ಸಂಜಯ್ ದತ್ ದುಶ್ಚಟಗಳಿಗೆ ಬೇಸತ್ತು ಬ್ರೇಕಪ್‌ ಮಾಡಿಕೊಂಡು ಭಾರತದ ಶ್ರೀಮಂತ ಉದ್ಯಮಿಯನ್ನು ಮದುವೆಯಾದ ಟಾಪ್‌ ನಟಿ!

First Published | Dec 14, 2023, 1:15 PM IST

ಅನೇಕ ನಟಿಯರು ತಮ್ಮ ಮದುವೆಯ ನಂತರ ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು  ಚಿತ್ರರಂಗವನ್ನು ತೊರೆದರು. ಆದರೆ, ಇತ್ತೀಚಿನ ದಿನಗಳಲ್ಲಿ ನಾಯಕಿಯರು ತಮ್ಮ ಕುಟುಂಬ ಮತ್ತು ವೃತ್ತಿ ಎರಡನ್ನೂ ಸಮವಾಗಿ ನಿರ್ವಹಿಸುತ್ತಿದ್ದಾರೆ. ಆದರೆ ಈ ನಟಿ, ಸಂಜಯ್ ದತ್ ಪ್ರೀತಿಯಲ್ಲಿ ಬಿದ್ದು ಬಳಿಕ ಭಾರತದ ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿ ಆರಾಮ ಜೀವನ ನಡೆಸುತ್ತಿದ್ದಾರೆ.

70 ಮತ್ತು 80 ರ ದಶಕದಲ್ಲಿ ಪ್ರಸಿದ್ಧವಾಗಿರುವ ಈ ನಟಿ  'ಸೌತಾನ್', 'ರಾಕಿ', 'ಕಾರ್ಜ್', 'ಬ್ಯಾಟನ್ ಬ್ಯಾಟನ್ ಮೇ', 'ಯೇ ವಾದ ರಹಾ' ಮತ್ತು 'ದೇಸ್ ಪರ್ದೇಸ್' ಚಿತ್ರಗಳಿಂದ ಚಿತ್ರರಂಗದಲ್ಲಿ ಉತ್ತಂಗದ ಸ್ಥಾನಕ್ಕೇರಿದರು. ಅದು ಬೇರೇ ಯಾರೂ ಅಲ್ಲ ಅಂಬಾನಿ ಕಿರಿಯ ಸೊಸೆ ಟೀನಾ. ಇವರ ಜೀವನವೇ ಒಂದು ಕಥೆಯಂತಿದೆ.

ಭಾರತದ ಬಿಲಿಯನೇರ್ ಅಂಬಾನಿ ಕುಟುಂಬದ ಸೊಸೆಯಾಗಿರುವ ನಟಿ ಚ ಅಲಿಯಾಸ್ ಟೀನಾ ಅಂಬಾನಿ  ಒಂದು ಕಾಲದ ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದರು. ಟೀನಾ  ಅನಿಲ್ ಅಂಬಾನಿ ಅವರ ಪತ್ನಿ, ಅವರು ಮುಖೇಶ್ ಅಂಬಾನಿ ಅವರ ಕಿರಿಯ ಸಹೋದರ.   1991 ರಲ್ಲಿ ಇವರಿಬ್ಬರ ವಿವಾಹವಾಯ್ತು. ಅವರಿಗೆ ಜೈ ಅನ್ಮೋಲ್ ಅಂಬಾನಿ ಮತ್ತು ಜೈ ಅನ್ಶುಲ್ ಅಂಬಾನಿ ಎಂಬ ಇಬ್ಬರು ಮಕ್ಕಳಿದ್ದಾರೆ. 

Tap to resize

ಇನ್ನು ಟೀನಾ ಅಂಬಾನಿ ಅಭಿನಯದ 'ರಾಕಿ' ಚಿತ್ರದ ಬಗ್ಗೆ ಹೇಳಲೇಬೇಕು. ಅದು ಸಂಜಯ್ ದತ್ ಅವರ ಚೊಚ್ಚಲ ಚಿತ್ರವಾಗಿದೆ. ಈ ಚಿತ್ರವು 1981 ರಲ್ಲಿ ಬಿಡುಗಡೆಯಾಯಿತು.  ಇದನ್ನು ಸಂಜಯ್‌ ತಂದೆ ಸುನಿಲ್ ದತ್ ನಿರ್ದೇಶಿಸಿದ್ದರು. ಈ ಚಿತ್ರದ ಚಿತ್ರೀಕರಣದ ವೇಳೆ ಸಾಕಷ್ಟು ಜನಸಂದಣಿ ಇತ್ತು, ಇದರಿಂದಾಗಿ ತಾರಾ ಬಳಗ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು ಎಂದು ಹೇಳಲಾಗುತ್ತದೆ. 

