ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಆಗಾಗ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್ ಕೊನೆಯದಾಗಿ ಮಹೇಶ್ ಬಾಬು ಜೊತೆ ನಾಯಕಿಯಾಗಿ ನಟಿಸಿದ್ದ ಸರ್ಕಾರು ವಾರಿ ಪಾಟ ಸಿನಿಮಾ ಬಳಿಕ ಮಲಯಾಳಂನ ವಾಶಿ ಅಭಿಮಾನಿಗಳ ಮುಂದೆ ಬಂದಿದ್ದರು.
ಕೀರ್ತಿ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ, ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಸದ್ಯ ಕೀರ್ತಿ ಹೋಸ ಫೂಟೋಶೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮುತ್ತಿನ ಗೌನ್ ನಲ್ಲಿ ಕಂಗೊಳಿಸುತ್ತಿರುವ ಕೀರ್ತಿ ಸುರೇಶ್‌ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಬರುತ್ತಿದೆ.
ಮಹಾನಟಿ ಸಿನಿಮಾ ಸಮಯದಲ್ಲಿ ದಪ್ಪಗೆ ಇದ್ದ ಕೀರ್ತಿ ಸದ್ಯ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ವರ್ಕೌಟ್, ಡಯಟ್ ಅಂತ ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸಿರುವ ಕೀರ್ತಿ ಸದ್ಯ ಬಳಕುವ ಬಳ್ಳಿಯಾಗಿದ್ದಾರೆ. ಕೀರ್ತಿ ಬದಲಾವಣೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಸದ್ಯ ಕೀರ್ತಿ ಸುಂದರ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಮುತ್ತಿನಿಂದ ತಯಾರಿಸಿದ್ದ ಗೌನ್ ಧರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಕೀರ್ತಿ ಧರಿಸಿರುವ ಗೌನ್ ಬೆಲೆ ಬರೋಬ್ಬರಿ 2.25 ಲಕ್ಷ. ಗುಬಾರಿ ಬಟ್ಟೆ ಧರಿಸಿ ಕ್ಯಾಮರಾಗೆ ಮಾದಕ ಪೋಸ್ ನೀಡಿರುವ ಕೀರ್ತಿಯ ಫೋಟೋಗಳು ಪಡ್ಡೆಗಳ ನಿದ್ದೆ ಗೆಡಿಸಿದೆ.
ಕೀರ್ತಿ ಸುರೇಶ್ ಮಹಾನಟಿ ಸಿನಿಮಾ ಮೂಲಕ ದೊಡ್ಡ ಮಟ್ಟದ ಖ್ಯಾತಿಗಳಿಸಿದರು. ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದರು. ಈ ಸಿನಿಮಾ ಬಳಿಕ ಕೀರ್ತಿ ಬೇಡಿಕೆ ಕೂಡ ಹೆಚ್ಚಾಯಿತು. ಈ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ.
ಕೀರ್ತಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಸರ್ಕಾರು ವಾರಿ ಪಾಟ ಸಿನಿಮಾ ನಿರೀಕ್ಷೆಯ ಮಟ್ಟದಲ್ಲಿ ಗೆಲವು ದಾಖಲಿಸಿಲ್ಲ. ಕೀರ್ತಿ ನಟನೆಯ ಸಾಲು ಸಾಲು ಸಿನಿಮಾಗಳು ನೆಲಕಚ್ಚಿವೆ. ರಂಗ್ ದೇ, ಅಣ್ಣಾತೆ, ಗುಡ್ ಲಕ್ ಸಖಿ, ಮಿಸ್ ಇಂಡಿಯಾ ಸೇರಿದಂತೆ ಅನೇಕ ಸಿನಿಮಾಗಳು ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ.
ಕೀರ್ತಿ ಬಳಿ ಸದ್ಯ ಅನೇಕ ಸಿನಿಮಾಗಳಿವೆ. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ. ದಸರ ಮತ್ತು ಬೋಲ ಶಂಕರ ಸಿನಿಮಾಗಳಲ್ಲಿ ಕೀರ್ತಿ ನಟಿಸುತ್ತಿದ್ದಾರೆ. ಕನ್ನಡಕ್ಕೂ ಎಂಟ್ರಿ ಕೊಡ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಕಾದುನೋಡ ಬೇಕು.