ಬಾಲಿವುಡ್ ನಟಿ ಅನನ್ಯಾ ಪಾಂಡೆ ಶೇರ್ ಮಾಡಿರುವ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಿ ಟೌನ್‌ನ ಗ್ಲಾಮರಸ್ ನಾಯಕಿಯರಲ್ಲಿ ನಟಿ ಅನನ್ಯಾ ಪಾಂಡೆ ಕೂಡ ಒಬ್ಬರು. ಆಗಾಗ ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಅನನ್ಯಾ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಆದರೂ ಅನನ್ಯಾ ಸದಾ ಸುದ್ದಿಯಲ್ಲಿರುತ್ತಾರೆ.
26
ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುವ ಅನನ್ಯಾ ಇದೀಗ ಮತ್ತೆ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಇತ್ತೀಚಿಗಷ್ಟೆ ಹಾಟ್ ಫೋಟೋ ಶೇರ್ ಮಾಡಿದ್ದ ಅನನ್ಯಾ ಮತ್ತೆ ಬೋಲ್ಡ್ ಅವತಾರ ತಾಳಿದಿದ್ದಾರೆ. ಪ್ಯಾಂಟ್ ಧರಿಸದೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಪೋಸ್ ನೀಡಿದ ಅನನ್ಯಾಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
36
ಬಿಳಿ ಬಣ್ಣದ ಡ್ರೆಸ್ ಧರಿಸಿರುವ ಅನನ್ಯಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ವಿಮ್ ಸೂಟ್ ಹಾಗೆ ಇರುವ ಡ್ರೆಸ್ ನಲ್ಲಿ ಅನನ್ಯಾ ತರಹೇವಾರಿ ಪೋಸ್ ನೀಡಿದ್ದಾರೆ. ಅನನ್ಯಾ ಅವತಾರ ಕಂಡು ಅಭಿಮಾನಿಗಳು ದಂಗ್ ಆಗಿದ್ದಾರೆ. ಪ್ಯಾಂಟ್ ಎಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಟ್ರೋಲ್ ಮಾಡುತ್ತಿದ್ದಾರೆ.
46
ಅನನ್ಯಾ ಪಾಂಡೆ ಫೋಟೋಗಳುಗೆ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಅಭಿಮಾನಿಗಳ ಜೊತೆಗೆ ಸಿನಿ ಗಣ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಫರ್ಹಾ ಖಾನ್ ಕಾಮೆಂಟ್ ಮಾಡಿ ಈ ಫೋಟೋಶೂಟ್ ಇಷ್ಟವಾಯಿತು, ಯಾರು ಶೂಟ್ ಮಾಡಿದ್ದು ಎಂದು ಕೇಳಿದ್ದಾರೆ. ಒಬ್ಬರು ಒಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ.
56
ನಟಿ ಅನನ್ಯಾ ಪಾಂಡೆ 2019ರಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟರು. ಸ್ಟೂಡೆಂಟ್ ಆಫ್ ದಿ ಇಯರ್ 2 ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. ನಾಲ್ಕೈದು ಸಿನಿಮಾಗಳಲ್ಲಿ ಮಿಂಚಿರುವ ಅನನ್ಯಾಗೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಕ್ಕಿಲ್ಲ. ಕೊನೆಯದಾಗಿ ಅನನ್ಯಾ ಪಾಂಡೆ ಲೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು.
66
ಲೈಗರ್ ಸಿನಿಮಾ ಮೂಲಕ ಅನನ್ಯಾ ಮೊದಲ ಬಾರಿಗೆ ಸೌತ್ ಸಿನಿಮಾರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಮೊದಲ ಬಾರಿಗೆ ತೆರೆಹಂಚಿಕೊಂಡರು. ಭಾರಿ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಕೂಡ ಹೀನಾಯ ಸೋಲು ಕಂಡಿತು. ಸದ್ಯ ಅನನ್ಯಾ ಪಾಂಡೆ ಡ್ರೀಮ್ ಗರ್ಲ್-2ನಲ್ಲಿ ಬ್ಯುಸಿಯಾಗಿದ್ದಾರೆ.