ಅನಿಮಲ್ ಚಿತ್ರ 500 ಕೋಟಿ ರೂ. ಗಳಿಕೆ ಬೆನ್ನಲ್ಲಿಯೇ ಮಹಾರಾಣಿ ಲುಕ್ ಕೊಟ್ಟ ರಶ್ಮಿಕಾ!

Published : Dec 07, 2023, 08:49 PM IST

ಮುಂಬೈ (ಡಿ.07): ಬಾಲಿವುಡ್​ ನಟ ರಣಬೀರ್​ ಕಪೂರ್​ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್​​ ಚಿತ್ರ ಬಿಡುಗಡೆಯಾಗಿ ಕೇವಲ 6 ದಿನಗಳಲ್ಲಿ ಬರೋಬ್ಬರಿ 500 ಕೋಟಿ ರೂ. ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದೆ. ಇದರ ಬೆನ್ನಲ್ಲಿಯೇ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮಹಾರಾಣಿಯ ಪೋಸ್ ಕೊಟ್ಟಿದ್ದಾರೆ.

PREV
18
ಅನಿಮಲ್ ಚಿತ್ರ 500 ಕೋಟಿ ರೂ. ಗಳಿಕೆ ಬೆನ್ನಲ್ಲಿಯೇ ಮಹಾರಾಣಿ ಲುಕ್ ಕೊಟ್ಟ ರಶ್ಮಿಕಾ!

ಅನಿಮಲ್ ಚಿತ್ರ ಒಂದು ವಾರದಲ್ಲಿಯೇ 500 ಕೋಟಿ ರೂ.ಗಿಂತ ಅಧಿಕ ಮೊತ್ತ ಗಳಿಸಿದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣಗೂ ಎಲ್ಲೆಡೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

28

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಿಂಪಲ್ ಸೀರೆಯನ್ನು ಧರಿಸಿ ಕತ್ತಿಗೆ ಸರ, ಕೈಗೆ ಉಂಗುರ ಹಾಗೂ ಕೈತುಂಬಾ ಬಳೆಗಳನ್ನು ಧರಿಸಿ ಮಹಾರಾಣಿಯಂತೆ ಪೋಸ್ ಕೊಟ್ಟಿದ್ದಾರೆ.
 

38

ಬಾಲಿವುಡ್‌ನಲ್ಲಿ ಗಲ್ಲಾ ಪೆಟ್ಟಿಗೆ ಕಮಾಲ್ ಮಾಡುತ್ತಿರುವ ಅನಿಮಲ್ ಚಿತ್ರದ ಗೆಲುವಿನಲ್ಲಿ ರಶ್ಮಿಕಾ ತೇಲಾಡುತ್ತಿದ್ದಾರೆ. ಬರೋಬ್ಬರಿ 6 ಚಿತ್ರಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ರಶ್ಮಿಕಾಗೆ ಎಲ್ಲೆಡೆ ಭರ್ಜರಿ ಮರ್ಯಾದೆ ಸಿಗುತ್ತಿದೆ.

48

ರಶ್ಮಿಕಾ ಮಂದಣ್ಣ ಮೊನ್ನೆ ಮೊನ್ನೆ ತಾನೆ 1 ಕೋಟಿ, 2 ಕೋಟಿ ರೂ. ನಂತೆ ಸಂಭಾವನೆ ಪಡೆಯುತ್ತಿದ್ದ ರಶ್ಮಿಕಾ ಮಂದಣ್ಣ ಅನಿಮಲ್ ಚಿತ್ರ ಗೆಲ್ಲುತ್ತಿದ್ದಂತೆಯೇ ಸಂಭಾವನೆ ಮೊತ್ತವನ್ನು 4 ಕೋಟಿ ರೂ.ಗೆ ಹೆಚ್ಚಳ ಮಾಡಿಕೊಂಡಿದ್ದಾರೆ.

58

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಕ್ರಿಯವಾಗಿರುವ ರಶ್ಮಿಕಾ ಮಂದಣ್ಣ ಅವರು ಆಗಿಂದಾಗ್ಗೆ ಅವರ ಚೆಂದ ಫೊಟೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
 

68

ಕರ್ನಾಟಕದ ಬೆಡಗಿ ಬಾಲಿವುಡ್‌ನಲ್ಲಿ ಗೆಲ್ಲುತ್ತಿದ್ದಂತೆ ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಂ ಖಾತೆಯ ಫಾಲೋವರ್ಸ್ ಸಂಖ್ಯೆಯೂ ಅಧಿಕವಾಗಿದೆ. ಕಳೆದ ವಾರ ಕೇವಲ 30 ಮಿಲಿಯನ್ ಸಮೀಪದಲ್ಲಿದ್ದ ಫಾಲೋವರ್ಸ್ ಸಂಖ್ಯೆ ಈಗ ಬರೋಬ್ಬರಿ 40 ಮಿಲಿಯನ್‌ಗೆ ಹೆಚ್ಚಳವಾಗಿದೆ.

78

ಮತ್ತೊಬ್ಬ ಅಭಿಮಾನಿ ಅನಿಮನ್ ಚಿತ್ರದ ನಂತರ ನೀವು ಎಷ್ಟು ಜನರ ಕ್ರಶ್ ಆಗಿದ್ದೀರಿ ಗೊತ್ತಾ ರಶ್ಮಿಕಾ? ಎಂದು ಪ್ರಶ್ನೆ ಮಾಡಿದ್ದಾನೆ. ಇನ್ನು ಕಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಇಮೋಜಿಗಳ ಸುರಿಮಳೆಯೇ ತುಂಬಿಕೊಂಡಿದೆ.

88

ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ಫೋಟೋ ಶೇರ್‌ ಮಾಡುತ್ತಿದ್ದಂತೆ ನೀವು ಅಪ್ಪಟ ರಾಣಿಯಂತೆ ಕಂಗೊಳಿಸುತ್ತಿದ್ದೀರಿ ಎಂದು ಫ್ಯಾನ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories