ಡಿವೋರ್ಸ್ ಬಳಿಕ ಬದಲಾದ ಜೀವನದ ಬಗ್ಗೆ ಧನಶ್ರೀ ವರ್ಮಾ ಅಚ್ಚರಿಯ ಮಾತುಗಳು

Published : May 27, 2025, 03:41 PM IST

ಡ್ಯಾನ್ಸರ್ ಧನಶ್ರೀ ವರ್ಮಾ ಮತ್ತು ಕ್ರಿಕೆಟರ್ ಯಜವೇಂದ್ರ ಚಹಲ್ ಡಿವೋರ್ಸ್ ಬಳಿಕ ತಮ್ಮ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಟ್ರೋಲ್‌ಗಳು ತಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿರುವ ಅವರು, ಆರೋಗ್ಯಕರ ಜೀವನಶೈಲಿ ಮತ್ತು ಸ್ವ-ಪ್ರೀತಿಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.

PREV
16

ಕ್ರಿಕೆಟರ್ ಯಜವೇಂದ್ರ ಚಹಲ್‌ ಮತ್ತು ಡ್ಯಾನ್ಸರ್ ಧನಶ್ರೀ ವರ್ಮಾ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡು ಪ್ರತ್ಯೇಕವಾಗಿದ್ದಾರೆ. ವಿಚ್ಚೇದನಕ್ಕೆ ನಿಖರ ಕಾರಣ ಏನು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಇಬ್ಬರು ಸಹ ತಮ್ಮ ಖಾಸಗಿ ವಿಷಯಗಳನ್ನು ಎಲ್ಲಿಯೂ ಬಹಿರಂಗವಾಗಿ ಹಂಚಿಕೊಂಡಿಲ್ಲ.

26

ವಿಚ್ಛೇದನದ ಬಳಿಕ ಚಹಲ್ ಮತ್ತು ಧನಶ್ರೀ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಧನಶ್ರೀ ವರ್ಮಾ ಇತ್ತೀಚೆಗೆ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದು, ಡಿವೋರ್ಸ್ ಬಳಿಕ ತಮ್ಮ ಜೀವನ ಹೇಗಿದೆ ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

36

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ನನ್ನ ಜೀವನದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದಿರುವ ಧನಶ್ರೀ ವರ್ಮಾ, ನೆಗೆಟಿವಿಟಿ ಮತ್ತು ಟೀಕೆ ಟಿಪ್ಪಣಿಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ. ನಾನು ಯಾವಾಗಲೂ ಹಾರ್ಡ್ ವರ್ಕಿಂಗ್ ವುಮನ್. ಇದೀಗ ನನ್ನ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿದೆ ಎಂದು ತಿಳಿಸಿದ್ದಾರೆ.

46

ಸೆಲ್ಫ್ ಲವ್, ಉತ್ತಮ ಆಹಾರ ಸೇವನೆ, ವ್ಯಾಯಾಮ ಸೇರಿದಂತೆ ಆರೋಗ್ಯಕರ ಜೀವನಶೈಲಿ ನನ್ನದಾಗಿದೆ. ನನ್ನನ್ನು ತುಂಬಾ ಪ್ರೀತಿಸುವ ಮತ್ತು ಗೌರವಿಸುವ ವ್ಯಕ್ತಿಗಳು ಜೊತೆಯಲ್ಲಿ ಸಂತೋಷವಾಗಿದ್ದೇನೆ. ನನ್ನನ್ನು ನಾನು ಗೌರವಿಸೋದನ್ನು ಕಲಿತಿದ್ದೇನೆ ಎಂದು ಧನಶ್ರೀ ವರ್ಮಾ ಹೇಳಿದ್ದಾರೆ.

56

ಪೋಷಕರು ನನ್ನನ್ನು ಧೈರ್ಯಶಾಲಿ ಮಗಳಾಗಿ ಬೆಳೆಸಿದ್ದಾರೆ. ನನ್ನ ಜೀವನದಲ್ಲಿ ಯಾವುದೇ ಬೆಳವಣಿಗೆ ಕಂಡು ಬಂದರೂ ಅದು ನನ್ನ ಸ್ವಯಂ ಅನ್ವೇಷಣೆಯಾಗಿದೆ. ಪ್ರೀತಿ ಜೀವನದ ಅತ್ಯಂತ ಸುಂದರವಾದ ಅಂಶವಾಗಿದೆ. ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ನಾನು ಗಮನ ಹರಿಸುವುದಿಲ್ಲ ಎಂದು ಧನಶ್ರೀ ವರ್ಮಾ ಹೇಳಿಕೊಂಡಿದ್ದಾರೆ

66

ಲಾಕ್‌ಡೌನ್ ವೇಳೆ ಭೇಟಿಯಾಗಿದ್ದ ಧನಶ್ರೀ ಮತ್ತು ಚಹಲ್ 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. 2024ರಲ್ಲಿ ಇಬ್ಬರು ಡಿವೋರ್ಸ್ ಪಡೆದುಕೊಂಡು ಇಬ್ಬರು ಬೇರೆಯಾಗಿದ್ದಾರೆ. ಸದ್ಯ ಧನಶ್ರೀ ವರ್ಮಾ ಮ್ಯೂಸಿಕ್ ಅಲ್ಬಂಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories