ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದು ಎರಡು ವರ್ಷವಾಗಿದೆ. ಈಗ ಚಂದನ್ ಒಂಟಿ ಜೀವನ ನಡೆಸ್ತಿದ್ದಾರೆ. ರ್ಯಾಪಿಡ್ ರಶ್ಮಿ ಶೋನಲ್ಲಿ ಪಾಲ್ಗೊಂಡಿದ್ದ ಚಂದನ್- ನಿವೇದಿತಾ ಗೌಡ ಹಾಗೂ ತಮ್ಮ ಮಧ್ಯೆ ಈಗಿರುವ ಸಂಬಂಧವನ್ನು ಸ್ಪಷ್ಟಪಡಿಸಿದ್ದಾರೆ.
ನಿವೇದಿತಾ ಗೌಡ ಮದುವೆಯಾಗಿ ಕೆಲವೇ ವರ್ಷ ಸಂಸಾರ ನಡೆದಿದ್ದ ಚಂದನ್ ಶೆಟ್ಟಿ ಈಗ ವಿಚ್ಛೇದನ ಪಡೆದು ಒಂಟಿ ಜೀವನ ನಡೆಸ್ತಿದ್ದಾರೆ. ಚಂದನ್ ಪ್ರಕಾರ ಒಂಟಿತನ ಮನುಷ್ಯನನ್ನು ಗಟ್ಟಿ ಮಾಡುತ್ತಂತೆ. ಒಂಟಿಯಾಗಿರುವ ವ್ಯಕ್ತಿ ಯಾವುದೇ ಘಟನೆಗೆ ಹೆದರೋದಿಲ್ಲ ಅಂತ ಚಂದನ್ ಹೇಳಿದ್ದಾರೆ.
24
ಯಾವುದೇ ಸಂಬಂಧ ಇಲ್ಲ
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಈಗ್ಲೂ ಸ್ನೇಹಿತರು ಎನ್ನುವ ಸುದ್ಧಿ ಆಗಾಗ ಓಡಾಡ್ತಿರುತ್ತದೆ. ಆದ್ರೆ ಚಂದನ್ ತಮ್ಮಿಬ್ಬರ ಮಧ್ಯೆ ಇರುವ ಸಂಬಂಧವನ್ನು ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಒಪ್ಪಿಗೆ ಮೇಲೆ ವಿಚ್ಛೇದನ ಪಡೆದಿದ್ದೇವೆ. ಡಿವೋರ್ಸ್ ನಂತ್ರ ಯಾವುದೇ ಸಂಬಂಧ ಉಳಿಸಿಕೊಂಡಿಲ್ಲ. ಇಬ್ಬರ ಮಧ್ಯೆ ಯಾವುದೇ ಸ್ನೇಹವಿಲ್ಲ ಎಂದಿದ್ದಾರೆ.
34
ಡಿವೋರ್ಸ್ ಬಗ್ಗೆ ಚಂದನ್ ಬೇಸರ
ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆ ಆದವರು ಚಂದನ್ ಶೆಟ್ಟಿ. ದಾಂಪತ್ಯದಲ್ಲಿ ಯಾರೂ ಇಂಥ ಘಟನೆ ನಡೆಯಬಾರದು ಅಂತಾನೇ ಬಯಸ್ತಾರೆ. ಚಂದನ್ ಕೂಡ ಡಿವೋರ್ಸ್ ಬಯಸಿರಲಿಲ್ಲ. ಆದ್ರೆ ಘಟನೆ ನಡೆದುಹೋಯ್ತು. ಅದ್ರ ಬಗ್ಗೆ ಬೇಸರವಿದ್ರೂ ಜೀವನ ಬಂದಂತೆ ನಡೆಯಬೇಕು ಅಂತ ಚಂದನ್ ಶೆಟ್ಟಿ ಹೇಳಿದ್ದಾರೆ.
ರ್ಯಾಪಿಡ್ ರಶ್ಮಿ ಜೊತೆ ಮಾತನಾಡ್ತಾ ಚಂದನ್, ಕ್ಷಮೆ ಹಾಗೂ ದೇವರ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. ತಪ್ಪು ಮಾಡಿದ್ದೇವೆ ಅಂತ ಗೊತ್ತಾದಾಗ ಕ್ಷಮೆ ಕೇಳೋದು ನೆಮ್ಮದಿ ನೀಡುತ್ತದೆ. ಕ್ಷಮಿಸೋದು ಪ್ರತಿಯೊಬ್ಬನ ಗುಣ. ಆದ್ರೆ ಮುಂದಿರುವ ವ್ಯಕ್ತಿ ಕ್ಷಮಿಸಿಲು ಸಿದ್ಧ ಇಲ್ಲ ಎಂದಾಗ ದೇವರ ಮುಂದೆ ಕ್ಷಮೆ ಕೇಳುವುದು ಉತ್ತಮ ಎಂದು ಚಂದನ್ ಹೇಳಿದ್ದು, ನಿವೇದಿತಾ ಗೌಡ ಮುಂದೆ ಚಂದನ್ ಕ್ಷಮೆ ಕೇಳಿದ್ರೂ ನಿವೇದಿತಾ ಕ್ಷಮಿಸಿರಲಿಲ್ಲವ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.