ನಾನು ಕೂಡ ಬಾಲು ಜೊತೆ ವಾದ ಮಾಡ್ತಿದ್ದೆ ಅಂತ ಚಿರು ಹೇಳಿದ್ದಾರೆ. ನಾನು ಶುಭಲೇಖ, ಆರಾಧನ, ಸ್ವಯಂಕೃಷಿ, ಆಪದ್ಬಾಂಧವ, ರುದ್ರವೀಣ ತರಹದ ಪರ್ಫಾರ್ಮೆನ್ಸ್ ಮತ್ತು ಸಂದೇಶ ಇರುವ ಸಿನಿಮಾಗಳನ್ನು ಮಾಡಿದ್ದೀನಿ. ಮಾಡದೆ ಇದ್ದಿಲ್ಲ. ಆದರೆ ಮಾಸ್ ಸಿನಿಮಾ ಜಾಸ್ತಿ ಮಾಡೋಕೆ ಒಂದು ಕಾರಣ ಇದೆ. ಅಭಿಮಾನಿಗಳು ನನ್ನಿಂದ ಮಾಸ್ ಸಿನಿಮಾಗಳನ್ನು ನಿರೀಕ್ಷಿಸುತ್ತಾರೆ. ನಿರ್ಮಾಪಕರಿಗೆ ಆ ಸಿನಿಮಾಗಳು ಲಾಭ ತಂದುಕೊಡುತ್ತವೆ.