ಬೆಂಗಳೂರು(ಜೂ. 30) ಕೊರೋನಾ ವಿರುದ್ಧದ ಹೋರಾಟಕ್ಕೆ ಸಿನಿಮಾ ಸ್ಟಾರ್ ಗಲು ತಮ್ಮದೇ ಆದ ರೀತಿ ನೆರವು ನೀಡುತ್ತಾ ಬಂದಿದ್ದಾರೆ. ಸೋನು ಸೂದ್ ಸಾವಿರಾರು ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆಗೆ ಕಳಿಸಿದ್ದರು. ಈಗ ತಮಿಳು ನಟ ಅಜಿತ್ ವಿಭಿನ್ನವಾಗಿ ಕೆಲಸ ಮಾಡುತ್ತಿದ್ದಾರೆ. ದಕ್ಷ ಹೆಸರಿನ ಡ್ರೋಣ್ ಮೂಲಕ ಕೊರೋನಾ ನಿಯಂತ್ರಣ ಮಾಡಲಾಗುತ್ತಿದೆ. ಡ್ರೋಣ್ ಬಳಸಿ ಸಾನಿಟೈಸ್ ಮಾಡಲಾಗುತ್ತಿದ್ದು ಈ ತಂಡದ ಹಿಂದೆ ನಟ ಅಜಿತ್ ಇದ್ದಾರೆ. ಅರ್ಧ ಗಂಟೆಯಲ್ಲಿ ಒಂದು ಎಕರೆ ಜಾಗ ಸಾನಿಟೈಸ್ ಮಾಡುವ ಶಕ್ತಿ ದಕ್ಷನಿಗಿದೆ. ಈ ವಿಚಾರವನ್ನು ಡಿಸಿಎಂ ಅಶ್ವಥ್ ನಾರಾಯಣ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿಯೂ ದಕ್ಷನ ಸಹಾಯ ಪಡೆದುಕೊಳ್ಳಲಾಗುತ್ತದೆ. ಇಂಥ ಸನ್ನಿವೇಶಗಳಲ್ಲಿ ತಂತ್ರಜ್ಞಾನದ ನೆರವು ಅತ್ಯಗತ್ಯ ಎಂದು ಹೇಳಿದ್ದಾರೆ. ತಮ್ಮ ವಿಶಿಷ್ಟ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಅಜಿತ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. Karnataka Deputy Chief Minister C. N. Ashwathnarayan launched a drone-bound. ದಕ್ಷ ಡ್ರೋಣ್ ನಿಂದ ಕರ್ನಾಟಕದಲ್ಲಿ ಕೊರೋನಾ ಸಾನಿಟೈಸ್