ಕನ್ನಡ ಚಿತ್ರರಂಗ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ಇದೀಗ ಬಂಪರ್ ಆಫರ್ ಪಡೆದುಕೊಂಡಿದ್ದಾರೆ. ಕನ್ನಡದ ಜೊತೆ, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿಗೆ ಇದೀಗ ಪ್ರಭಾಸ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಆದ್ರೆ ಅದು ನಾಯಕಿ ಪಾತ್ರ ಹೌದೋ ಅಲ್ಲವೇ? ಇಲ್ಲಿದೆ ಮಾಹಿತಿ.
ಸಪ್ತ ಸಾಗರದಾಚೆ ಎಲ್ಲೋ, ಬ್ಲಿಂಕ್, ಟೋಬಿಯಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮ ಅಭಿನಯ ಮತ್ತು ಬೋಲ್ಡ್ ನೆಸ್ ಮೂಲಕ ಜನಮನ ಗೆದ್ದ ಬೆಡಗಿ ಚೈತ್ರಾ ಆಚಾರ್ ಇದೀಗ ಬಹು ದೊಡ್ಡ ಆಫರ್ ಪಡೆದುಕೊಂಡಿದ್ದಾರೆ.
27
ಪ್ರಭಾಸ್ ಗೆ ನಾಯಕಿಯಾಗ್ತಾರ ಟೋಬಿ ಬ್ಯೂಟಿ
ಪ್ರಭಾಸ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಅವರ ಮುಂದಿನ ಸಿನಿಮಾ ಫೌಜಿ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಈ ಪೋಸ್ಟರ್ ಶೇರ್ ಮಾಡಿಕೊಂಡಿರುವ ಚೈತ್ರಾ ಆಚಾರ್ ತಾವು ಸಿನಿಮಾದ ಭಾಗವಾಗಿರೋದಕ್ಕೆ ತುಂಬಾನೆ ಖುಷಿ ಇದೆ ಎಂದಿದ್ದಾರೆ.
37
ಏನು ಹೇಳಿದ್ರು ಚೈತ್ರಾ
ಹನು ರಾಘವಪುಡಿ ಅವರ ಈ ಅದ್ಭುತ ಪರಿಕಲ್ಪನೆಯ ಭಾಗವಾಗಿರೋದಕ್ಕೆ ತುಂಬಾನೆ ಖುಷಿ ಇದೆ. EXCITED!!! ನಮ್ಮ ಇತಿಹಾಸದ ಗುಪ್ತ ಅಧ್ಯಾಯಗಳಿಂದ ಸೈನಿಕನ ಅತ್ಯಂತ ಧೈರ್ಯಶಾಲಿ ಕಥೆ ಇದಾಗಿದೆ. ಎನ್ನುತ್ತಾ ಪ್ರಭಾಸ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಭಾಸ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಹನು ರಾಘವಪುಡಿ ಅವರ ಜೊತೆಗಿನ ಚಿತ್ರದ ಶೀರ್ಷಿಕೆಯನ್ನು ರಿಲೀಸ್ ಮಾಡಲಾಗಿದ್ದು. ಚಿತ್ರಕ್ಕೆ ಅಧಿಕೃತವಾಗಿ ಫೌಜಿ ಎಂದು ಹೆಸರಿಸಲಾಗಿದೆ ಮತ್ತು ಶೀರ್ಷಿಕೆಯ ಜೊತೆಗೆ, ಪ್ರಭಾಸ್ ಅವರ ಫಸ್ಟ್ ಲುಕ್ ಸಹ ಬಿಡುಗಡೆ ಮಾಡಿದ್ದಾರೆ, ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿವೆ.
57
ಚೈತ್ರಾ ಪಾತ್ರ ಇನ್ನೂ ರಿವೀಲ್ ಆಗಿಲ್ಲ
ಪ್ರಭಾಸ್ ಸಿನಿಮಾಕ್ಕಾಗಿ ಕಾಯುತ್ತಿರುವ ಅಭಿಮಾನಿಗಳು ಹೆಚ್ಚಿನ ಅಪ್ ಡೇಟ್ ಗಾಗಿ ಕಾತರದಿಂದ ಕಾಯುತ್ತಿರುವಾಗ, ಸ್ಯಾಂಡಲ್‌ವುಡ್ ನಟಿ ಮತ್ತು ಗಾಯಕಿ ಚೈತ್ರಾ ಜೆ. ಆಚಾರ್ ಈ ಆಕ್ಷನ್ ಸಿನಿಮಾದಲ್ಲಿ ತಾವು ಇರೋದನ್ನು ಕನ್ ಫರ್ಮ್ ಮಾಡಿದ್ದಾರೆ. ಚೈತ್ರಾ ಈ ಹಿಂದೆ, ಅವರು ತಮಿಳಿನ 3BHK ನಂತಹ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ನಾಯಕಿಯಾಗಿ ನಟಿಸುತ್ತಿಲ್ಲ. ಚೈತ್ರಾ ಪಾತ್ರ ಇನ್ನೂ ರಿವೀಲ್ ಆಗಿಲ್ಲ.
67
ಮುಂದಿನ ವರ್ಷ ಸಿನಿಮಾ ಬಿಡುಗಡೆ
ಆಗಸ್ಟ್ 2026 ರಲ್ಲಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಂಡ ಯೋಜಿಸುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಫೌಜಿ ಚಿತ್ರದಲ್ಲಿ ಇಮಾನ್ವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಜಯಪ್ರದಾ, ಮಿಥುನ್ ಚಕ್ರವರ್ತಿ ಮತ್ತು ಅನುಪಮ್ ಖೇರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ ನೀಡಿದ್ದಾರೆ.
77
ಸದ್ಯ ಚೈತ್ರಾ ಕನ್ನಡ ಸಿನಿಮಾಗಳಲ್ಲಿ ಬ್ಯುಸಿ
ಚೈತ್ರಾ ಆಚಾರ್ ಸದ್ಯ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲಿ ಉತ್ತರಕಾಂಡ, ಸ್ಟ್ರಾಬೆರ್ರಿ, ಮಾರ್ನಮಿ, ಎದ್ದೇಳು ಮಂಜುನಾಥ ಸಿನಿಮಾಗಳಲ್ಲಿ ಚೈತ್ರಾ ನಟಿಸುತ್ತಿದ್ದಾರೆ.