'ನನ್ನ ಪೋಷಕರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರು ನನ್ನನ್ನು ಆಗಾಗ್ಗೆ ಭೇಟಿಯಾಗುತ್ತಿದ್ದರು. ನಾನು ಖಿನ್ನತೆಯಲ್ಲಿದ್ದಾಗಲೂ, ನಾನು ಎಲ್ಲವೂ ಸರಿಯಾಗಿದೆ ಎಂದು ನಾನು ನಟಿಸುತ್ತಿದ್ದೆ. ಆದರೆ ಒಂದು ದಿನ ಅವರು ಬೆಂಗಳೂರಿಗೆ ಹಿಂತಿರುಗುವಾಗ ನಾನು ಬಿಕ್ಕಿಬಿಕ್ಕಿ ಅಳಲು ಪ್ರಾರಂಭಿಸಿದೆ. ಇದಕ್ಕೆ ಬಾಯ್ ಫ್ರೆಂಡ್ ಕಾರಣವಾ? ಕೆಲಸದ ಕಾರಣವಾ? ಏನಾಯಿತು? ಎಂದು ನನ್ನ ತಾಯಿ ಕೇಳಿದಾಗ ನನ್ನ ಬಳಿ ಉತ್ತರವಿರಲಿಲ್ಲ. ಏಕೆಂದರೆ ಆ ರೀತಿಯ ಯಾವುದೇ ತೊಂದರೆ ಇರಲಿಲ್ಲ. ಆದರೆ ನನ್ನ ಜಗತ್ತನಲ್ಲಿ ಏನೋ ಕಡಿಮೆ ಇದೆ ಎಂದು ಅನಿಸುತ್ತಿತ್ತು. ಅವರೇ ನಾನು ಏನೂ ತಿಳಿಸದೆ ಅರ್ಥಮಾಡಿಕೊಂಡರು, ಆ ಸಮಯದಲ್ಲಿ ದೇವರು ಅವರನ್ನು ನನಗಾಗಿ ಕಳುಹಿಸಿದ್ದಾನೆ ಎಂದು ನಾನು ಭಾವಿಸುತ್ತೇನೆ' ಎಂದು ದೀಪಿಕಾ ಮತ್ತೊಂದು ಕಾರ್ಯಕ್ರಮದಲ್ಲಿ, ತಮ್ಮ ಖಿನ್ನತೆಯ ಬಗ್ಗೆ ಹೇಳಿಕೊಂಡಿದ್ದಾರೆ.