4 ದಿನದಲ್ಲಿ 6 ಸೆಲೆಬ್ರಿಟಿಗಳ ವಿದಾಯ: ಇಬ್ಬರು ಅಪಘಾತಕ್ಕೆ ಬಲಿಯಾದರೆ, ಒಬ್ಬರ ಸಾವು ನಿಗೂಢ!

First Published | May 25, 2023, 8:11 PM IST

ಮನರಂಜನಾ ಪ್ರಪಂಚದಿಂದ ಕೆಟ್ಟ ಸುದ್ದಿಗಳು ನಿರಂತರವಾಗಿ ಬರುತ್ತಿವೆ. ಕಳೆದ 4 ದಿನಗಳಲ್ಲಿ, 6 ಜನಪ್ರಿಯ ಸೆಲೆಬ್ರಿಟಿಗಳು ಜಗತ್ತಿಗೆ ವಿದಾಯ ಹೇಳಿದರು. ಅವರಲ್ಲಿ ಇಬ್ಬರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ, ಒಬ್ಬ ನಟ ನಿಗೂಢ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. 
 

ಸುಚಂದ್ರ ದಾಸ್‌ಗುಪ್ತಾ: ಮೇ 20 ರಂದು 29 ವರ್ಷದ ಬೆಂಗಾಲಿ ನಟಿ ಸುಚಂದ್ರ ದಾಸ್‌ಗುಪ್ತಾ ಜಗತ್ತಿಗೆ ವಿದಾಯ ಹೇಳಿದರು. 'ಗೌರಿ ಎಲೋ' ಬಂಗಾಳಿ ಶೋನಲ್ಲಿ ಕಾಣಿಸಿಕೊಂಡಿದ್ದ ಸುಚಂದ್ರ ದಾಸ್‌ಗುಪ್ತ ಶೂಟಿಂಗ್ ಮುಗಿಸಿ ಆ್ಯಪ್ ಆಧಾರಿತ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಬೈಕ್‌ನ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಸೈಕ್ಲಿಸ್ಟ್‌ನನ್ನು ರಕ್ಷಿಸಲು ಸುಚಂದ್ರ ಜಿಗಿದಿದ್ದಾರೆ ಎಂದು ಹೇಳಲಾಗುತ್ತಿದೆ. ರಸ್ತೆಯಲ್ಲಿ ಬಿದ್ದ ಆಕೆಗೆ ಹಿಂಬದಿಯಿಂದ ಬರುತ್ತಿದ್ದ 10 ಚಕ್ರದ ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ

ರೇ ಸ್ಟೀವನ್ಸನ್: ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರೇ ಸ್ಟೀವನ್ಸನ್ ಈಗ ಈ ಲೋಕದಲ್ಲಿಲ್ಲ. ಮೇ 21ರಂದು ಅವರ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ಬಂದಿತ್ತು. ಆದರೆ, ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಅವರು ತಮ್ಮ 59 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದರು.

Tap to resize

bollywood actor aditya singh rajput found dead at andheri residence nsn

ಆದಿತ್ಯ ಸಿಂಗ್ ರಜಪೂತ್: ಸ್ಪ್ಲಿಟ್ಸ್ವಿಲ್ಲಾ 9' ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ನಟ, ಮಾಡೆಲ್ ಮತ್ತು ಕಾಸ್ಟಿಂಗ್ ಕೋ-ಆರ್ಡಿನೇಟರ್ ಆದಿತ್ಯ ಸಿಂಗ್ ರಜಪೂತ್ ಮೇ 22 ರಂದು ನಿಗೂಢ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಮುಂಬೈನ ಅವರ ಅಪಾರ್ಟ್‌ಮೆಂಟ್‌ನ ವಾಶ್‌ರೂಮ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅವರು ಮಾದಕ ದ್ರವ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಹಲವು ವರದಿಗಳಲ್ಲಿ ಹೇಳಲಾಗುತ್ತಿದೆ. ಆದರೆ, ಆತನ ಸ್ನೇಹಿತರು ಇದನ್ನು ಅಲ್ಲಗಳೆಯುತ್ತಿದ್ದಾರೆ.

Photo Courtesy: Instagram

ನಿತೇಶ್ ಪಾಂಡೆ: ಮೇ 23 ರಂದು ‘ಅನುಪಮಾ’ ಧಾರಾವಾಹಿ ಹಾಗೂ ‘ಓಂ ಶಾಂತಿ ಓಂ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ  ಕಿರುತೆರೆಯ ಪರಿಚಿತ ನಟ ನಿತೇಶ್ ಪಾಂಡೆ ಜಗತ್ತಿಗೆ ವಿದಾಯ ಹೇಳಿದರು. ಶೂಟಿಂಗ್ ನಿಮಿತ್ತ ಮಹಾರಾಷ್ಟ್ರದ ಇಗತ್ಪುರಿಗೆ ತೆರಳಿದ್ದ ಅವರು ಹೋಟೆಲ್ ನಲ್ಲಿ ತಂಗಿದ್ದರು. ಈ ಸಮಯದಲ್ಲಿ, ಅವರು ಹೃದಯ ಸ್ತಂಭನದಿಂದ ನಿಧನರಾದರು.

Vaibhavi Upadhyaya

ವೈಭವಿ ಉಪಾಧ್ಯಾಯ: ಮೇ 23 ರಂದು, 'ಸಾರಾ ಭಾಯ್ ವರ್ಸಸ್ ಸಾರಾ ಭಾಯ್ 2' ಧಾರಾವಾಹಿಯ ನಟಿ ವೈಭವಿ ಉಪಾಧ್ಯಾಯ ಅವರು ಕಾರು ಅಪಘಾತದಲ್ಲಿ ನಿಧನರಾದರು. ನಿಶ್ಚಿತ ವರ ಸುರೇಶ್ ಗಾಂಧಿ ಅವರೊಂದಿಗೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಅವರ ಫಾರ್ಚೂನರ್ ಕಾರು ನಿಯಂತ್ರಣ ತಪ್ಪಿ ಬಂಜಾರಿನ ತೀರ್ಥನ್ ಕಣಿವೆ ಬಳಿ 50 ಅಡಿ ಆಳದ ಕಮರಿಗೆ ಬಿದ್ದು ವೈಭವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

sharath babu

ಶರತ್ ಬಾಬು: ತಮಿಳು ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟ ಶರತ್ ಬಾಬು ಮೇ 22 ರಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.

Latest Videos

click me!