ರಾಖಿ ಹಬ್ಬದ ಸ್ಪೆಷಲ್‌ - ಕಸಿನ್‌ ಇನಾಯಾ ಜೊತೆ ಪೋಸ್‌ ನೀಡಿರುವ ತೈಮೂರ್

First Published Aug 3, 2020, 5:13 PM IST

ರಕ್ಷಾಬಂಧನದ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.  ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳು  ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಸಹೋದರನ ಕೈಯಿಗೆ ರಾಖಿ ಕಟ್ಟಿ ಉಡುಗೊರೆಯನ್ನು ಸಹ ನೀಡಿದ್ದಾರೆ. ಇಲ್ಲಿವೆ ಕೆಲವು ಫೋಟೋಗಳು.

ಕರೀನಾ ಕಪೂರ್ ಮಗ ತೈಮೂರ್ ಅಲಿ ಖಾನ್ ಹಾಗೂ ಸೋಹಾ ಆಲಿ ಖಾನ್‌ಳ ಮಗಳು ಇನಾಯಾ ನೌಮಿ ಫೋಟೋವನ್ನು ಹಂಚಿಕೊಂಡಿದ್ದಾರೆ. ತೈಮೂರ್ ಮತ್ತು ಇನಯಾ ಇಬ್ಬರೂ ಜಿಮ್ ಬಾಲ್‌ ಮೇಲೆ ಪೋಸ್‌ ನೀಡಿರುವ ಕ್ಯೂಟ್‌ ಪೋಟೋ ನೆಟ್ಟಿಗರ ಮನ ಗೆದ್ದಿದೆ. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಸಹೋದರಿ ಅಲ್ಕಾ ಕುಮಾರ್‌ ನೆನಪಿಸಿಕೊಂಡು . ತಮ್ಮ ಮುಂಬರುವ ಚಿತ್ರ ರಕ್ಷಬಂಧದ ಪೋಸ್ಟರ್ ಹಂಚಿಕೊಂಡಿದ್ದಾರೆ ಮತ್ತು ಅವರ ಸಹೋದರಿಗೆ ವಿಶ್‌ ಮಾಡಿದ್ದಾರೆ ಅಭಿನಂದಿಸಿದರು. 'ನಿಮ್ಮ ಹೃದಯವನ್ನು ತುಂಬಾ ಸ್ಪರ್ಶಿಸುವ ರೀತಿ ಕಥೆ ಜೀವನದಲ್ಲಿ ಬರುತ್ತದೆ.... ನನ್ನ ವೃತ್ತಿಜೀವನದ ಅತಿ ವೇಗವಾಗಿ ಸಹಿ ಮಾಡಿದ ಚಿತ್ರ .ಈ ಚಿತ್ರ ನನ್ನ ಪ್ರೀತಿಯ ಸಹೋದರಿ ಅಲ್ಕಾಗೆ ಅರ್ಪಿಸುತ್ತೇನೆ, ಅವರೊಂದಿಗೆ ನಾನು ವಿಶ್ವದ ಅತ್ಯಂತ ವಿಶೇಷ ಸಂಬಂಧವನ್ನು ಹೊಂದಿದ್ದೇನೆ. ನನ್ನ ಜೀವನದ ಅತ್ಯಂತ ವಿಶೇಷ ಚಿತ್ರಗಳಲ್ಲಿ ಒಂದನ್ನು ನನಗೆ ನೀಡಿದ ಆನಂದ್ ಎಲ್. ರಾಯ್ ಅವರಿಗೆ ಧನ್ಯವಾದಗಳು' ಎಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಾ ಅವರು ಬರೆದಿದ್ದಾರೆ.