ಚಿತ್ರೀಕರಣದ ಸಮಯದಲ್ಲಿ ಜನಸಂದಣಿಯ ಗುಂಪಿನಿಂದ ವ್ಯಕ್ತಿಯೊಬ್ಬರು ಟೀನಾ ಮುನಿಮ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ, ಇದರಿಂದಾಗಿ ಸಂಜಯ್ ದತ್ ಕೋಪಗೊಂಡು ತಮ್ಮ ಬಟ್ಟೆಗಳನ್ನು ಹರಿದು ಹಾಕಿದರು. ಬಳಿಕ ಇವರಿಬ್ಬರ ಬಗ್ಗೆ ರೂಮರ್‌ ಹಬ್ಬಿತು. ಜೋಡಿಯಾಗಿ ಹಲವು ಕಡೆ ಕಾಣಿಸಿಕೊಂಡರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಸಂಜಯ್ ಯಾವಾಗಲೂ ಅಂತಹ ವದಂತಿಗಳನ್ನು ತಳ್ಳಿಹಾಕಿದರು.
 

ಟೀನಾ ಸಂಜಯ್‌ ಚಿತ್ರರಂಗಕ್ಕೆ ಬರುವ ಮುನ್ನವೇ ಪ್ರಸಿದ್ಧ ನಟಿಯಾಗಿದ್ದರು. ಅನೇಕರ ಪರಿಚಯ ಆಕೆಗಿತ್ತು. ಹೀಗಾಗಿ ಸಂದರ್ಶನವೊಂದರಲ್ಲಿ ದತ್‌ , ನನ್ನ ಹುಡುಗಿ ಅನೇಕ ಪುರುಷರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಳು. ಪ್ರತಿ ಬಾರಿ ನಾನು ಅವಳ ಬಗ್ಗೆ ಕೇಳಿದಾಗ ಅಥವಾ ಓದಿದಾಗ, ನಾನು ಕೋಪದಿಂದ ಹುಚ್ಚನಾಗಿದ್ದೇನೆ. ನಾನು ಕೇಳಿದ್ದು ನಿಜವಲ್ಲ ಎಂದು ಅವಳು ನನಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾಳೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಆದರೆ ನಂಬುತ್ತಿರಲಿಲ್ಲ ಎಂದಿದ್ದರು. 
 

ಟೀನಾ ಮುನಿಮ್ ಮತ್ತು ಸಂಜಯ್ ದತ್ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಎಲ್ಲಿ ಕೂಡ ಮಾತನಾಡದಿದ್ದರೂ, 'ರಾಕಿ' ಬಿಡುಗಡೆಯಾದ ಕೆಲವು ವರ್ಷಗಳ ನಂತರ, ಸ್ಟಾರ್‌ಡಸ್ಟ್ ಮ್ಯಾಗಜೀನ್‌ನೊಂದಿಗೆ ಮಾತನಾಡುತ್ತಾ, ತನ್ನ ತಾಯಿ 1981 ರಲ್ಲಿ  ತೀರಿಕೊಂಡ ನಂತರ ಟೀನಾ ತನ್ನ ಜೀವನದಲ್ಲಿ ಹೇಗೆ ಪ್ರಮುಖ ವ್ಯಕ್ತಿಯಾದಳು ಎಂಬುದನ್ನು ಸಂಜಯ್ ದತ್  ಬಹಿರಂಗಪಡಿಸಿದ್ದರು.
 

