ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ ಕೊನೆಯ ಹಂತಕ್ಕೆ ಬಂದಿದೆ. ಕಾನ್ ಚಿತ್ರೋತ್ಸವದಲ್ಲಿ ಅನೇಕ ಸಿನಿ ಗಣ್ಯರು ಭಾಗಿಯಾಗಿದ್ದರು. ರೆಡ್ ಕಾರ್ಪೆಟ್ ವಾಕ್ ಮಾಡಿದರು. ಭಾರತದಿಂದನೂ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ಇನ್ನೂ ಬಹುತೇಕ ಸ್ಟಾರ್ಸ್ ಮೊದಲ ಬಾರಿಗೆ ಕಾನ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.
ವಿಶೇಷ ಎಂದರೆ ಈ ಬಾರಿಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಮತ್ತು ಪತ್ನಿ ಪ್ರಿಯಾ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ಮೊದಲ ಬಾರಿಗೆ ನಿರ್ದೇಶಕ ಅಟ್ಲೀ ಮತ್ತು ಪತ್ನಿ ಕಾನ್‌ನಲ್ಲಿ ಕಾಣಿಸಿಕೊಂಡಿರು.
ಅಟ್ಲೀ ಮತ್ತು ಪತ್ನಿ ಪ್ರಿಯಾ ಇಬ್ಬರೂ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಗಮನ ಸೆಳೆದರು. ಅಟ್ಲೀ ಕುಮಾರ್ ಕಪ್ಪು ಬಣ್ಣದ ಸೂಟ್ ಧರಿಸಿದ್ರೆ ಪ್ರಿಯಾ ಕಪ್ಪು ಸೀರೆಯಲ್ಲಿ ಕಂಗೊಳಿಸಿದರು.
ಇತ್ತೀಚಿಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದ ಪ್ರಿಯಾ ಇದೀಗ ಕಾನ್‌ನಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕಿ ಗಮನ ಸೆಳೆದರು. ಇಬ್ಬರೂ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾ ಪಾಪರಾಜಿಗ ಕಡೆ ಕೈ ಬೀಸುತ್ತಾ ನಡೆದರು. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಿರ್ದೇಶಕ ಅಟ್ಲೀ ಸದ್ಯ ಜವಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಿಂಗ್ ಖಾನ್ ಶಾರುಖ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಶಾರುಖ್ ಖಾನ್ ಜೊತೆ ಕೆಲಸ ಮಾಡಿದ್ದು ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಈ ಮೂಲಕ ನಯನತಾರಾ ಮೊದಲ ಬಾರಿಗೆ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಕೂಡ ನಟಿಸುತ್ತಿದ್ದಾರೆ.