ಗೆಲುವೇ ಕಾಣದ ಅಣ್ಣ-ತಂಗಿ, ಗಂಟು ಮೂಟೆ ಕಟ್ಟಿ ಸಿನಿಮಾ ಲೋಕದಿಂದಲೇ ದೂರ, ಅಪ್ಪ ಮಾತ್ರ ಸೂಪರ್‌ಸ್ಟಾರ್‌!

First Published | Dec 8, 2023, 3:15 PM IST

ಬಾಲಿವುಡ್‌ನ ಅನೇಕ ಸ್ಟಾರ್ ಮಕ್ಕಳು ತಮ್ಮ ಪೋಷಕರ ಸ್ಟಾರ್‌ಡಮ್‌ನಿಂದ ಚಾನ್ಸ್ ಗಿಟ್ಟಿಸಿಕೊಂಡು ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಅಂತಹ ಅನೇಕ ಕಲಾವಿದರಲ್ಲಿ ಈ ಇಬ್ಬರು ಅಣ್ಣ-ತಂಗಿಯನ್ನು ಪ್ರೇಕ್ಷಕರು ಎಂದಿಗೂ ಸ್ವೀಕಾರ ಮಾಡಲೇ ಇಲ್ಲ. ಇಬ್ಬರೂ ಗಂಟು ಮೂಟೆ ಕಟ್ಟಿಕೊಂಡು ಸಿನಿಮಾ ಲೋಕದಿಂದಲೇ ದೂರವಾದರು. 

ಹೆತ್ತವರ ಸ್ಟಾರ್‌ಡಮ್‌ನಿಂದ ಚಾನ್ಸ್ ಗಿಟ್ಟಿಸಿಕೊಂಡು ಬಂದವರು  ಹಿರಿಯ ನಟ ರಾಜ್ ಕುಮಾರ್ ಅವರ ಮಗ ಪುರು ರಾಜ್ ಕುಮಾರ್ ಮತ್ತು ಮಗಳು ವಾಸ್ತವಿಕ ರಾಜ್ ಕುಮಾರ್. ಈ ಇಬ್ಬರೂ ಸ್ಟಾರ್ ಮಕ್ಕಳು ತಮ್ಮ ತಂದೆಯ ಸ್ಟಾರ್‌ಡಮ್ ಹೊರತಾಗಿಯೂ ಪ್ರೇಕ್ಷಕರಿಂದ ಸಂಪೂರ್ಣವಾಗಿ ತಿರಸ್ಕರಿಸಲ್ಪಟ್ಟರು. ಸತತ ಫ್ಲಾಪ್ ಚಿತ್ರಗಳ ನಂತರ ಅಣ್ಣ-ತಂಗಿ ಇಬ್ಬರೂ ಮೂಟೆ ಕಟ್ಟಿಕೊಂಡು ಸಿನಿಮಾ ಲೋಕದಿಂದ ದೂರವಾದರು. 

ಹಿರಿಯ ನಟ ರಾಜ್ ಕುಮಾರ್ ತಮ್ಮ ಡೈಲಾಗ್ ಡೆಲಿವರಿ ಮತ್ತು ನಟನೆಗಾಗಿ ಬಾಲಿವುಡ್‌ನಲ್ಲಿ ಪ್ರಸಿದ್ಧರಾಗಿದ್ದರು. ಅವರು ನಮ್ಮ ನಡುವೆ ಇಲ್ಲದಿರಬಹುದು ಆದರೆ ಶಕ್ತಿಯುತ ಧ್ವನಿ ಮತ್ತು ಆಸಕ್ತಿದಾಯಕ ನಟನೆಯ ಬಗ್ಗೆ ಮಾತನಾಡುವಾಗ, ರಾಜ್ ಕುಮಾರ್ ಅವರ ಹೆಸರು ಎಲ್ಲರ ಬಾಯಲ್ಲಿ ಮೊದಲು ಬರುತ್ತದೆ. ರಾಜ್ ಕುಮಾರ್ ಅವರು 60 ರಿಂದ 80 ರ ದಶಕದವರೆಗೆ ಪ್ರೇಕ್ಷಕರನ್ನು ಆಳಿದರು. ಅವರು ಆ ಕಾಲದ ಸೂಪರ್ ಸ್ಟಾರ್ ಆಗಿದ್ದಾರೆ. 

Tap to resize

ರಾಜ್ ಕುಮಾರ್ ಸಿನಿಮಾದಲ್ಲಿ ನಟಿಸಿದರೆ ಅದು ಹಿಟ್ ಆಗುವುದು ಗ್ಯಾರಂಟಿ ಎನ್ನುವ ಕಾಲವೊಂದಿತ್ತು. ರಾಜ್ ಕುಮಾರ್ ಅಭಿನಯದ 'ಪೈಘಂ', 'ವಕ್ತ್', 'ನೀಲ್ ಕಮಾಲ್', 'ಪಾಕೀಜಾ', 'ಮರ್ಯಾದಾ', 'ಹೀರ್ ರಾಂಜಾ', 'ಸೌದಾಗರ್', ಮತ್ತು 'ಕ್ರಾಂತಿವೀರ್' ಮುಂತಾದ ಉತ್ತಮ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ. 