undefined
ಸಲ್ಮಾನ್ ಖಾನ್ ತಂಗೆ ಅರ್ಪಿತಾ ಖಾನ್ ಪುತ್ರ ಅಹಿಲ್ ಶರ್ಮಾ ಫಸ್ಟ್‌ ಟೈಮ್‌ ತಂಗಿ ಆಯತ್‌ನಿಂದ ರಾಖಿ ಕಟ್ಟಿಸಿಕೊಂಡಿದ್ದಾನೆ.
undefined
ಸೋಹಾ ಅಲಿ ಖಾನ್ ಸಹೋದರ ಸೈಫ್ ಅಲಿ ಖಾನ್ ಜೊತೆಯ ತನ್ನ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
undefined
ಸೋಹಾ ಅಲಿ ಖಾನ್ ಮಗಳು ಇನಯಾ ಅವರ ಫೋಟೋವನ್ನು ಹಂಚಿಕೊಂಡಿದ್ದು ಇದರಲ್ಲಿ ತಮ್ಮ ದಾದಿಗೆ ರಾಖಿಯನ್ನು ಕಟ್ಟಿಹಾಕುತ್ತಿದ್ದಾಳೆ. 'ರಾಖಿಯ ಬಂಧಗಳ ಬಗ್ಗೆ ಮತ್ತು ರಕ್ಷಿಸುವ ಭರವಸೆಯ ಬಗ್ಗೆ ನಾನು ಇನಾಯಾಗೆ ಹೇಳಿದಾಗ, ರಾಖಿ ಶೋಭಾ ದೀದಿಗೆ ಕಟ್ಟುತ್ತೇನೆ ಎಂದು ಹೇಳಿದಳು, ಏಕೆಂದರೆ ಅವರು ಪ್ರತಿದಿನ ನನ್ನನ್ನು ನೋಡಿಕೊಳ್ಳುತ್ತಾರೆ ಮತ್ತು ನನ್ನನ್ನು ರಕ್ಷಿಸುತ್ತಾರೆ. ಹ್ಯಾಪಿ ರಕ್ಷಾ ಬಂಧನ್ ಶೋಭಾ ದೀದಿ' ಎಂದು ಸೋಹಾ ಬರೆದಿದ್ದಾರೆ.
undefined
ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ ಮತ್ತು 'ಹ್ಯಾಪಿ ರಕ್ಷಾಬಂಧನ್ ಸ್ವೀಟ್‌ ಬೇಬಿ. ನಾವು ನಿನ್ನನ್ನು ತುಂಬಾ ಪ್ರೀತಿಸುತ್ತೇವೆ. ಮತ್ತು ಯಾವಾಗಲೂ ಮಾಡುತ್ತವೆ. ನೀನು ಇದ್ದೆ, ಇದ್ದಿಯಾ ಮತ್ತು ನೀವು ಯಾವಾಗಲೂ ಇರುತ್ತೀಯಾ' ಎಂದು ಬರೆದಿದ್ದಾರೆ.
undefined
ಅಭಿಷೇಕ್ ಬಚ್ಚನ್ ಪ್ರಸ್ತುತ ಕೊರೋನಾ ಸೋಕಿಂತರಾಗಿರುವುದರಿಂದ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಾಬಂಧನ್ ಸಂದರ್ಭದಲ್ಲಿ ತನ್ನ ಸಹೋದರನನ್ನು ನೆನಪಿಸಿಕೊಳ್ಳುತ್ತಾ ಸೋದರಿ ಶ್ವೇತಾ ಬಚ್ಚನ್ ನಂದಾ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದು ಬೇಗನೆ ಗುಣಮುಖರಾಗಿ ಮನೆಗೆ ಹಿಂತಿರುಗಲು ವಿಶ್‌ ಮಾಡಿದ್ದಾರೆ.
