ಸ್ವಮರುಕದಿಂದ ಮದ್ಯದ ದಾಸನಾಗಿದ್ದೆ: ಬಾಬಿ ಡಿಯೋಲ್

Suvarna News   | Asianet News
Published : Aug 26, 2020, 02:13 PM IST

90ರ ದಶಕದ ಅಂತ್ಯದಲ್ಲಿ ಗುಪ್ತ್, ಸೋಲ್ಜರ್, ಅಜನಬಿ ಮುಂತಾದ ಹಿಟ್ ಮೇಲೆ ಹಿಟ್ ಚಿತ್ರ ಕೊಟ್ಟ ಬಾಬಿ ಡಿಯೋಲ್, 2000ದ ದಶಕದಲ್ಲಿ ಕೈನಲ್ಲಿ ಚಿತ್ರಗಳೇ ಇಲ್ಲದೆ ಕೂತಿದ್ದರು. ಇದೇ ಸಂದರ್ಭವನ್ನು ಸೋಲಾಗಿ ಕಂಡು ಖಿನ್ನತೆಯಿಂದ ಮದ್ಯದ ದಾಸರಾಗಿದ್ದರು. ಸುಮಾರು 20 ವರ್ಷಗಳ ಬಳಿಕ ಮತ್ತೆ ಬ್ಯುಸಿಯಾಗಿರುವ ನಟ ತನ್ನ ಆಲ್ಕೋಹಾಲ್ ಚಟದ ಬಗ್ಗೆ ಏನ್ ಹೇಳಿದಾರೆ ನೋಡಿ...

PREV
19
ಸ್ವಮರುಕದಿಂದ ಮದ್ಯದ ದಾಸನಾಗಿದ್ದೆ: ಬಾಬಿ ಡಿಯೋಲ್

1995ರಲ್ಲಿ ಬರ್ಸಾತ್ ಚಿತ್ರದ ಮೂಲದ ಬಾಲಿವುಡ್‌ನಲ್ಲಿ ಖಾತೆ ತೆರೆದ ನಟ ಬಾಬಿ ಡಿಯೋಲ್  ಆ ನಂತರದಲ್ಲಿ ಸ್ಟಾರ್ ನಟನಾಗಲು ಹೆಚ್ಚು ಸಮಯ ಬೇಕಾಗಿಲ್ಲ. 

29

ಗುಪ್ತ್, ಸೋಲ್ಜರ್, ಅಜನಬಿ, ಹಮ್ರಾಜ್‌ನಂಥ  ಹಿಟ್ ಚಿತ್ರಗಳನ್ನು ಕೊಡುತ್ತಲೇ ಸಾಗಿದರು. 

39

ಹಾಗಿದ್ದೂ  2000ದ ದಶಕದಲ್ಲಿ ಯಾರೂ ಕೂಡಾ ಬಾಬಿಗೆ ಯಾವುದೇ ಆಫರ್ ಕೊಡಲಿಲ್ಲ. ಈ ಸಂದರ್ಭ ಬಾಬಿಯು ಆತ್ಮವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತು. 

49

ಈ ಸಂದರ್ಭದಲ್ಲಿ ನನ್ನ ಮೇಲೆ ನಾನೇ ಮರುಕಪಟ್ಟುಕೊಂಡೆ. ಯಾರಿಗೂ ನನ್ನ ಜೊತೆ ಕೆಲಸ ಮಾಡಲು ಇಷ್ಟವಿಲ್ಲ ಎಂದು ದುಃಖಿತನಾಗಿ ಮದ್ಯದ ದಾಸನಾದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ ಬಾಬಿ.

59

ಯಾವಾಗ ಮಕ್ಕಳು ತಂದೆ ಇಡೀ ದಿನ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿರುತ್ತಾನೆ ಎಂದು ಮಕ್ಕಳು ಅಂದುಕೊಳ್ಳತೊಡಗಿದ ಮೇಲೆ, ಪತ್ನಿ ಹಾಗೂ ತಾಯಿಯ ಕಣ್ಣಿನಲ್ಲೂ ಅದೇ ಎಮೋಶನ್ ಕಾಣಿಸತೊಡಗಿತಂತೆ.

69

'ಇದಾದ ಬಳಿಕ ನಾನು ಮಾಡುತ್ತಿರುವುದು ತಪ್ಪು ಎಂಬ ಅರಿವಾಯಿತು. ನಾನು ಮುಂದೆ ಹೋಗಬೇಕೆಂದರೆ, ಇನ್ಯಾರೋ ನನ್ನನ್ನು ಪುಶ್ ಮಾಡಲಿ ಎಂದು ಕಾಯಬಾರದು, ನಾನೇ ಸ್ವತಃ ನಡೆಯಬೇಕು ಎಂಬ ಜ್ಞಾನೋದಯವಾಯಿತು. ಆ ನಂತರ ನನ್ನನ್ನು ಉತ್ತಮಪಡಿಸಿಕೊಳ್ಳಲು ಕೆಲಸ ಮಾಡಲಾರಂಭಿಸಿದೆ. ಕಳೆದ ಮೂರು ವರ್ಷಗಳಿಂದ ಬ್ಯುಸಿಯಾಗಿದ್ದೇನೆ' ಎಂದಿದ್ದಾರೆ ಬಾಬಿ. 

79

2018ರಲ್ಲಿ ಬಾಬಿ ರೇಸ್ 3ಯಲ್ಲಿ ಮತ್ತೆ ಕಾಣಿಸಿಕೊಂಡರು. ಸಲ್ಮಾನ್ ಖಾನ್ ತಮಗೆ ಸಹಾಯ ಮಾಡಿದ ಎಂದು ನೆನೆಸಿಕೊಳ್ಳುತ್ತಾರೆ ಅವರು. 

89

ಅದೇ ವರ್ಷ ಯಮ್ಲಾ ಪಗ್ಲಾ ದೀವಾನಾ, ನಂತರ ಹೌಸ್‌ಫುಲ್ 4ಗಳಲ್ಲಿ ಕಾಣಿಸಿಕೊಂಡರು.

99

ಇದೀಗ ಕ್ಲಾಸ್ ಆಫ್ 83 ಎಂಬ ಶಾರೂಖ್ ನಿರ್ಮಾಣದ ನೆಟ್‌ಫ್ಲಿಕ್ಸ್ ಚಿತ್ರಕ್ಕೆ ಸಹಿ ಮಾಡಿದ್ದಾರೆ ಬಾಬಿ. 

click me!

Recommended Stories