ತೆಲುಗು ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಮಹಾನ್ ನಿರ್ದೇಶಕ ದಾಸರಿ ನಾರಾಯಣ ರಾವ್ ಸಂಪಾದಿಸಿದ ನೂರಾರು ಕೋಟಿ ಆಸ್ತಿ ಏನಾಯ್ತು? ಗುರುಗಳೇ ಅಂತ ನಂಬಿದವರೇ ಲೂಟಿ ಮಾಡಿದ್ರಾ? ದಂಗುಬಡಿಸುವ ವಿಷಯಗಳು ಬಹಿರಂಗ ಶಿಷ್ಯ!
ದರ್ಶಕರತ್ನ ದಾಸರಿ ನಾರಾಯಣ ರಾವ್ ತೆಲುಗು ಸಿನಿಮಾವನ್ನಾಳಿದ ದಿಗ್ಗಜ. ನಾಲ್ಕು ದಶಕಗಳ ಕಾಲ ನಿರ್ದೇಶಕ, ನಟ, ಲೇಖಕ, ನಿರ್ಮಾಪಕರಾಗಿ ಮಿಂಚಿದರು. 150ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮಾಡಿ ಲಿಮ್ಕಾ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ.
27
ಚಿತ್ರರಂಗದ ಹಿರಿಯ ದಾಸರಿ
ದಾಸರಿ ನಾರಾಯಣ ರಾವ್ ತಮ್ಮ ಚಿತ್ರಗಳಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚಿಸಿದ್ದಾರೆ. ಲಿಂಗ ತಾರತಮ್ಯ, ಜಾತಿ ತಾರತಮ್ಯ, ರಾಜಕೀಯ ಭ್ರಷ್ಟಾಚಾರದ ಬಗ್ಗೆ ಸಿನಿಮಾ ಮಾಡಿದ್ದಾರೆ. ಟಾಲಿವುಡ್‌ನ ಹಿರಿಯರಾಗಿ ಗುರುತಿಸಿಕೊಂಡಿದ್ದಾರೆ.
37
ಅತಿ ಹೆಚ್ಚು ಸಂಭಾವನೆ ಪಡೆದ ನಿರ್ದೇಶಕ ದಾಸರಿ
ದಾಸರಿ ನಾರಾಯಣ ರಾವ್ ಒಂದು ಕಾಲದಲ್ಲಿ ನಿರ್ದೇಶಕರಾಗಿ ಉತ್ತುಂಗದಲ್ಲಿದ್ದರು. ಮೂರು ಶಿಫ್ಟ್‌ಗಳಲ್ಲಿ ಸಿನಿಮಾ ಮಾಡುತ್ತಿದ್ದರು. ಹಲವು ನಿರ್ದೇಶಕರು, ನಟ-ನಟಿಯರಿಗೆ, ತಂತ್ರಜ್ಞರಿಗೆ ಅವಕಾಶ ನೀಡಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆದ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.
ತೆಲುಗಿನಲ್ಲಿ ಬೇರೆ ಯಾವ ನಿರ್ದೇಶಕರೂ ಗಳಿಸದಷ್ಟು ಆಸ್ತಿಯನ್ನು ದಾಸರಿ ಗಳಿಸಿದ್ದರು. ಆದರೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಪ್ತರು, ಶಿಷ್ಯರ ಪ್ರಕಾರ ದಾಸರಿ ಸಂಪಾದನೆ ನೂರಾರು ಕೋಟಿ. ಆದರೆ ನಂಬಿದವರೇ ದೋಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
57
ಮಕ್ಕಳು ಕ್ಯಾರೆ ಅನ್ನಲಿಲ್ಲ, ಆಸ್ತಿ ಕಳ್ಳರ ಪಾಲು
ದಾಸರಿ ಆದಾಯವನ್ನು ನೋಡಿಕೊಳ್ಳಲು ಮನೆಯವರು ಯಾರೂ ಇರಲಿಲ್ಲ. ಹೀಗಾಗಿ ಆಸ್ತಿ ಕಳ್ಳರ ಪಾಲಾಯಿತು. ದಾಸರಿ ಪತ್ನಿ ಪದ್ಮಗೆ ಆರ್ಥಿಕ ಅಧಿಕಾರ ನೀಡಿರಲಿಲ್ಲ. ಮಕ್ಕಳು ಕೂಡ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ.
67
ಗುರುಗಳೇ ಅಂತಾನೆ ಮೋಸ
ದಾಸರಿ ತಮ್ಮ ಸಂಪಾದನೆಯ ಜವಾಬ್ದಾರಿಯನ್ನು ನಂಬಿದವರಿಗೆ ವಹಿಸಿದ್ದರು. ಅವರಲ್ಲಿ ಹಲವರು ಮೋಸ ಮಾಡಿದರು. ನಂಬಿದವರೇ, ಗುರುಗಳೇ ಅಂತ ತಿರುಗಿದವರೇ ದಾಸರಿ ಆಸ್ತಿಯನ್ನು ಲೂಟಿ ಮಾಡಿದ್ದಾರೆ ಎಂದು ನಂದಂ ಹರಿಶ್ಚಂದ್ರ ರಾವ್ ಹೇಳಿದ್ದಾರೆ.
77
ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ ದಾಸರಿ ಪುತ್ರರು
ದಾಸರಿ ಆಸ್ತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಕುಟುಂಬದವರು ಯಾರಾದರೂ ಇದ್ದಿದ್ದರೆ ಟಾಲಿವುಡ್‌ನ ಶ್ರೀಮಂತ ನಿರ್ದೇಶಕರಾಗುತ್ತಿದ್ದರು. ದಾಸರಿ ಎಂಟು ವರ್ಷಗಳ ಹಿಂದೆ (ಮೇ 30) ನಿಧನರಾದರು. ಆಸ್ತಿಗಾಗಿ ಇಬ್ಬರು ಪುತ್ರರು ಕೋರ್ಟ್ ಮೆಟ್ಟಿಲೇರಿದ್ದು ಆಸ್ತಿಗಾಗಿ ಪರದಾಡುತ್ತಿದ್ದಾರೆ.