ಮಗಳು CD ಮುರಿದರೆ, ಜನರು ಏನಿದು ಅಂದ್ರು, ಶಾರುಖ್ ಜೊತೆಗಿನ ಕೊಯ್ಲಾ ಸೀನ್ ಘಟನೆ ಬಿಚ್ಚಿಟ್ಟ ನಟಿ, ಹಲವರು ನನ್ನ ಒಂದು ಸೀನ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟಕ್ಕೂ ಆ ಸೀನ್ ಏನು? ನಟಿ ಹೇಳಿದ್ದೇನು?
ಬಾಲಿವುಡ್ ಸಿನಿಮಾಗಳಲ್ಲಿ ಶಾರುಖ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಅಭಿನಯದ ಕೋಯ್ಲಾ ಅತ್ಯಂತ ಜನಪ್ರಿಯ ಸಿನಿಮಾ. ಭಾರಿ ಮೆಚ್ಚುಗೆ ಗಳಿಸಿದ ಸಿನಿಮಾ. ಈ ಸಿನಿಮಾ ಬಾಲಿವುಡ್ ಜಗತ್ತನ್ನೇ ಅಚ್ಚರಿಗೊಳಿಸಿದ ಸಿನಿಮಾ. ಕಾರಣ ಅಲ್ಲೀವೆಗೆ ಬಾಲಿವುಡ್ ಸಿನಿಮಾದಲ್ಲಿ ಮತ್ತೊಬ್ಬ ನಟಿ ದೀಪ್‌ಶಿಖಾ ನಾಗ್ಪಾಲ್ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಈಕೆ ಬಟ್ಟೆ ಇಲ್ಲದೆ ಒಂದು ಸೀನ್‌ನಲ್ಲಿ ಅಭಿನಯಿಸಿದ್ದಾರೆ.
25
ಸೀನ್ ಹಾಗೂ ಘಟನೆ ಬಿಚ್ಚಿಟ್ಟ ನಟಿ
ಸೀನ್ ಹಾಗೂ ಘಟನೆ ಬಿಚ್ಚಿಟ್ಟ ನಟಿ
ಹಿಂದಿ ರಶ್ ಸಂದರ್ಶನದಲ್ಲಿ ದೀಪ್‌ಶಿಖಾ 28 ವರ್ಷಗಳ ಹಿಂದಿನ ಸೀನ್ ಹಾಗೂ ಅದರ ಬಳಿಕ ನಡೆದ ಘಟನೆಗಳನ್ನು ವಿವರಿಸಿದ್ದಾರೆ. ರಾಕೇಶ್ ರೋಶನ್ ನಿರ್ದೇಶನದ ಕೋಯ್ಲಾ ಸಿನಿಮಾದಲ್ಲಿ ಸೀನ್ ಕುರಿತು ನಟಿಗೆ ವಿವರಣೆ ನೀಡಲಾಗಿತ್ತು. ಸೀನ್ ಚಿತ್ರೀಕರಣ ಸೇರಿದಂತೆ ಹಲವು ಮಾಹಿತಿ ಪಡೆದ ನಟಿ ಮಾನಸಿಕವಾಗಿ ಸಿದ್ಧಳಾಗಿದ್ದೆ. ಬಳಿಕ ಶೂಟಿಂಗ್ ಎಂದು ಇಂಚಿಂಚು ಮಾಹಿತಿ ನೀಡಿದ್ದಾರೆ.
35
ಕ್ಯಾಮೆರಾ ಆ್ಯಂಗಲ್
ಕ್ಯಾಮೆರಾ ಆ್ಯಂಗಲ್
ಬಟ್ಟೆ ಇಲ್ಲದೆ ನಟಿಸಬೇಕಿದ್ದ ಕಾರಣ ಇದಕ್ಕೆ ತಯಾರಿ ಮಾಡಿಕೊಂಡಿದ್ದೆ. ಸ್ಕಿನ್ ಕಲರ್ ಡ್ರೆಸ್ ಹಾಕಿದ್ದೆ. ಜೊತೆಗೆ ಶಾಟ್ಸ್ ಹಾಕಿದ್ದೆ. ಸೀನ್ ಶೂಟಿಂಗ್ ವೇಳೆ ತಾಯಿಯೂ ಜೊತೆಗಿದ್ದರು. ಅಚ್ಚುಕಟ್ಟಾಗಿ ಶೂಟಿಂಗ್ ನಡೆದಿತ್ತು. ಆದರೆ ತೆರೆ ಮೇಲೆ ಇದು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುವ ಸೀನ್ ಆಗಿ ಮೂಡಿ ಬಂದಿತ್ತು. ಎಲ್ಲೆಡೆ ಇದೇ ಮಾತು ಹರಿದಾಡಲು ಆರಂಭಿಸಿತ್ತು ಎಂದು ನಟಿ ದೀಪ್‌ಶಿಖಾ ಹೇಳಿದ್ದಾರೆ.
ಸಿನಿಮಾ ರಿಲೀಸ್ ಬಳಿಕ ಆಪ್ತರು ನನ್ನನ್ನು ಟೀಕಿಸಿದ್ದರು. ಇದೇನು ಮಾಡಿದ್ದೀಯಾ, ಈ ರೀತಿ ಸೀನ್ ಮಾಡುತ್ತಾರಾ, ಬಟ್ಟೆ ಇಲ್ಲದೆ ಎಲ್ಲರ ಮುಂದೆ ಎಂದು ಟೀಕಿಸಿದರು. ನಾನು ಅಳುವುದು ಒಂದೇ ಬಾಕಿ ಇತ್ತು. ನನ್ನ ಮಗಳು ಸಿನಿಮಾ ಸಿಡಿಯನ್ನೇ ಮುರಿದು ಹಾಕಿದ್ದಳು. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು ಎಂದು ನಟಿ ಹೇಳಿದ್ದರೆ.
55
ನಿರ್ದೇಶಕರ ಜಾಣ್ಮೆಯಿಂದ ಶೂಟ್ ಮಾಡಿದ್ದರು
ನಿರ್ದೇಶಕರ ಜಾಣ್ಮೆಯಿಂದ ಶೂಟ್ ಮಾಡಿದ್ದರು
ಈ ಸೀನ್‌ನಲ್ಲಿ ನಾನು ಫುಲ್ ಡ್ರೆಸ್ ಹಾಕಿದ್ದೆ. ಸ್ಕಿನ್ ಕಲರ್ ಸ್ವಿಮ್ ಸೂಟ್, ಶಾಟ್ಸ್ ಧರಿಸಿದ್ದೆ. 1997ರ ಸಮಯವಾಗಿದ್ದ ಕಾರಣ ಪರಿಸ್ಥಿತಿ ಬೇರೆ ಇತ್ತು. ಹೀಗಾಗಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೆ, ಆಪ್ತರಿಂದ ವಿರೋಧ ವ್ಯಕ್ತವಾಗಿತ್ತು. ಈ ಸಿನಿಮಾ ನನಗೆ ಹೆಸರು ತಂದುಕೊಟ್ಟಿತ್ತು. ಆದರೆ ವಿವಾದಕ್ಕೂ ಕಾರಣವಾಯಿತು ಎಂದಿದ್ದಾರೆ.