ಅವರ ವೈಯಕ್ತಿಕ ಜೀವನವೂ ಸದಾ ಸುದ್ದಿಯಲ್ಲಿತ್ತು. ರಾಜ್ ಕುಮಾರ್ ಅವರು ಜೆನ್ನಿಫರ್ ಎಂಬ ಗಗನಸಖಿಯನ್ನು ಮದುವೆಯಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ರಾಜ್ ಕುಮಾರ್ ಅವರನ್ನು ಮದುವೆಯಾದ ನಂತರ, ಜೆನ್ನಿಫರ್ ಹಿಂದೂ ಸಂಪ್ರದಾಯಗಳ ಪ್ರಕಾರ ತನ್ನ ಹೆಸರನ್ನು ಗಾಯತ್ರಿ ಎಂದು ಬದಲಾಯಿಸಿಕೊಂಡರು. ರಾಜ್ ಕುಮಾರ್ ಮತ್ತು ಗಾಯತ್ರಿ ಅವರಿಗೆ ಮೂವರು ಮಕ್ಕಳಿದ್ದರು - ಪುರು ರಾಜ್ ಕುಮಾರ್, ಪಾಣಿನಿ ರಾಜ್ ಕುಮಾರ್, ಮತ್ತು ವಾಸ್ತವಿಕ್ತ ರಾಜ್ ಕುಮಾರ್. 

ರಾಜ್ ಕುಮಾರ್ ಅವರಂತೆಯೇ, ಅವರ ಮೊದಲ ಮಗ ಪುರು ರಾಜ್ ಕುಮಾರ್ ಮತ್ತು ಮಗಳು ವಾಸ್ತವಿಕತಾ ತಂದೆಯಂತೆಯೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.  ಆದರೆ ಇಬ್ಬರೂ ಬಾಲಿವುಡ್‌ನಲ್ಲಿ ದೊಡ್ಡ ಫ್ಲಾಪ್‌ಗಳಾದರು. 

ಪುರು ರಾಜ್ ಕುಮಾರ್ 1996 ರಲ್ಲಿ 'ಬಾಲ ಬ್ರಹ್ಮಚಾರಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಪುರು ರಾಜ್ ಕುಮಾರ್ ಅವರು 16 ಚಿತ್ರಗಳಲ್ಲಿ ಹಲವು ಪಾತ್ರಗಳನ್ನು ಮಾಡಿದ್ದಾರೆ. ಆದರೆ ಅವರು ಎಂದಿಗೂ ತೆರೆಯ ಮೇಲೆ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ ಎಂಬುದು ಸತ್ಯ. ಪುರು ಕೊನೆಯ ಬಾರಿಗೆ 2014 ರಲ್ಲಿ 'ಆಕ್ಷನ್ ಜಾಕ್ಸನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಆದರೆ ಇಲ್ಲಿಯೂ ಅವರಿಗೆ ಯಾವುದೇ ವಿಶೇಷ ಮನ್ನಣೆ ಸಿಗಲಿಲ್ಲ. ಹೀಗಾಗಿ ಕಳೆದ 7 ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. 

52ರ ಹರೆಯದ ಪುರು ಬಹಳ ದಿನ ಎಲ್ಲಿದ್ದರು, ಏನು ಮಾಡುತ್ತಿದ್ದಾರೆ? ಈ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಯಾರಿಗೂ ತಿಳಿದಿಲ್ಲ. ಚಿತ್ರರಂಗದ ಜೊತೆಗೆ ಪುರು ಕೂಡ ಜನಮನದಿಂದ ದೂರವಾಗಿದ್ದಾರೆ. ಪುರು ಅವರಂತೆಯೇ, 1996 ರಲ್ಲಿ ಬಾಲಿವುಡ್ ಪ್ರವೇಶಿಸಿದ ಅವರ ಸಹೋದರಿ ವಾಸ್ತವಿಕ್ತಾ ಅವರಿಗೂ ಅದೇ ಅದೃಷ್ಟ ಬಂದಿತು. ಆದರೆ ಒಂದು ದಶಕ ಕೆಲಸ ಮಾಡಿದ ನಂತರವೂ ಅವರು ಯಶಸ್ವಿಯಾಗಲಿಲ್ಲ. ವಾಸ್ತವಿಕ್ತಾ  ಬಹಳ ದಿನಗಳಿಂದ ಚಿತ್ರರಂಗದಲ್ಲಿ ಕಾಣಿಸಿಕೊಂಡಿಲ್ಲ. 

Latest Videos

click me!