ಭೂತಾನ್ ಪ್ರವಾಸದಲ್ಲಿರುವ ದೀಪಿಕಾ ತಂಗಿರುವ ಹೋಟೆಲ್‌ ಹೇಗಿದೆ? ದಿನದ ಖರ್ಚು ಕೇಳಿದ್ರೆ ಅಚ್ಚರಿ ಪಡ್ತೀರಾ!

Published : Apr 16, 2023, 06:24 PM IST

ಭೂತಾನ್ ಪ್ರವಾಸದಲ್ಲಿರುವ ದೀಪಿಕಾ ಪಡುಕೋಣೆ ತಂಗಿರುವ ಹೋಟೆಲ್‌ ಹೇಗಿದೆ ಗೊತ್ತಾ? ದಿನದ ಖರ್ಚು ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಾ! 

PREV
18
ಭೂತಾನ್ ಪ್ರವಾಸದಲ್ಲಿರುವ ದೀಪಿಕಾ ತಂಗಿರುವ ಹೋಟೆಲ್‌ ಹೇಗಿದೆ? ದಿನದ ಖರ್ಚು ಕೇಳಿದ್ರೆ ಅಚ್ಚರಿ ಪಡ್ತೀರಾ!

ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ ಸದ್ಯ ಭೂತಾನ್ ನಲ್ಲಿ ಸಮಯ ಕಳೆಯುತ್ತಿದ್ದಾರೆ. ಬ್ಲಾಕ್ ಬಸ್ಟರ್ ಪಠಾಣ್ ಸಿನಿಮಾದ ಬಳಿಕ ದೀಪಿಕಾ ಮಸ್ತ್ ಮಜಾ ಮಾಡುತ್ತಿದ್ದಾರೆ. ಭೂತಾನ್‌  ಪ್ರವಾಸದಲ್ಲಿರುವ ದೀಪಿಕಾ ಒಂದಿಷ್ಟು ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. 

28

ಭೂತಾನ್‌ ಸುತ್ತಾಡುತ್ತಿರುವ ದೀಪಿಕಾ ಅಲ್ಲಿ ಉಳಿದುಕೊಳ್ಳಲು ದುಬಾರಿ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದಾರೆ. ಸ್ಟಾರ್ ಕಲಾವಿದರು ಅಂದ್ಮೇಲೆ ಐಷಾರಾಮಿ ಜೀವನ ಹೊಸದೇನಲ್ಲ. ಎಲ್ಲೇ ಹೋದರು ತಮ್ಮ ಐಷಾರಾಮಿಗೆ ಯಾವುದೇ ಧಕ್ಕೆ ಆಗದ ಹಾಗೆ ನೋಡಿಕೊಳ್ಳುತ್ತಾರೆ.. 
 

38

ಸದ್ಯ ಭೂತಾನ್ ನಲ್ಲಿ ದೀಪಿಕಾ ತಂಗಿದ್ದ ಹೋಟೆಲ್‌ನ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಒಂದು ರಾತ್ರಿ ಅಲ್ಲೇ ಮಲಗಲು ಲಕ್ಷಗಟ್ಟಲೆ ಕೊಡಬೇಕು. ದೀಪಿಕಾ ಲಕ್ಷಗಟ್ಟಲೇ ಕೊಟ್ಟು ಭೂತಾನ್‌ನಲ್ಲಿ ಕಾಲಕಳೆಯುತ್ತಿದ್ದಾರೆ. 
 

48

ದೀಪಿಕಾ ಪಡುಕೋಣೆ ಭೂತಾನ್‌ನ ಪರೋದಲ್ಲಿ ಇರುವ ಅಮಂಕೋರಾ ಎನ್ನುವ ಐಷಾರಾಮಿ ರೆಸಾರ್ಟ್‌ನಲ್ಲಿ ತಂಗಿದ್ದಾರೆ. ಇದು ಪ್ರಕೃತಿ ಮಧ್ಯ ಇರುವ ಅದ್ಭತ ಸ್ಥಳವಾಗಿದೆ. ಸಾಂಪ್ರದಾಯಿಕ ಶೈಲಿಯಲ್ಲಿರುವ ಈ ರೆಸಾರ್ಟ್ ಎಲ್ಲಾ ಆಧುಕಿನ ಸೌಕರ್ಯಗಳು ಇವೆ.  

58

ಅಮಂಕೋರಾ ರೆಸಾರ್ಟ್ ನೋಡುವುದಕ್ಕೆ ಒಂದು ಅದ್ಭುತ. ಆದರೆ ದೀಪಿಕಾ ಲಕ್ಷಗಟ್ಟಲೇ ಕೊಟ್ಟು ಅಲ್ಲಿಯೇ ತಂಗಿದ್ದಾರೆ. ಸುಂದರವಾಗಿರುವ ರೆಸಾರ್ಟ್‌ನಲ್ಲಿ ತಂಗಬೇಕು ಎಂದರೆ ಲಕ್ಷಗಟ್ಟಲೇ ಸುರಿಯಲೇ ಬೇಕು. 
 

68

ಅಷ್ಟಕ್ಕೂ ಈ ರೆಸ್ಟಾರ್ಟ್ ನಲ್ಲಿ ಒಬ್ಬರಿಗೆ ಒಂದು ದಿನಕ್ಕೆ 2.25 ಲಕ್ಷ ರೂಪಾಯಿ. ನೋಡುವುದಕ್ಕೆ ಅದ್ಭುತವಾಗಿರುವುದ ಮಾತ್ರವಲ್ಲದೇ ಅಲ್ಲಿ ಉಳಿಯಲು ಕೂಡ ಅಷ್ಟೇ ಹಣ ನೀಡಬೇಕು. ಹಾಗಾಗಿ ಇದು ಕೇವಲ ಹಣವಂತರಿಗೆ ಮಾತ್ರ ಸೀಮಿತ. 

78

ದೀಪಿಕಾ ಭೂತಾನ್‌ನ ಸುಂದರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಒಂದಿಷ್ಟು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 

88

ಸಿನಿಮಾ ವಿಚಾರಕ್ಕೆ ಬರುವುದಾದರೇ ದೀಪಿಕಾ ಸದ್ಯ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪಠಾಣ್ ಸಕ್ಸಸ್ ಬಳಿಕ ದೀಪಿಕಾ ಹೃತಿಕ್ರೋಷನ್ ಜೊತೆ ಫೈಟರ್ ಹಾಗೂ ಪ್ರಭಾಸ್ ಜೊತೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories