರಿಯಲ್ಲಿ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿ ಅಭಿಮಾನಿಗಳಿಗೆ ಆಘಾತಗೊಳಿಸಿದರು.

28

ಆದರೆ, ಈಗ ಜೋಡಿಯು ತಮ್ಮ ಮಗ ಯೋತ್ರನ ಶಾಲೆಯ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಹುಟ್ಟು ಹಾಕಿದ್ದಾರೆ.

38

ಇತ್ತೀಚಿನ ಸುದ್ದಿಗಳ ಪ್ರಕಾರ, ಇಬ್ಬರು ತಾರೆಗಳು ಸಹ-ಪೋಷಕರಾಗಿದ್ದಾರೆ ಮತ್ತು ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ನಡುವೆ ಯಾವುದೇ  ಪ್ಯಾಚಪ್‌ ಸಾಧ್ಯವಿಲ್ಲ. 
 

48

ಮೂಲಗಳ ಪ್ರಕಾರ, ದಂಪತಿ ತಮ್ಮ ಪ್ರತ್ಯೇಕತೆಯನ್ನು ಒಪ್ಪಿಕೊಂಡಿದ್ದಾರೆ. ಅವರು ವಿಚ್ಛೇದನ ಪಡೆಯದಿದ್ದರೂ ಮತ್ತು ಒಟ್ಟಿಗೆ ವಾಸಿಸದಿದ್ದರೂ ಸಹ-ಪೋಷಕರಾಗಿ ಸೌಹಾರ್ದ ಸಂಬಂಧವನ್ನು ಹೊಂದಿದ್ದಾರೆ. 

58

'ಧನುಷ್ ಅವರು ಐಶ್ವರ್ಯಾ ಅವರೊಂದಿದೆ ಯಾವುದೇ ಕೆಲಸ ಮಾಡುತ್ತಿಲ್ಲ. ಅವರು ಬೇರ್ಪಟ್ಟಿದ್ದಾರೆ ಮತ್ತು ಪ್ರತ್ಯೇಕ ಹಾದಿಯಲ್ಲಿ ಹೋಗಿದ್ದಾರೆ. ತಮ್ಮ ಜೀವನದಲ್ಲಿ ಘಟನೆಗಳ ತಿರುವುಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಸಮಾಧಾನವಾಗಿ ಸ್ವೀಕರಿಸಿದ್ದಾರೆ,' ಎಂದು ಇಬ್ಬರ ಆಪ್ತರು ಮಾತನಾಡಿಕೊಳ್ಳುತ್ತಿದ್ದಾರೆ.

68

'ಅವರು ಒಂದಾಗಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಸುಳ್ಳು. ಇನ್ನೂ ಈ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸದೇ ಹೋದರೂ ಬೇರೆ ಇಧ್ದಾರೆ. ನ್ಯಾಯಾಲಯದಲ್ಲಿ ಯಾವುದೇ ಔಪಚಾರಿಕ ಫೈಲಿಂಗ್ ಆಗಿಲ್ಲ. ಅವರಲ್ಲಿ ಒಬ್ಬರು ಮರುಮದುವೆಯಾಗಲು ಬಯಸುವವರೆಗೂ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದಿಲ್ಲ. ಅವರು ಒಟ್ಟಿಗೆ ವಾಸಿಸುವುದಿಲ್ಲ, ಆದರೆ ಅವರು ಪರಸ್ಪರ ಗೌರವಿಸುತ್ತಾರೆ ಮತ್ತು ತಮ್ಮ ಮಕ್ಕಳೊಂದಿಗೆ ಬೆಚ್ಚಗಿನ ಸಂಬಂಧವನ್ನು ಹೊಂದಿದ್ದಾರೆ. ಅವರು ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಮತ್ತು ಹೇಗೆ ಸಹ-ಪೋಷಕರಾಗಿರಬೇಕೆಂಬುದರ ಬಗ್ಗೆ ಚಿಂತಿಸುತ್ತಾರೆ. ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ' ಎಂದು ಮೂಲವು ಇನ್ನಷ್ಟೂ ಹೇಳಿದೆ.

78

ಕಳೆದ ವರ್ಷ, ಧನುಷ್ ಮತ್ತು ಐಶ್ವರ್ಯಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸುವಾಗ ಜನರು ತಮ್ಮ ಗೌಪ್ಯತೆ ಗೌರವಿಸುವಂತೆ ವಿನಂತಿಸಿದ್ದರು. 
 

88

18 ವರ್ಷಗಳ ಕಾಲ ಸ್ನೇಹಿತರು, ದಂಪತಿಗಳು, ಪೋಷಕರಂತೆ ಮತ್ತು ಹಿತೈಷಿಗಳಾಗಿ ಪರಸ್ಪರ ಹಿತೈಷಿಗಳಾಗಿದ್ದ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ಹಾದಿ ಪ್ರತ್ಯೇಕವಾಗಿರುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ದಂಪತಿಗಳಾಗಿ ಮತ್ತು ಉತ್ತಮ ವ್ಯಕ್ತಿಗಳಾಗಿ ನಮ್ಮನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು  ಎದುರಿಸಲು ಅಗತ್ಯವಾದ ಗೌಪ್ಯತೆಯನ್ನು ನಮಗೆ ನೀಡಿ' ಎಂದು ಧನುಷ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Read more Photos on
click me!

Recommended Stories