ದೀಪಿಕಾ ಪಡುಕೋಣೆ ರಣವೀರ್ ಸಿಂಗ್‌ರನ್ನು ಮದುವೆಯಾಗಿದ್ದು,ಈಗ ಈ ಜೋಡಿಬಾಲಿವುಡ್‌ನ ಲವ್ಲಿ ಕಪಲ್‌ಗಳಲ್ಲೊಂದು. ಅವರಿಬ್ಬರ ಪಾಸ್ಟ್ ಆಗಾಗ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಅದು ರಣಬೀರ್ ಕಪೂರ್ ಮತ್ತು ದೀಪಿಕಾ ಆಗಿರಲಿ ಅಥವಾ ರಣವೀರ್ ಮತ್ತು ಅನುಷ್ಕಾ ಶರ್ಮಾ ಆಗಿರಲಿ, ಅವರ ಜೀವನದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಬಹಿರಂಗಗೊಳುತ್ತಿರುತ್ತದೆ.
ಆದರೆ ಆಕೆಯ ಎಲ್ಲಾ ಎಕ್ಸ್‌ಗಳಲ್ಲಿ, ದೀಪಿಕಾ ಮತ್ತು ವಿಜಯ್ ಮಲ್ಯರ ಮಗ ಸಿದ್ಧಾರ್ಥ್ ಮಲ್ಯ ನಡುವೆ ಏನಾಯಿತು ಎಂದು ಅನೇಕ ಅಭಿಮಾನಿಗಳು ಇನ್ನೂ ಆಶ್ಚರ್ಯ ಪಡುತ್ತಾರೆ. ಇಬ್ಬರೂ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ಸಮಯದ ಲಿಪ್‌ಲಾಕ್‌ನಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು.
ಸಿದ್ಧಾರ್ಥ್ ಜೊತೆಯ ಸಂಬಂಧದ ಬಗ್ಗೆ ದೀಪಿಕಾ ಎಂದಿಗೂ ಬಹಿರಂಗವಾಗಿ ಮಾತನಾಡಲಿಲ್ಲವಾದರೂ, ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ಬಹಿರಂಗಪಡಿಸಿವೆ.
ನಟಿ ಕ್ಲಾಸ್ ಮತ್ತು ಸ್ಟೇಟಸ್ ಕಾರಣದಿಂದಾಗಿ ಬೇರೆಯಾದರು ಎಂದು ವಿವೇನ್ಸ್ ಎರಾ ಇತ್ತೀಚಿಗೆ ವರದಿ ಮಾಡಿತ್ತು.
'ನಾನು ಸಂಬಂಧವನ್ನು ಉಳಿಸಿಕೊಳ್ಳಲು ಯತ್ನಿಸಿದೆ.ಇತ್ತೀಚಿಗೆ ಸಿದ್ಧಾರ್ಥ್ ನಡೆ ಅಸಹ್ಯವಾಗುತ್ತಿತ್ತು. ಕೊನೆಬಾರಿ ನಾವು ಡಿನ್ನರ್ ಡೇಟ್‌ಗೆ ಭೇಟಿಯಾದಾಗ ಬಿಲ್ ಪಾವತಿಸಲು ನನಗೆ ಹೇಳಿದ. ನನಗೆ ಮುಜುಗರವಾಯಿತು. ಈ ಸಂಬಂಧವನ್ನು ಕೊನೆಗೊಳಿಸುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ, ಹಿಡಿದಿಡಲು ನನಗೆ ಏನೂ ಉಳಿದಿರಲಿಲ್ಲ,' ಎಂದು ದೀಪಿಕಾ ಹೇಳಿದರು ಎಂಬುದನ್ನು ಐಬಿಟೈಮ್ಸ್ ವರದಿ ಮಾಡಿತ್ತು.
ದೀಪಿಕಾರ ಮೇಲಿನ ಹೇಳಿಕೆಯನ್ನು ಕನ್ಫರ್ಮ್ ಮಾಡಿಕೊಳ್ಳಲು ಐಬಿಟಿ ಸಿದ್ಧಾರ್ಥ್‌ರನ್ನು ತಲುಪಿದಾಗ, 'ಗೊಂದಲ ಏನು ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದರು.
'ದೀಪಿಕಾ ಒಬ್ಬ ಕ್ರೇಜಿ ಫಿಮೇಲ್, ನನ್ನ ತಂದೆತಮ್ಮ ಸಾಲವನ್ಗನು ತೀರಿಸಿದ ನಂತರ ಮತ್ತು ಅವರು ಎಲ್ಲ ಆರೋಪಗಳಿಂದ ದೋಷಮುಕ್ತರಾದ ನಂತರ ಸಾಲ ತೀರಿಸುವುದಾಗಿ ಹೇಳಿದೆ.ಆದರೆ ಅವಳು ಕೇಳಲು ರೆಡಿ ಇರಲಿಲ್ಲ,' ಎಂದು ದೀಪಿಕಾ ಹೇಳಿಕೆಗೆ ಸಿದ್ಧಾರ್ಥ್ ಪ್ರತಿಕ್ರಿಯೆ ನೀಡಿದರು.
'ನಾನು ಅವಳಿಗೆ ದುಬಾರಿ ವಜ್ರಗಳು, ಐಷಾರಾಮಿ ಬ್ಯಾಗ್‌ಗಳನ್ನು ಉಡುಗೊರೆಯಾಗಿ ನೀಡಿದ ಸಮಯವನ್ನು ಅವಳು ಮರೆತಿದ್ದಾಳೆ, ಅವಳ ಹಾಲಿಡೇಗಾಗಿ ತುಂಬಾ ಖರ್ಚು ಮಾಡಿದ್ದೇನೆ. ಅವಳ ಸ್ನೇಹಿತರಿಗಾಗಿಯೂ ಪಾರ್ಟಿಗಳನ್ನು ಆಯೋಜಿಸಿದ್ದೇನೆ' ಎಂದು ಸಿದ್ಧಾರ್ಥ್ ಹೇಳಿಕೊಂಡಿದ್ದರು.