undefined
ಪ್ರಿಯಾಂಕಾ ಚೋಪ್ರಾ ಪ್ರಸ್ತುತ ವಿದೇಶದಲ್ಲಿದ್ದಾರೆ. ಕೊರೋನಾದಿಂದಾಗಿ, ತನ್ನ ಸಹೋದರನಿಗೆ ರಾಖಿಯನ್ನು ಕಟ್ಟಲು ಮುಂಬೈಗೆ ಬರಲು ಸಾಧ್ಯವಾಗಲಿಲ್ಲ. ರಕ್ಷಾಬಂಧನದ ಸಂಧರ್ಭದಲ್ಲಿ ತನ್ನ ಸಹೋದರನನ್ನು ನೆನಪಿಸಿಕೊಂಡು ಮದುವೆಯ ಫೋಟೋವನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾಳೆ. ಈ ಫೋಟೋದಲ್ಲಿ, ಸಹೋದರರೊಂದಿಗೆ ಮದುವೆಯ ಮಂಟಪಕ್ಕೆ ಹೋಗುವುದನ್ನು ಕಾಣಬಹುದು. ಎಲ್ಲರಿಗೂ ರಕ್ಷಾಬಂಧನ್ ಶುಭಾಶಯಗಳು. ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಆಚರಿಸುವ ಈ ವಿಶೇಷ ಹಬ್ಬವನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಈ ಅದ್ಭುತ, ಸೂಕ್ಷ್ಮ, ಬೆಂಬಲ ಪುರುಷನನ್ನು ಹೊಂದಿರುವುದಕ್ಕೆ ಧನ್ಯಳು. ನಾನು ನಿಮ್ಮೆಲ್ಲರನ್ನೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಎಲ್ಲರಿಗೂ ನನ್ನ ಪ್ರೀತಿ ಹಾಗೂ ಉಡುಗೊರೆಗಳನ್ನು ಕಾಯುತ್ತಿದ್ದೇನೆ' ಎಂದು ಕ್ಯಾಪ್ಷನ್‌ ನೀಡಿದ್ದಾರೆ ಪಿಗ್ಗಿ.
undefined
ನೇಹಾ ಕಕ್ಕರ್ ಸಹೋದರ ಟೋನಿ ಕಕ್ಕರ್ ಅವರ ಕೈಗೆ ಮೇಲೆ ರಾಖಿಯನ್ನು ಕಟ್ಟಿ ಸುಂದರವಾದ ಗಡಿಯಾರವನ್ನು ಗಿಫ್ಟ್‌ ನೀಡಿದ್ದಾರೆ.
undefined
ರಿಷಿ ಕಪೂರ್ ಪುತ್ರಿ ರೀಧಿಮಾ ಕಪೂರ್ ತನ್ನ ಇನ್ಸ್ಟಾಸ್ಟೋರಿಯಲ್ಲಿ ಸಹೋದರರೊಂದಿಗೆ ಫೋಟೋ ಕೊಲಾಜ್ ಫೊಸ್ಟ್‌ ಮಾಡಿದ್ದಾರೆ. ರಣಬೀರ್ ಕಪೂರ್, ನಿಖಿಲ್ ನಂದಾ, ಆದರ್ ಜೈನ್, ಅರ್ಮಾನ್ ಜೈನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ರೀಧಿಮಾ.
undefined
ರಿಯಾ ಕಪೂರ್ ಅಕ್ಕ ಸೋನಮ್ ಕಪೂರ್ ಮತ್ತು ಸಹೋದರ ಹರ್ಷವರ್ಧನ್‌ರನ್ನು ನೆನಪಿಸಿಕೊಂಡು ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ರಾಖಿಯ ಈ ವಿಶೇಷ ದಿನದ ಸಹೋದರ ಸಹೋದರಿಯರ ಪ್ರೀತಿಗೆ ಸೂಕ್ತವಾಗಿದೆ ಈ ವಿಡಿಯೋ.
undefined
ಸೋನಮ್ ಕಪೂರ್ ಸಹೋದರ ಹರ್ಷವರ್ಧನ್ ಕಪೂರ್ ಕೂಡ ಇಬ್ಬರು ಸಹೋದರಿಯರೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.
undefined
click me!