ನಾನು ಭಾವನಾತ್ಮಕವಾಗಿ ದುರ್ಬಲ ವ್ಯಕ್ತಿ. ನನಗೆ ಯಾವಾಗಲೂ ನನ್ನ ಮೇಲೆ ಬಲವಾದ ಪ್ರಭಾವದ ಅಗತ್ಯವಿದೆ. ಆ ಪ್ರಭಾವ ನನ್ನ ತಾಯಿ (ನಟಿ ನರ್ಗೀಸ್ ದತ್‌ ). ಅವರ ಮರಣದ ನಂತರ, ಟೀನಾ ಅವರ ಸ್ಥಾನವನ್ನು ಪಡೆದರು. ಅವಳು ನನ್ನ ಜೀವನದಲ್ಲಿ ಪ್ರಾಬಲ್ಯ ಹೊಂದಿದ್ದಾಳೆ, ಹೌದು, ಆದರೆ ನನ್ನ ವೃತ್ತಿಜೀವನದಲ್ಲಿ ಯಾವುದೇ ಮಾತನ್ನು ಹೇಳಲು ನಾನು ಅವಳನ್ನು ಅನುಮತಿಸಲಿಲ್ಲ. ಟೀನಾ ತನ್ನ ಪ್ರತಿಸ್ಪರ್ಧಿಗಳೊಂದಿಗೆ ಕೆಲಸ ಮಾಡುವುದನ್ನು ತಡೆಯಲು ಎಂದಿಗೂ ಪ್ರಯತ್ನಿಸಲಿಲ್ಲ ಎಂದಿದ್ದರು. 
 

ದುರದೃಷ್ಟವಶಾತ್, ಒಬ್ಬರಿಗೊಬ್ಬರು  ಅಪ್ರತಿಮ ಸಂಬಂಧ ಹೊಂದಿದ್ದರೂ, ಅವರ ವರ್ಷಗಳ ಡೇಟಿಂಗ್ ಅಲ್ಪಕಾಲಿಕವಾಗಿತ್ತು . ಜೊತೆಗೆ ಟೀನಾ ಅವರು ಸಂಜಯ್ ಅವರ   ಮಾದಕವಸ್ತು ಮತ್ತು ಮದ್ಯಪಾನದ ಅಭ್ಯಾಸಗಳಿಂದಾಗಿ ಸಂಬಂಧಕ್ಕೆ ತಿಲಾಂಜಲಿ ಹಾಡಿ ದೂರವಾದರು. ಅವರ ಆಫೇರ್‌ ಕಥೆಗಳು ಬಿ-ಟೌನ್‌ನಲ್ಲಿ ಚರ್ಚೆಯ ವಿಷಯವಾಗಿ ಉಳಿದಿವೆ.  ಅದರಲ್ಲೂ ಸಂಜಯ್ ದತ್ (Sanjay Dutt) ಅವರೊಂದಿಗಿನ ಟೀನಾ ಸಂಬಂಧವು ದೀರ್ಘಕಾಲದವರೆಗೆ ಸುದ್ದಿಯಲ್ಲಿತ್ತು.  

 ಫೆಬ್ರವರಿ 11, 1957 ರಂದು ಜನಿಸಿದ ಟೀನಾ ಮುನಿಮ್ (Tina Munim) ಸದ್ಯ 66 ವರ್ಷ ವಯಸ್ಸು. ಮುಂಬೈಯ ಗುಜರಾತಿ ಕುಟುಂಬದಲ್ಲಿ ಜನಿಸಿದ ಈಕೆಗೆ ಮೊದಲಿನಿಂದಲೂ ನಟನೆ ಮತ್ತು ಮಾಡೆಲಿಂಗ್‌ನಲ್ಲಿ ಒಲವಿತ್ತು.  21ನೇ ವಯಸ್ಸಿನಲ್ಲಿ, ಅವರು ದೇಶ್ ಪರದೇಶ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಟೀನಾ, ಚಲನಚಿತ್ರಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ನೆನಪಿನಲ್ಲಿ ಉಳಿದರು. ನಟಿಯ ನಿಷ್ಠಾವಂತ ಅಭಿಮಾನಿಗಳು ಇನ್ನೂ ಅವರ ಸೌಂದರ್ಯವನ್ನು ಮೆಚ್ಚುತ್ತಾರೆ. ಟೀನಾ ಅಂಬಾನಿ ಈಗ ಮದುವೆಯಾಗಿ ಚಿತ್ರರಂಗದಿಂದ ದೂರವಾಗಿದ್ದಾರೆ ಆದರೆ ಇಂಡಸ್ಟ್ರಿಯ ಸ್ನೇಹಿತರ ಜೊತೆ ಹೆಚ್ಚಾಗಿ ಸುತ್ತಾಡುತ್ತಿದ್ದಾರೆ. 

Latest Videos

click me!