ಮುಂಬೈ, ಹೈದರಾಬಾದ್, ಚೆನ್ನೈ ಅಂತ ಸದಾ ಓಡಾಡುತ್ತಿರುತ್ತಾರೆ. ಸದ್ಯ ಬಾಲಿವುಡ್‌ನ ಗುಡ್‌ಬೈ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮೊದಲ ಹಿಂದಿ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಗುಡ್‌ಬೈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಸಿನಿಮಾತಂಡ ಪ್ರಮೋಷನ್ ನಲ್ಲಿ ನಿರತವಾಗಿದೆ. ರಶ್ಮಿಕಾ ಮುಂಬೈನಲ್ಲಿ ಪ್ರಮೋನ್ ಮಾಡುತ್ತಿದ್ದಾರೆ.