ಪುನೀತ್ ಜೊತೆ ನಟಿಸಿದ್ದ ಸಯೇಷಾ ಸೈಗಲ್ ಮದ್ವೆಯಾಗಿದ್ದು 17 ವರ್ಷದ ಹಿರಿಯ ನಟನನ್ನು!

First Published | Apr 4, 2024, 5:58 PM IST

ಯುವರತ್ನ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಮಿಂಚಿದ ನಟಿ ಸಯೇಷಾ ಸೈಗಲ್ ಅವರ ಮುದ್ದಾದ ಫ್ಯಾಮಿಲಿ ಹೇಗಿದೆ ನೀವೇ ನೋಡಿ… 
 

ಯುವರತ್ನ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನೀನಾದೆ ನಾ ನೀನಾದೆ ಎನ್ನುತ್ತಾ ಡುಯೆಟ್ ಹಾಡಿದ ಬೆಡಗಿ ಸಯೇಷಾ ಸೈಗಲ್ (Sayyesha Saigal). ಈಕೆಯ ಮುದ್ದಾದ ಫ್ಯಾಮಿಲಿ ಫೋಟೊ ಸದ್ಯ ವೈರಲ್ ಆಗುತ್ತಿದೆ. 
 

ಸಯೇಷಾ ಸೈಗಲ್ ಮುಂಬೈ ಮೂಲದ ಬೆಡಗಿ ಇವರ ತಂದೆ ತಾಯಿ ಇಬ್ಬರೂ ನಟನಾ ಹಿನ್ನೆಲೆ ಉಳ್ಳವರು. ಸಯೇಷಾ ಸುಮೀತ್ ಸೈಗಲ್ ಮತ್ತು ಶಾಹೀನ್ ಭಾನು ಅವರ ಮಗಳು. ಈ ಮುಂಬೈ ಬೆಡಗಿ ಹಿಟ್ ಆಗಿದ್ದು ಮಾತ್ರ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ. 

Tap to resize

18ನೇ ವಯಸ್ಸಿಗೆ ಸಯೇಷಾ, ಅಖಿಲ್ ಎನ್ನುವ ತೆಲುಗು ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಇವರು ಶಿವಾಯ್, ವಾನ್ಮಗನ್, ಕಾಪಾನ್, ಟೆಡ್ಡಿ ಯುವರತ್ನ ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿಯಾಗಿ ಮಿಂಚಿದರು. 

ಘಜನಿಕಾಂತ್, ಟೆಡ್ಡಿ, ಕಾಪ್ಪನ್ ಸಿನಿಮಾಗಳಲ್ಲಿ ತಮಿಳು ನಟ ಆರ್ಯ ಜೊತೆ ತೆರೆ ಹಂಚಿಕೊಂಡಿದ್ದ ಸಯೇಷಾ ಬಳಿಕ ತನಗಿಂತ 17 ವರ್ಷ ಹಿರಿಯನಾದ ಆರ್ಯನನ್ನು (Aryaa) ಪ್ರೀತಿಸಿ, ಅವರ ಜೊತೆಗೆ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಮದುವೆಯಾದ ಬಳಿಕವೂ ಸಿನಿಮಾದಲ್ಲಿ ಸಯೇಷಾ ನಟಿಸಿದ್ದರು, 2021 ರಲ್ಲಿ ಸಯೇಷಾ- ಆರ್ಯಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಆರಿಯಾನಾ ಎಂದು ಹೆಸರಿಟ್ಟಿದ್ದಾರೆ. ಸದ್ಯ ಮಗುವಿಗೆ ಎರಡು ವರ್ಷ ತುಂಬಿದೆ. ಮಗುವಾದ ಬಳಿಕ ಸಯೇಷಾ ಸಿನಿಮಾಗಳಿಂದ ದೂರವಿದ್ದು, ಮಗುವಿನ ಆರೈಕೆಯಲ್ಲಿ ತೊಡಗಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಯೇಷಾ ಹೆಚ್ಚಾಗಿ ತಮ್ಮ ಮುದ್ದಿನ ಮಗಳು ಅರಿಯಾನ, ಪತಿ ಆರ್ಯ ಹಾಗೂ ಫ್ಯಾಮಿಲಿ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸಯೇಷಾ ತಮ್ಮ ಫ್ಯಾಮಿಲಿ ಲೈಫನ್ನು ತುಂಬಾನೆ ಎಂಜಾಯ್ ಮಾಡ್ತಿದ್ದಾರೆ. 

ಸಯೇಷಾ, ತನಗಿಂತ 17 ವರ್ಷ ಹಿರಿಯನಾಗಿರುವ ನಟ ಆರ್ಯರನ್ನು ಮದುವೆಯಾದಾಗ ಭಾರಿ ಚರ್ಚೆಯಾಗಿತ್ತು. ಇದೀಗ ಮದುವೆಯಾಗಿ 6 ವರ್ಷ ಕಳೆದಿದ್ದು, ಇತ್ತೀಚೆಗಷ್ಟೇ ಅವರು ತಮ್ಮ ವೆಡ್ಡೀಂಗ್ ಆನಿವರ್ಸರಿ (wedding anniversary) ಕೂಡ ಸೆಲೆಬ್ರೇಟ್ ಮಾಡಿದ್ದರು. 

ನಟನೆಯಿಂದ ಸಂಪೂರ್ಣವಾಗಿ ದೂರ ಉಳಿದಿರುವ ಸಯೇಷಾ ಮತ್ತೆ ಸಿನಿಮಾ ರಂಗಕ್ಕೆ ಬರುವಂತೆ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಸಯೇಷಾ ಯಾವಾಗ ನಟನೆಯತ್ತ ಹಿಂದಿರುಗುತ್ತಾರೆ ಕಾದು ನೋಡಬೇಕು. 
 

Latest Videos

click me!