ಬ್ರಹ್ಮಾಸ್ತ್ರ 2 ನಲ್ಲಿ ಬಾಲಿವುಡ್ನ ಹಾಟ್ ಜೋಡಿ; ಸಸ್ಪೆನ್ಸ್ ಬಯಲು
ರಣಬೀರ್ ಕಪೂರ್ (Ranbir Kapoor)ಮತ್ತು ಆಲಿಯಾ ಭಟ್ (Alia Bhatt) ಅಭಿನಯದ ಬ್ರಹ್ಮಾಸ್ತ್ರ (Brahmastra) ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯುತ್ತಿದೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮೊತ್ತವನ್ನು ಗಳಿಸಿತು. ವರದಿಗಳ ಪ್ರಕಾರ ಚಿತ್ರವು ಶೀಘ್ರದಲ್ಲೇ 200 ಕೋಟಿ ಕ್ಲಬ್ ಸೇರಲಿದೆ. ಅಯಾನ್ ಮುಖರ್ಜಿ ಈ ಚಿತ್ರದ ಮೂರು ಭಾಗಗಳನ್ನು ಬಿಡುಗಡೆ ಮಾಡಲಿದ್ದಾರ ಮೊದಲ ಭಾಗ ಬ್ರಹ್ಮಾಸ್ತ್ರ: ಶಿವ ಭಾಗ 1 ಬಿಡುಗಡೆಯಾಗಿದೆ. ಈಗ ಅದರ ಎರಡನೇ ಭಾಗ ಅಂದರೆ ಬ್ರಹ್ಮಾಸ್ತ್ರ: ದೇವ್ ಭಾಗ 2 ಬಗ್ಗೆ ಚರ್ಚೆ ನಡೆಯುತ್ತಿದೆ. ಚಿತ್ರದ ಎರಡನೇ ಭಾಗದ ಬಗ್ಗೆ ಅಯಾನ್ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. 2025ರಲ್ಲಿ ಎರಡನೇ ಭಾಗ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ ಮತ್ತು ಚಿತ್ರದ ನಾಯಕನಟನ ಬಗ್ಗೆ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ, ಆದರೆ ಈಗ ಅವರ ಸಸ್ಪೆನ್ಸ್ ಬಯಲಾಗಿದೆ.
ವಾಸ್ತವವಾಗಿ, ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರ ಪತ್ನಿ ಅನುಪಮಾ ಚೋಪ್ರಾ ಆಕಸ್ಮಿಕವಾಗಿ ಚಿತ್ರದ ಎರಡನೇ ಭಾಗದ ಬಗ್ಗೆ ದೊಡ್ಡ ವಿಷಯ ಬಹಿರಂಗಪಡಿಸಿದ್ದಾರೆ. ನಿರ್ಮಾಪಕರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಎರಡನೇ ಭಾಗವನ್ನು ತಯಾರಿಸುತ್ತಾರೆ ಎಂದು ಅನುಪಮಾ ಮಾತುಕತೆಯ ಸಮಯದಲ್ಲಿ ಹೇಳಿದರು.
ಬ್ರಹ್ಮಾಸ್ತ್ರದ ಎರಡನೇ ಭಾಗದ ತಾರಾಗಣವನ್ನು ಅನುಪಮಾ ಚೋಪ್ರಾ ಬಹಿರಂಗಪಡಿಸಿದಾಗಿನಿಂದ, ಇಂಟರ್ನೆಟ್ನಲ್ಲಿ ಸಂಚಲನ ಉಂಟಾಗಿದೆ. ಬಳಕೆದಾರರು ಕೂಡ ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ದೇವ್ ಮತ್ತು ಅಮೃತಾ ಅವರನ್ನು ಉಲ್ಲೇಖಿಸಲಾಗಿದೆ ಮತ್ತು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಈ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊದಲ ಭಾಗದ ಯಶಸ್ಸಿನ ನಂತರ, ಅಯಾನ್ ಮುಖರ್ಜಿ ಈಗ ಎರಡನೇ ಭಾಗದ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರು ಶೀಘ್ರದಲ್ಲೇ ಎರಡನೇ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸುವುದಾಗಿ ಹೇಳಿದ್ದರು.
ಆಲಿಯಾ-ರಣಬೀರ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರದ ಆರಂಭ ಅದ್ಭುತವಾಗಿತ್ತು. ಮೊದಲ ದಿನವೇ ಚಿತ್ರ ಸುಮಾರು 36 ಕೋಟಿ ಬ್ಯುಸಿನೆಸ್ ಮಾಡಿದೆ. ಚಿತ್ರ ಬಿಡುಗಡೆಯಾಗಿ 6 ದಿನ ಕಳೆದಿದ್ದು, ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಸುಮಾರು 165 ಕೋಟಿ ಗಳಿಕೆ ಕಂಡಿದೆ. ಎರಡನೇ ವಾರಾಂತ್ಯದಲ್ಲಿ ಚಿತ್ರ 200 ಕೋಟಿ ಕ್ಲಬ್ ಸೇರಲಿದೆ ಎನ್ನುತ್ತಾರೆ ಟ್ರೇಡ್ ವಿಶ್ಲೇಷಕರು.
ಸಿನಿಮಾ ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರಕ್ಕೆ ಬೇಡಿಕೆ ಬಂದಿತ್ತು. ಆದರೆ, ಸಿನಿಮಾ ಬಿಡುಗಡೆಯಾದ ನಂತರ ಬಹಿಷ್ಕಾರದ ಪರಿಣಾಮ ಸಿನಿಮಾದ ಮೇಲೆ ಕಾಣಲಿಲ್ಲ.
ಈ ಚಿತ್ರದಲ್ಲಿ ರಣಬೀರ್- ಆಲಿಯಾ ಜೊತೆಗೆ ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಹೊಂದಿದ್ದು, ಇದು ಸಾಕಷ್ಟು ಪ್ರಭಾವಶಾಲಿಯಾಗಿದೆ.